ನಾಪತ್ತೆ

ಉಡುಪಿ, ನ.8: ಹೆರ್ಗಾ ಗ್ರಾಮದ ಪರ್ಕಳ ಮಾರ್ಕೆಟ್ ಬಳಿ ಭಾಗ್ಯಶ್ರೀ ಎಂಬ ಹೋಟೇಲ್‌ನ ಮಾಲಕರಾದ ಗೋಪಾಲ ಕುಲಾಲ್(45) ಎಂಬವರು ನ.5ರ ರಾತ್ರಿ 10:30ಕ್ಕೆ ತನ್ನ ರೂಮಿಗೆ ಹೋಗುವುದಾಗಿ ಸ್ನೇಹಿತನ ಬಳಿ ಹೇಳಿ ಹೋದವರು ಈ ತನಕ ರೂಮಿಗೂ ಹೋಗದೆ, ತನ್ನ ಹೆಂಡತಿ ಮನೆಗೂ, ಸ್ವಂತ ಮನೆಗೂ ಹೋಗದೆ ಕಾಣೆಯಾಗಿದ್ದಾರೆ.
ಕಾಣೆಯಾದ ವ್ಯಕ್ತಿ ಬಿಳಿ ಮೈ ಬಣ್ಣ, ಸಾಧಾರಣ ಶರೀರ, 5.5 ಅಡಿ ಎತ್ತರ ವಿದ್ದಾರೆ. ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಬಿಳಿ ಶರ್ಟ್ ಹಾಗೂ ಕನ್ನಡಕ ಧರಿಸಿದ್ದಾರೆ. ಇವರು ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ. ಈ ವ್ಯಕ್ತಿ ಪತ್ತೆಯಾದಲ್ಲಿ ಮಣಿಪಾಲ ಪೋಲೀಸ್ ಠಾಣೆ: 0820-2570328, ಅಥವಾ ಪೊಲೀಸ್ ನಿರೀಕ್ಷಕರು ಮಣಿಪಾಲ: 9480805448 ಅಥವಾ ಪೊಲೀಸ್ ಉಪನಿರೀಕ್ಷಕರು ಮಣಿಪಾಲ ಠಾಣೆ: 9480805475 ಇವರಿಗೆ ಮಾಹಿತಿ ನೀಡುವಂತೆ ಮಣಿಪಾಲ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





