Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕ್ರಾಸಿಂಗ್ ಸ್ಟೇಶನ್ ಆಗಿ ಇನ್ನಂಜೆ...

ಕ್ರಾಸಿಂಗ್ ಸ್ಟೇಶನ್ ಆಗಿ ಇನ್ನಂಜೆ ನಿಲ್ದಾಣ ಮೇಲ್ದರ್ಜೆಗೆ

ಕೊಂಕಣ ರೈಲು ಮಾರ್ಗ

ವಾರ್ತಾಭಾರತಿವಾರ್ತಾಭಾರತಿ8 Nov 2017 11:36 PM IST
share
ಕ್ರಾಸಿಂಗ್ ಸ್ಟೇಶನ್ ಆಗಿ ಇನ್ನಂಜೆ ನಿಲ್ದಾಣ ಮೇಲ್ದರ್ಜೆಗೆ

ಉಡುಪಿ, ನ.8: ಕೊಂಕಣ ರೈಲು ಮಾರ್ಗದಲ್ಲಿ ಈಗ ಕೇವಲ ಎರಡು ಪ್ಯಾಸೆಂಜರ್ ರೈಲುಗಳಿಗೆ ನಿಲುಗಡೆ ಹೊಂದಿರುವ ಇಲ್ಲಿಗೆ ಸಮೀಪದ ಇನ್ನಂಜೆಯ ಹಾಲ್ಟ್ ಸ್ಟೇಶನ್‌ನ್ನು, ಸುಸಜ್ಜಿತ ಕ್ರಾಸಿಂಗ್ ಸ್ಟೇಶನ್ ಆಗಿ ಮೇಲ್ದರ್ಜೆಗೇರಿಸುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಕೊಂಕಣ ರೈಲ್ವೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಕುಮಾರ್ ತಿಳಿಸಿದ್ದಾರೆ.

ಇಂದು ಇನ್ನಂಜೆ ರೈಲ್ವೆ ಸ್ಟೇಶನ್‌ಗೆ ಭೇಟಿ ನೀಡಿದ ಪತ್ರಕರ್ತರ ತಂಡದೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು. 1990ರಲ್ಲಿ ಪ್ರಾರಂಭ ಗೊಂಡ ಈ ನಿಲ್ದಾಣದಲ್ಲಿ ಈಗ ಕೇವಲ ಮಂಗಳೂರು-ಮಡಂಗಾವ್ ಪ್ಯಾಸೆಂಜರ್ ರೈಲು (2) ಹಾಗೂ ಮಡಂಗಾವ್-ಮಂಗಳೂರು ಡೇಮು ರೈಲುಗಳಿಗೆ ಮಾತ್ರ ಇಲ್ಲಿ ನಿಲುಗಡೆ ಇದೆ. ಈಗ ರೈಲು ಬರುವ ವೇಳೆ ಟಿಕೇಟ್ ನೀಡಲು ಸಣ್ಣ ಸ್ಟೇಶನ್ ಇದೆ. ಬೇರೆ ಯಾವುದೇ ಸೌಕರ್ಯವಿಲ್ಲ ಎಂದವರು ತಿಳಿಸಿದರು.

ಇದೀಗ ಒಟ್ಟು 6.78 ಕೋಟಿ ರೂ.ವೆಚ್ಚದಲ್ಲಿ ನಿಲ್ದಾಣವನ್ನು ಕ್ರಾಸಿಂಗ್ ನಿಲ್ದಾಣವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಭರದಿಂದ ನಡೆಯುತ್ತಿದೆ ಎಂದರು. ಇದರಿಂದ ಇಲ್ಲಿ ಈಗಿರುವ ಮುಖ್ಯ ಹಳಿಯೊಂದಿಗೆ ಸುಮಾರು ಒಂದು ಕಿ.ಮೀ. ಉದ್ದದ ಕ್ರಾಸಿಂಗ್ ಟ್ರಾಕ್, 560ಮೀ. ಉದ್ದದ ಪ್ಲಾಟ್‌ಫಾವರ್ ಎತ್ತರದಲ್ಲಿ ನಿರ್ಮಾಣಗೊಳ್ಳಲಿದೆ. ಇದರಲ್ಲಿ ಟಿಕೇಟ್ ಬುಕ್ಕಿಂಗ್ ಆಫೀಸ್, ವೈಟಿಂಗ್ ರೂಮ್, ಶೌಚಾಲಯ, ಕ್ಯಾಂಟಿನ್ ವ್ಯವಸ್ಥೆ, ವಿವಿಧ ರೂಮುಗಳು, ಸಿಬ್ಬಂದಿಗಳಿಗೆ ಕ್ವಾರ್ಟಸ್ ನಿರ್ಮಾಣಗೊಳ್ಳಲಿದೆ ಎಂದರು.

