ನ.11: ಕೃಷಿಕರಿಗೆ ತಜ್ಞರಿಂದ ಮಾಹಿತಿ ಕಾರ್ಯಕ್ರಮ: ಶಾಸಕ ಮೊಯ್ದಿನ್ ಬಾವ
ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ 6.24 ಲಕ್ಷ ರೂ ಪರಿಹಾರ ಧನ ವಿತರಣೆ
ಮಂಗಳೂರು, ನ.8: ಜಿಲ್ಲೆಯ ಸುರತ್ಕಲ್ ಹಾಗೂ ಆಸುಪಾಸಿನಲ್ಲಿ ತೆಂಗಿನ ಮರಗಳಿಗೆ ಕೀಟಗಳ ಭಾದೆಯಿಂದ ಹಾನಿಯುಂಟಾಗಿದೆ ಈ ಬಗ್ಗೆ ಕೃಷಿಕರಿಗೆ ನ.11ರಂದು ಸುರತ್ಕ್‌ಲ್ ಗೋವಿಂದದಾಸ್ ಕಾಲೇಜಿನಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ ಎಂದು ಶಾಸಕ ಮೊಯ್ದಿನ್ ಬಾವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ 10 ಮಂದಿಗೆ ಮಂಜೂರಾದ 6,24, 571ರೂ ಪರಿಹಾರದ ಚೆಕ್‌ನ್ನು ಶಾಸಕರು ಫಲಾನುಭವಿಗಳಿಗೆ ವಿತರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗದಲ್ಲಿ ಕಪ್ಪು ತಲೆ ಹುಳದ ಬಾಧೆಯಿಂದ ಕೃಷಿಕರು ಕಂಗೆಟ್ಟಿದ್ದರು.ಇದೀಗ ಹೊಸತಾಗಿ ಆವರಿಸಿದ ಈ ರೋಗವನ್ನು ನಿಯಂತ್ರಿಸಲು ಜೈವಿಕ ನಿಯಂತ್ರಣದ ಮೂಲಕ ಹತೋಟಿಗೆ ತರಬಹುದಾಗಿದೆ .ಬಿಳಿ ತಲೆಯ ಕೀಟಗಳನ್ನು ಭಕ್ಷಿಸುವ ಜೀವಿಗಳನ್ನು ರೋಗ ಪೀಡಿತ ಪ್ರದೇಶದ ಮಗಳಿಗೆ ಬಿಡುವ ಮೂಲಕ ನಿಯಂತ್ರಣ ಸಾಧ್ಯ. ಈ ಹಿನ್ನೆಲೆಯಲ್ಲಿ ಕಪ್ಪು ತಲೆ ಹುಳಗಳ ನಿಯಂತ್ರಣಕ್ಕಾಗಿ ಬಳಸುತ್ತಿದ್ದ ತಂತ್ರಗಳನ್ನು ಇಲ್ಲಿ ಬಳಸಬಾರದು ಎಂದು ತಜ್ಞರು ತಿಳಿಸಿದ್ದಾರೆ. ಈ ಬಗ್ಗೆ ಕೃಷಿಕರಲ್ಲಿರುವ ಗೊಂದಲ ನಿವಾರಣೆಗೆ ಶನಿವಾರ ಸಂಜೆ 3 ಗಂಟೆಗೆ ಸುರತ್ಕಲ್‌ನಲ್ಲಿ ಸಭೆ ಕರೆಯಲಾಗಿದೆ ಎಂದರು.
ಕಾಂಗ್ರೆಸ್ ವಿರುದ್ಧ ಅಪಪ್ರಚಾರ :- ಕಾಂಗ್ರೆಸ್ ನಡಿಗೆ ಮನೆ ಮನೆಗೆ ಕಾರ್ಯಕ್ರಮ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆದಿದೆ. ಕಾಂಗ್ರೆಸ್ ಮುಖಂಡರಾದ ವೇಣುಗೋಪಾಲ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜನರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರ ಸುಖ ಕಷ್ಟ ವಿಚಾರಿಸಿದ್ದಾರೆ.
ಒಂದು ಕಡೆ ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿರುವವರು ತಮಗೆ ಸ್ವಂತ ಮನೆ ಇಲ್ಲ ಎನ್ನುವ ಬಗ್ಗೆ ತಮ್ಮ ಸಮಸ್ಯೆ ತೋಡಿಕೊಂಡಾಗ ನನ್ನ ಗಮನಕ್ಕೆ ತಂದಿದ್ದಾರೆ. ನಾನು ಅವರಿಗೆ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಲು ಸೂಚಿಸಿದ್ದೇನೆ. ಕಾಂಗ್ರೆಸ್ ಮುಖಂಡರಾದ ವೇಣುಗೋಪಾಲ್ ಯಾರನ್ನು ತರಾಟೆಗೆ ತೆಗೆದುಕೊಂಡಿಲ್ಲ ಎಂದು ಬಾವ ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರು ಕ್ಷೇತ್ರದ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಹಾಗೂ ನಿವೇಶನ ರಹಿತರ ಪಟ್ಟಿತಯಾರಿಸಲು ಕ್ರಮ ಕೈ ಗೊಂಡು ಪ್ರಥಮ ಹಂತದಲ್ಲಿ 1000 ಸಾವಿರ ಜನರಿಗೆ ಮನೆ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಅಥವಾ ಆರೋಗ್ಯ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಮಂಜೂರಾದ ಮೊತ್ತವನ್ನು ಚೆಕ್ ಮೂಲಕ ಫಲಾನುಭವಿಗಳಿಗೆ ನೀಡಿ ಅವರ ಖಾತೆಗೆ ನೇರವಾಗಿ ಜಮೆಯಾಗುತ್ತದೆ. ಅದೇ ರೀತಿ ಇತ್ತೀಚೆಗೆ 1.25ಲಕ್ಷ ಪರಿಹಾರ ಮಂಜೂರಾದ ಮೊತ್ತ ಫಲಾನುಭವಿಗಳಿಗೆ ನೀಡಲಾಗಿದೆ. ಅದನ್ನು ವಾಪಾಸ್ ಪಡೆಯಲಾಗಿದೆ ಎನ್ನುವುದು ಸುಳ್ಳು ಈ ರೀತಿಯ ಅಪಪ್ರಚಾರಗಳಿಗೆ ಜನರು ಕಿವಿಗೊಡಬಾರದು ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹೀಂ, ತಾಲೂಕು ಪಂಚಾಯತ್ ಸದಸ್ಯ ಶ್ರೀಧರ್, ಮನಪಾ ಸದಸ್ಯರಾದ ಕೆ.ಮುಹಮ್ಮದ್, ನಾಮ ನಿರ್ದೇಶಿತ ಸದಸ್ಯ ಸ್ಟೀಪನ್ ಹಾಗೂ ಇತರ ಕಾಂಗ್ರೆಸ್ ಮುಖಂಡರಾದ ಸುರೇಂದ್ರ ಕಂಬಳಿ, ಸುಮಂತ್,ಅನಿಲ್, ಆಸಿಫ್ ಮೊದಲಾದವರು ಉಪಸ್ಥಿತರಿದ್ದರು.







