ಅಧ್ಯಕ್ಷರಾಗಿ ನಾಸೀರ್ ಅಹ್ಮದ್ ಸಾಮಣಿಗೆ ಪುನರಾಯ್ಕೆ
ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವರ್ತಕರ ಸಂಘದ ವಾರ್ಷಿಕ ಸಭೆ

ಉಳ್ಳಾಲ, ನ. 8: ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವರ್ತಕರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.
ವರ್ತಕರ ಸಂಘದ ಅಧ್ಯಕ್ಷರಾಗಿ ನಾಸೀರ್ ಅಹ್ಮದ್ ಸಾಮಣಿಗೆ ಪುನರಾಯ್ಕೆಗೊಂಡರು.
ಗೌರವಾಧ್ಯಕ್ಷರಾಗಿ ಅಹ್ಮದ್ ಹುಸೈನ್, ಮೊಯ್ದಿನ್ ಕುಂಞಿ, ಉಪಾಧ್ಯಕ್ಷರಾಗಿ ಸುಹೈಬ್, ತೌಫಿಕ್, ಪ್ರಧಾನ ಕಾರ್ಯದರ್ಶಿಯಾಗಿ ಆನಂದ್ ಶೆಟ್ಟಿ, ಕೋಶಾಧಿಕಾರಿಯಾಗಿ ಮಹಮ್ಮದ್ ಹನೀಫ್, ಕಾರ್ಯದರ್ಶಿಗಳಾಗಿ ಹಮೀದ್ ಹಸನ್, ರವೀಂದ್ರ, ಸಮೀರ್, ಜೊತೆ ಕಾರ್ಯದರ್ಶಿಯಾಗಿ ಖಾಸಿಂ, ಖಲೀಲ್, ಆಲ್ವಿನ್ ಡಿಸೋಜಾ, ಕಾನೂನು ಸಲಹೆಗಾರರಾಗಿ ಫೈಝಲ್, ಪತ್ರಿಕಾ ಕಾರ್ಯದರ್ಶಿ ಮೊಹ್ಶಿರ್ ಸಾಮಣಿಗೆ, ಇಕ್ಬಾಲ್, ಸಲಹೆಗಾರರಾಗಿ ರೋಶನ್, ಖಾಲಿದ್, ಝಾಯಿನ್, ಮೋಹನ್, ಸಂಘಟನಾ ಕಾರ್ಯದರ್ಶಿಯಾಗಿ ಖಲೀಲ್, ಸಮೀರ್, ಸದಸ್ಯರಾಗಿ ರಝಾಕ್ ಎಸ್.ಆರ್, ನಿಸಾರ್, ರಮೇಶ್ ಪಿಲಾರ್, ಮುಝಮಿರ್, ಮೊಯ್ದಿನ್, ಅಬ್ಬಾಸ್ ಎಂ.ಕೆ, ದಾಮೋದರ್ ಎಸ್, ಇಬ್ರಾಹಿಂ ಉಚ್ಚಿಲ, ಅಬ್ದುಲ್ ರಹಿಮಾನ್ ಮೊದಲಾದವರು ಆಯ್ಕೆಯಾದರು.