ರಾಜ್ಯದಲ್ಲಿ ಎರಡು ಕಡೆ ಇನ್ನಂಜೆ ಹಾಗೂ ಉತ್ತರ ಕನ್ನಡದ ಕುಮಟಾ ಮತ್ತು ಗೋಕರ್ಣದ ನಡುವಿನ ಮಿರ್ಜಾನದಲ್ಲಿ ಕ್ರಾಸಿಂಗ್ ಸ್ಟೇಶನ್‌ಗಳು ನಿರ್ಮಾಣ ಗೊಳ್ಳುತ್ತಿವೆ. ಮಿರ್ಜಾನದಲ್ಲಿ 7.12 ಕೋಟಿ ರೂ.ವೆಚ್ಚದಲ್ಲಿ ಈ ನಿಲ್ದಾಣ ನಿರ್ಮಾಣಗೊಳ್ಳುತ್ತಿದೆ. ಅಲ್ಲದೇ ಉತ್ತರ ಕನ್ನಡದ ಮುರ್ಡೇಶ್ವರದಲ್ಲಿ ಲೂಪ್‌ಲೈನ್ ಹಾಗೂ ಪ್ಲಾಟ್‌ಫಾರ್ಮ್ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು. ಕೊಂಕಣ ರೈಲ್ವೆಯ ಈ ಮೂರು ಕಾಮಗಾರಿಗಳು ಒಟ್ಟು 14.87 ಕೋಟಿ ರೂ.ವೆಚ್ಚದಲ್ಲಿ ನಡೆಯುತ್ತಿದೆ ಎಂದು ವಿಜಯಕುಮಾರ್ ತಿಳಿಸಿದರು.

ಇನ್ನಂಜೆಯಲ್ಲಿ ಪ್ರಾಥಮಿಕ ಕಾಮಗಾರಿಗಳು 2018ರ ಮಾರ್ಚ್ ಒಳಗೆ ಮುಗಿಯಲಿದ್ದು, ಸ್ಟಾಫ್ ಕ್ವಾರ್ಟರ್ಸ್‌ ಹಾಗೂ ಫ್ಲಾಟ್‌ಫಾರ್ಮ್‌ಗಳ ಕಾಮಗಾರಿಯನ್ನು 2018ರ ಜೂನ್ ಒಳಗೆ ಹಾಗೂ ಹಳಿ ಅಳವಡಿಕೆ ಹಾಗೂ ಕ್ರಾಸಿಂಗ್ ಕಾಮಗಾರಿಗಳನ್ನು ಅಕ್ಟೋಬರ್ ಒಳಗೆ ಮುಗಿಸಿ 2018ರ ನವೆಂಬರ್‌ನಲ್ಲಿ ಇದನ್ನು ಜನರ ಬಳಕೆಗೆ ಬಿಡುವ ಯೋಜನೆಯನ್ನು ಹಾಕಿಕೊಳ್ಳ ಲಾಗಿದೆ ಎಂದು ಅವರು ವಿವರಿಸಿದರು.

