ದೇಹದಾರ್ಢ್ಯ ಸ್ವರ್ಧೆಯಲ್ಲಿ ಪ್ರಶಸ್ತಿ

ಮಂಗಳೂರು, ನ. 8: ದಕ್ಷಿಣ ಕನ್ನಡ ಅಮೆಚೂರು ಬಾಡಿ ಬಿಲ್ಡರ್ಸ್ ಅಸೋಶಿಯೇಷನ್ (ರಿ) ಇವರ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಡಾನ್ ಬಾಸ್ಕೋ ಹಾಲ್‌ನಲ್ಲಿ ಜರಗಿದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಶ್ರೇಯಸ್ ಭಂಡಾರ್‌ಕಾರ್ ಅವರು ದಕ್ಷಿಣ ಕನ್ನಡ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಇವರು ಬಿಜೈನ ಅಬ್ಸುಲೆಟ್ ಫಿಟ್‌ನೆಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಶ್ರೇಯಸ್ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. (ಮೆಕ್ಯಾನಿಕಲ್) ವಿದ್ಯಾರ್ಥಿಯಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉದ್ಯೋಗಿ ಬಿ. ಪ್ರಭಾಕರ್ ಮತ್ತು ಕೆಎಸ್ಸಾರ್ಟಿಸಿಯ ಉದ್ಯೋಗಿ ವಿದ್ಯಾ ವಿ. ಭಂಡಾರ್‌ಕಾರ್ ದಂಪತಿಯ ಪುತ್ರ.
Next Story





