ಎಸೆಸೆಲ್ಸಿ ನಂತರ ಮುಂದೇನು? ಕೆರಿಯರ್ ಗೈಡೆನ್ಸ್ ಶಿಬಿರ
ಮಂಗಳೂರು, ನ. 8: ಎಸೆಸೆಲ್ಸಿ ನಂತರದ ಕಲಿಕೆಗೆ ನೂರಾರು ಅವಕಾಶಗಳು ಹಾಗೂ ಬದುಕನ್ನು ಕಟ್ಟಿಕೊಳ್ಳಲು ಹಲವು ದಾರಿಗಳಿದ್ದು ವಿದ್ಯಾರ್ಥಿಗಳು ಮತ್ತವರ ಪೋಷಕರಿಗೆ ಗೊಂದಲ ಸಹಜ. ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುವ ಕೆರಿಯರ್ ಗೈಡೆನ್ಸ್ ಶಿಬಿರವನ್ನು ನಗರದ ಕೆರಿಯರ್ ಗೈಡೆನ್ಸ್ ಆಂಡ್ ಇನ್ಫೊರ್ಮೇಶನ್ ಸೆಂಟರ್ ಹಮ್ಮಿಕೊಂಡಿದೆ.
ನ. 12ರಂದು ಬೆಳಗ್ಗೆ 9.30ರಿಂದ 12 ರತನಕ ನಡೆಯಲಿರುವ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಕೌಶಲ್ಯ, ನೆನಪಿನ ಶಕ್ತಿಯ ಅಭಿವೃದ್ದಿ, ಪರೀಕ್ಷಾ ಪೂರ್ವ ತಯಾರಿ, ಎಸೆಸೆಲ್ಸಿ ನಂತರ ಕಲಿಕೆಗಿರುವ ನೂರಾರು ಅವಕಾಶಗಳು, ಅತ್ತ್ಯುತ್ತಮ ಕೋರ್ಸುಗಳನ್ನು ಆಯ್ಕೆ ಮಾಡುವ ವಿಧಾನಗಳು ಮುಂತಾದ ವಿಷಯಗಳ ಕುರಿತಂತೆ ಮಾಹಿತಿ, ಮಾರ್ಗದರ್ಶನ ನೀಡಲಾಗುವುದು.
ಪ್ರವೇಶ ಉಚಿತವಾಗಿದ್ದು, ವಿದ್ಯಾರ್ಥಿ/ವಿದ್ಯಾರ್ಥಿನಿಯರೊಂದಿಗೆ ಪೋಷಕರು/ಹೆತ್ತವರ ಭಾಗವಹಿಸುವಿಕೆ ಕಡ್ಡಾಯವಾಗಿದೆ. ಆಸಕ್ತರು ಹೆಸರು ನೋಂದಾವಣೆಗೆ ದಿ ಕ್ಯಾಂಪಸ್ ಕೆರಿಯರ್ ಅಕಾಡೆಮಿ, 2ನೇ ಮಹಡಿ, ಅಲ್ ರಹಬಾ ಪ್ಲಾಝಾ, ನೆಲ್ಲಿಕಾಯಿ ರಸ್ತೆ, ಮಂಗಳೂರು 575001 ದೂ. ಸಂ. 08244261320, 9845054191ನ್ನು ಸಂಪರ್ಕಿಸಬಹುದೆಂದು ಕೆರಿಯರ್ ಗೈಡೆನ್ಸ್ ಆಂಡ್ ಇನ್ಫೊರ್ಮೇಶನ್ ಸೆಂಟರ್‌ನ ಸ್ಥಾಪಕಾಧ್ಯಕ್ಷ ಉಮರ್ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





