ಉಪ್ಪಿನಂಗಡಿಯಲ್ಲಿ ‘ಕ್ಯಾಂಪಸ್ ಡೆ’ ಆಚರಣೆ
ಮುಖ್ಯವಾಹಿನಿಗೆ ಬರಲು ವಿದ್ಯಾರ್ಥಿಗಳಿಗೆ ಕರೆ

ಮಂಗಳೂರು, ನ. 8: ವಿದ್ಯಾರ್ಥಿಗಳು ದೇಶದ ಮುಖ್ಯವಾಹಿನಿಗೆ ಬರಬೇಕೆಂದು ಅಡ್ವಕೇಟ್ ಅಬ್ದುಲ್ ರಹ್ಮಾನ್ ಕರೆ ನೀಡಿದ್ದಾರೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಡಿವಿಷನ್ ವತಿಯಿಂದ 9ನೆ ವರ್ಷಕ್ಕೆ ಪದಾರ್ಪಣೆ ಸಂದರ್ಭದಲ್ಲಿ ಉಪ್ಪಿನಂಗಡಿ ಜೂನಿಯರ್ ಕಾಲೇಜು ಬಳಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಪಾಲ್ಗೊಂಡರೆ ಮಾತ್ರ ದೇಶದ ಅಭಿವೃದ್ದಿ ಸಾಧ್ಯವಾಗಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣತ್ತ ತಮ್ಮನ್ನು ತೊಡಗಿಸಿಕೊಂಡು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿ ಸದಸ್ಯ ಮುಹಮ್ಮದ್ ತ್ವಾಹ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಇಳಂತಿಲ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಅಬ್ದುಲ್ ರವೂಫ್ ಯು.ಟಿ., ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಸಂಶುದ್ದೀನ್ ಪೆರ್ನೆ ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಉಸ್ಮಾನ್ ನೆಲ್ಯಾಡಿ, ಸಿನಾನ್ ಕೊಯಿಲ, ಕರೀಮ್ ಬುಡೋಲಿ ಇನ್ನಿತರ ವಿದ್ಯಾರ್ಥಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಕೊಯಿಲ ಎಂಡೋಸಲ್ಫಾನ್ ಪೀಡಿತರ ವಸತಿ ಕೇಂದ್ರಕ್ಕೆ ಭೇಟಿ ನೀಡಿ ಹಣ್ಣು ಹಂಪಲು ವಿತರಿಸಿದರು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಡಿವಿಷನ್‌ನ ಪ್ರ.ಕಾರ್ಯದರ್ಶಿ ಸಮದ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಖಲಂದರ್ ಶಾಫಿ ಕುಪ್ಪೇಟಿ ವಂದಿಸಿದರು.