ಇನ್ನಂಜೆಯಲ್ಲಿ ಕ್ರಾಸಿಂಗ್ ಸ್ಟೇಶನ್ ನಿರ್ಮಾಣದ ಅಗತ್ಯತೆಯ ಕುರಿತು ವಿವರಿಸಿದ ಅವರು, ಈಗ ಉಡುಪಿಯಿಂದ ಪಡುಬಿದ್ರಿಗೆ 18ಕಿ.ಮೀ. ಅಂತರವಿದೆ. ಇದು ಸಿಂಗಲ್ ಟ್ರಾಕ್ ಆಗಿರುವುದರಿಂದ ಉಡುಪಿ ಬಿಟ್ಟ ಒಂದು ರೈಲು ಪಡುಬಿದ್ರಿ ಮುಟ್ಟುವತನಕ ಮತ್ತೊದು ರೈಲು ಹಾದು ಹೋಗುವಂತಿಲ್ಲ. ಕೊಂಕಣ ರೈಲು ಮಾರ್ಗದಲ್ಲಿ ಗರಿಷ್ಠ 30 ರೈಲುಗಳು ಸಂಚರಿಸಬಹುದು. ಆದರೆ ಈಗ 50 ರೈಲುಗಳು ಓಡಾಡುತ್ತಿವೆ.

ಸದ್ಯಕ್ಕೆ ಈ ನಿಲ್ದಾಣದಲ್ಲಿ ಎರಡು ಪ್ಯಾಸೆಂಜರ್ ರೈಲಿಗೆ ಮಾತ್ರ ನಿಲುಗಡೆ ಇದ್ದು, ಮುಂದೆ ಇದು ಅಭಿವೃದ್ಧಿ ಹೊಂದಿದ ಬಳಿಕ ಇಲ್ಲಿಂದ ಹೆಚ್ಚಿನ ಪ್ರಯಾಣಿಕರು ಲಭ್ಯವಾದರೆ, ಇಲ್ಲಿ ಮುಂಬಯಿ ಮತ್ತು ಇತರ ದೂರದ ಪ್ರಯಾಣ ರೈಲಿಗೆ ನಿಲುಗಡೆಯನ್ನು ಸಹ ನೀಡಬಹುದಾಗಿದೆ ಎಂದವರು ಹೇಳಿದರು.

ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು ಇಲ್ಲಿಗೆ ತೀರಾ ಸಮೀಪದಲ್ಲಿದ್ದು, ಕಟಪಾಡಿ, ಸುಭಾಶ್‌ನಗರ, ಪಣಿಯೂರು, ಪಾಂಗಾಳ, ಶಂಕರಪುರ, ಶಿರ್ವ, ಮಂಚಕಲ್ಲು ಆಸುಪಾಸಿನ ಜನರು ಈ ಸ್ಟೇಶನ್‌ನ್ನು ಹೆಚ್ಚೆಚ್ಚು ಬಳಸಿದರೆ, ಅದರಿಂದ ಇಲ್ಲಿ ಹೆಚ್ಚಿನ ರೈಲು ನಿಲ್ಲಲು ಅನುಕೂಲವಾಗುತ್ತದೆ ಎಂದರು. ಪಡುಬದ್ರಿ ರೈಲು ನಿಲ್ದಾಣದಲ್ಲಿ ಪ್ರಯಾಣಿಸುವವರ ಸಂಖ್ಯೆ ತೀರಾ ಕಡಿಮೆ ಇದ್ದು, ಇದರಿಂದ ಅಲ್ಲಿ ಯಾವುದೇ ಹೆಚ್ಚುವರಿ ರೈಲಿಗೆ ನಿಲುಗಡೆ ನೀಡಲು ಸಾಧ್ಯವಾಗುವುದಿಲ್ಲ ಎಂದವರು ವಿವರಿಸಿದರು.

ಇನ್ನಂಜೆ ಕ್ರಾಸಿಂಗ್ ಸ್ಟೇಶನ್‌ಗೆ ಪೂರ್ವಭಾವಿ ಕೆಲಸ 2016ರ ಜುಲೈಯಲ್ಲಿ ಆರಂಭಗೊಂಡಿದ್ದರೆ, ಕಾಮಗಾರಿ ಈ ವರ್ಷದ ಎಪ್ರಿಲ್‌ನಿಂದ ಪ್ರಾರಂಭಗೊಂಡು 2018ರ ನವೆಂಬರ್‌ನಲ್ಲಿ ಈ ನಿಲ್ದಾಣ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ ಎಂದು ಸುಧಾ ಕೃಷ್ಣಮೂರ್ತಿ ಹೇಳಿದರು. ಕಾರವಾರದ ಸೀನಿಯರ್ ಪಿಆರ್‌ಓ ದಿಲೀಪ್ ಭಟ್ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X