ನ್ಯೂಜರ್ಸಿ: ‘ಭಯೋತ್ಪಾದಕ’ ಎಂದು ನಿಂದನೆಗೊಳಗಾಗಿದ್ದ ವ್ಯಕ್ತಿ ಈಗ ಮೇಯರ್...
.jpg)
ವಾಶಿಂಗ್ಟನ್ ನ. 8: ಕೆಲವು ದಿನಗಳ ಹಿಂದೆ ಎದುರಾಳಿಗಳಿಂದ ‘ಭಯೋತ್ಪಾದಕ’ನಾಗಿ ಬಿಂಬಿಸಲ್ಪಟ್ಟಿದ್ದ ಭಾರತ ಮೂಲದ ಸಿಖ್ ರವೀಂದ್ರ ಭಲ್ಲಾ ಅಮೆರಿಕದ ನ್ಯೂಜರ್ಸಿ ರಾಜ್ಯದ ಹೊಬೊಕನ್ ನಗರದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಏಳು ವರ್ಷಗಳಿಗೂ ಅಧಿಕ ಸಮಯ ಸಿಟಿ ಕೌನ್ಸಿಲ್ ಸದಸ್ಯರಾಗಿದ್ದ ಭಲ್ಲಾ, ಮಂಗಳವಾರ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದರು.
ಚುನಾವಣಾ ಪ್ರಚಾರ ಅವಧಿಯಲ್ಲಿ ಭಲ್ಲಾರನ್ನು ಭಯೋತ್ಪಾದಕನಾಗಿ ಬಿಂಬಿಸುವ ಕರಪತ್ರಗಳನ್ನು ಹಂಚಲಾಗಿತ್ತು. ‘‘ನಮ್ಮ ಪಟ್ಟಣದಲ್ಲಿ ಭಯೋತ್ಪಾದನೆಗೆ ಕಾಲೂರಲು ಅವಕಾಶ ನೀಡಬೇಡಿ’’ ಎಂಬ ಸಂದೇಶವನ್ನು ಅವರ ಚಿತ್ರದೊಂದಿಗೆ ಕರಪತ್ರಗಳಲ್ಲಿ ಮುದ್ರಿಸಲಾಗಿತ್ತು.
‘‘ಇದು ಕಳವಳದ ವಿಷಯವೇ ಆಗಿದೆ. ಆದರೆ, ದ್ವೇಷ ಜಯಿಸಲು ನಾವು ಬಿಡುವುದಿಲ್ಲ’’ ಎಂಬುದಾಗಿ ಭಲ್ಲಾ ಟ್ವೀಟ್ ಮಾಡಿದ್ದರು.
Next Story





