ನೋಟು ಅಮಾನ್ಯದಿಂದ ಆರ್ಥಿಕ ಪರಿಸ್ಥಿತಿಗೆ ಹೊಡೆತ: ಸಚಿವ ರೈ

ಮಂಗಳೂರು, ನ. 8: ನೋಟು ಅಮಾನ್ಯವು ಕಪ್ಪು ಹಣದ ವಿರುದ್ಧದ ಸರ್ಜಿಕಲ್ ಸ್ಟೈಕ್ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ಇದು ದೇಶದ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಹೊಡೆತ ನೀಡಿದೆ. ಜತೆಗೆ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ.
ಕೇಂದ್ರ ಸರಕಾರದ ನೋಟು ಅಮಾನ್ಯ ತೀರ್ಮಾನಕ್ಕೆ ಇಂದು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಹಮ್ಮಿಕೊಂಡಿದ್ದ ಕರಾಳ ದಿನದ ಅಂಗವಾಗಿ ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರದ ನೋಟು ಅಮಾನ್ಯ ತೀರ್ಮಾನದಿಂದ ದೇಶದ 80 ಶೇ.ದಷ್ಟು ಜನರಿಗೆ ತೊಂದರೆಯಾಗಿದೆ. ಆದರೆ ಪ್ರಧಾನಿಯವರು ಮಾತ್ರ ಪ್ರಚಾರ ಗಿಟ್ಟಿಸುವ ನಿಟ್ಟಿನಲ್ಲಿ ನೋಟು ಅಮಾನ್ಯ ಉತ್ತಮ ತೀರ್ಮಾನ ಎಂದು ಹೇಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆರೋಪಿಸಿದರು.
ಸಚಿವ ಯು.ಟಿ.ಖಾದರ್ ಮಾತನಾಡಿ, ಕೇಂದ್ರ ಸರಕಾರವು ನೋಟು ರದ್ಧತಿಯ ತೀರ್ಮಾನವನ್ನು ಯಾವ ಕಾರಣಕ್ಕೆ ಮಾಡಿದೆ, ಅದರಿಂದ ಎಷ್ಟು ಕಪ್ಪು ಹಣ ಹೊರಬಂದಿದೆ ಎಂಬ ಮಾಹಿತಿಯನ್ನು ತಿಳಿಸಲಿ. ಆರ್ಥಿಕ ಪರಿಸ್ಥಿತಿ ನಿರ್ವಹಣೆಯ ಕುರಿತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರಂತಹ ಆರ್ಥಿಕ ತಜ್ಞರಿಂದ ಸಲಹೆ ಪಡೆದು ಮುನ್ನಡೆಯಲಿ ಎಂದರು.
ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜಾ ಮಾತನಾಡಿ, ಬಿಜೆಪಿಗೆ ಚುನಾವಣೆಯಲ್ಲಿ ದುಡ್ಡು ನೀಡಿದವರ ಕಪ್ಪು ಹಣವನ್ನು ಬಿಳಿ ಮಾಡುವ ಉದ್ದೇಶಕ್ಕೆ ನೋಟು ಅಮಾನ್ಯ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಕರೆನ್ಸಿ ನಿಷೇಧ ಮಾಡುವಾಗ ಕೇವಲ 90 ದಿನಗಳಲ್ಲಿ ಪರಿಸ್ಥಿಯ ಸುಧಾರಣೆ ಮಾಡುತೆತೀನೆ ಎಂದು ಪ್ರಧಾನಿ ಹೇಳಿದ್ದರು. ಆದರೆ 90 ದಿನಗಳು ಹೋಗಿ ವರ್ಷ ಕಳೆದರೂ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿಲ್ಲಘಿ. ಕೇಂದ್ರ ಸರಕಾರದ ನೋಟು ಬ್ಯಾನ್ ಅತ್ಯಂತ ದೊಡ್ಡ ಹಗರಣ ಎಂದವರು ಆರೋಪಿಸಿದರು.
ಶಾಸಕ ಜೆ.ಆರ್.ಲೋಬೊ ಮಾತನಾಡಿ, ನೋಟು ಅಮಾನ್ಯ ವಾಸ್ತವಿಕ ಚಿಂತನೆ ಇಲ್ಲದ ಯೋಜನೆ. ಮಂಗಳೂರು ಧಕ್ಕೆಯಲ್ಲಿ ದಿನಕ್ಕೆ ಕೋಟ್ಯಂತರ ರೂ. ವ್ಯವಹಾರ ನಡೆಯುತಿತಿದೆ. ಮೀನಿಗೆ ಸಂಬಂಧಿಸಿದ ಈ ವ್ಯವಹಾರಗಳನ್ನು ಕಾರ್ಡ್ ಅಥವಾ ಚೆಕ್ ಮೂಲಕ ಕ್ಯಾಶ್‌ಲೆಸ್ ಆಗಿ ನಡೆಸಲು ಸಾಧ್ಯವೇ. ಬಿಜೆಪಿ ಕನಸು ಮಾತ್ರ ಕಾಣುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್‌ಕುಮಾರ್, ಮಾಜಿ ರಾಜ್ಯಸಭಾ ಸದಸ್ಯ ಇಬ್ರಾಹಿಂ, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಕೆಪಿಸಿಸಿ ಪದಾಧಿಕಾರಿಗಳಾದ ಕಳ್ಳಿಗೆ ತಾರಾನಾಥ ಶೆಟ್ಟಿ, ನವೀನ್ ಡಿಸೋಜಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಲೆಟ್ ಪಿಂಟೊ, ಬ್ಲಾಕ್ ಅಧ್ಯಕ್ಷರಾದ ವಿಶ್ವಾಸ್‌ಕುಮಾರ್, ಸಲೀಂ, ಮನಪಾ ಕಾರ್ಪೊರೇಟರ್‌ಗಳು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮನಪಾ ಮುಖ್ಯಸಚೇತಕ ಎಂ.ಶಶಿಧರ ಹೆಗ್ಡೆ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನ್ೀ ವಂದಿಸಿದರು. ಕಾಂಗ್ರೆಸ್ ಸೇವಾ ದಳದ ಜಿಲ್ಲಾಧ್ಯಕ್ಷ ಎಚ್.ಎಂ.ಅಶ್ರ್ ನಿರ್ವಹಿಸಿದರು.
ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಲು ಆಗ್ರಹ
ಕೇಂದ್ರ ಸರಕಾರ ನೋಟು ನಿಷೇಧ ಮಾಡಿದ ಬಳಿಕ ದೇಶದ ಆರ್ಥಿಕ ಸ್ಥಿತಿ ತೀರಾ ಸಂಕಷ್ಟಕ್ಕೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಸ್ಥಿತಿಗತಿಯ ಕುರಿತು ಕೇಂದ್ರ ಸರಕಾರ ಶೀಘ್ರದಲ್ಲಿಯೇ ಶ್ವೇತಪತ್ರ ಹೊರಡಿಸಬೇಕೆಂದು ಆಹಾರ ಮತುತಿ ನಾಗರಿಕ ಪೂರೈಕೆ ಚಿವ ಯು.ಟಿ. ಖಾದರ್ ಆಗ್ರಹಿಸಿದರು.







