ಗಾಂಜಾ ಮಾರಾಟ: ಇಬ್ಬರು ಆರೋಪಿಗಳು ಸೆರೆ
ಮಂಗಳೂರು, ನ. 8: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕುದ್ರೋಳಿ ಬೆಂಗ್ರೆ ನಿವಾಸಿ ಅನೀಶ್ ಅಮೀನ್(24) ಮತ್ತು ಅಸ್ಸಾಂ ಮೂಲದ ದಿಗಂಬರ ಬಿಶ್ವಾಸ್ ಬಂಧಿತ ಆರೋಪಿಗಳು.
ಉರ್ವಾ ಠಾಣಾ ವ್ಯಾಪ್ತಿಯ ದಡ್ಡಲ್‌ಕಾಡ್ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಮಂಗಳೂರು ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಹಾಗೂ ಉರ್ವಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ 96 ಗ್ರಾಂ ತೂಕದ 8 ಪ್ಯಾಕೆಟ್ ಗಾಂಜಾ, ಮೊಬೈಲ್, ಒಂದು ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಮೇಲೆ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Next Story





