Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಬೇಚಾರ ಶಹರು-ಕಡಲ ಕರೆಯ ಮೌನ....

ಬೇಚಾರ ಶಹರು-ಕಡಲ ಕರೆಯ ಮೌನ....

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯ-ಕಾರುಣ್ಯ9 Nov 2017 12:01 AM IST
share
ಬೇಚಾರ ಶಹರು-ಕಡಲ ಕರೆಯ ಮೌನ....

ನೆಲದ ನಕ್ಷತ್ರಗಳು ಮತ್ತು ಬೊಗಸೆಯೊಡ್ಡುವ ಸಂತಸದ ಕ್ಷಣಗಳಿಗೆ ಕವನ ಸಂಕಲನಗಳಿಂದ ಗುರುತಿಸಲ್ಪಟ್ಟಿರುವ ಗೋಪಾಲ ತ್ರಾಸಿಯವರ ಮೂರನೇ ಸಂಕಲನ ‘ಬೇಚಾರ ಶಹರು’. ಮುಂಬೈಯಲ್ಲಿ ನೆಲೆಸಿರುವ ಗೋಪಾಲ್ ಅವರ ಕವಿತೆಗಳ ಹಿನ್ನೆಲೆಯನ್ನು ತೆರೆದಿಡುವಲ್ಲಿ ಕೃತಿಯ ಹೆಸರು ನೆರವಾಗುತ್ತದೆ. ಸುಮಾರು 50 ಕವಿತೆಗಳನ್ನೊಳಗೊಂಡ ಈ ಕೃತಿಯನ್ನು ಇರುವೆ ಪ್ರಕಾಶನ ಮಂಗಳೂರು ಇವರು ಹೊರತಂದಿದ್ದಾರೆ. ಕಡಲು ಮತ್ತು ಶಹರಗಳ ನಡುವೆ ತುಯ್ದಾಡುವ ಕವಿ ಮನಸ್ಸಿನ ತುಮುಲಗಳನ್ನು ಇಲ್ಲಿರುವ ಪ್ರತಿ ಕವಿತೆಗಳಲ್ಲೂ ಕಾಣಬಹುದು. ವೈಚಾರಿಕತೆೆಯ ಹಿನ್ನೆಲೆಯಿರುವ ಕಾರಣದಿಂದ ತ್ರಾಸಿಯವರ ಹಲವು ಕವಿತೆಗಳು ವ್ಯಂಗ್ಯ, ವಿಡಂಬನೆ, ರಾಜಕೀಯಗಳನ್ನು ತೆರೆದಿಡುವ ಪ್ರಯತ್ನ ಮಾಡುತ್ತದೆ. ಹಲವು ಕವಿತೆಗಳು ವರ್ತಮಾನದ ಜಂಜಡಗಳ ಜೊತೆಗೆ ಮುಖಾಮುಖಿಯಾಗುತ್ತವೆ. ಇಲ್ಲಿರುವ ಹೆಚ್ಚಿನ ಕವಿತೆಗಳು ಕಿರಿದಾಗಿವೆ. ಆದರೆ ಅದು ನಮ್ಮಲ್ಲಿ ಸ್ಫೋಟಿಸುವ ಭಾವ ನಿರಂತರವಾದುದು. ಅದಕ್ಕೆ ಗಡಿಗಳಿಲ್ಲ. ಆದುದರಿಂದಲೇ ಇಲ್ಲಿರುವ ಕವಿತೆಗಳನ್ನು ನಾವು ಹಿರಿದು- ಕಿರಿದು ಎಂದು ವಿಂಗಡಿಸುವುದು ಸರಿಯಾದ ಕ್ರಮ ಅಲ್ಲ ಅನ್ನಿಸುತ್ತದೆ.
ಗೋಪಾಲ್ ಹುಟ್ಟಿರುವುದೂ ಕಡಲ ಕರೆಯಲ್ಲಿ. ಹಾಗೆಯೇ ಈಗ ಬದುಕು ಕಟ್ಟಿಕೊಂಡಿರುವುದೂ ಕಡಲ ಕರೆಯಲ್ಲೇ. ಆದರೆ ಅದರ ತೆರೆಗಳ ಅಬ್ಬರಗಳಲ್ಲಿ ವ್ಯತ್ಯಾಸವಿದೆ. ಊರು ಮತ್ತು ಶಹರವನ್ನು ಕವಿತೆ ಹಿಡಿದಿಡುವ ಸಂದರ್ಭದಲ್ಲಿ ಕಡಲು ಹಲವು ಬಾರಿ ರೂಪಕವಾಗಿ ಕಾಣಿಸಿಕೊಳ್ಳುತ್ತದೆ. ಕಡಲ ಕರೆಯ ಚಿಪ್ಪುಗಳು ಕವನ ಈ ನಿಟ್ಟಿನಲ್ಲಿ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಅಗಾಧ ವೌನ ನಮ್ಮನ್ನು ಮತ್ತೆ ಮತ್ತೆ ಕಾಡುತ್ತದೆ. ಈ ವೌನ ಇತರ ಕವಿತೆಗಳಲ್ಲೂ ಕಂಡೂ ಕಾಣದಂತೆ ಹಿಂಬಾಲಿಸುತ್ತಾ ಬರುತ್ತದೆ. ಗೋಪಾಲ್ ಅವರ ಕವಿತೆಗಳ ಕುರಿತಂತೆ ಡುಂಡಿರಾಜ್ ಒಂದೆಡೆ ಹೀಗೆ ಹೇಳುತ್ತಾರೆ ‘‘ಬುದ್ಧಿ ಮತ್ತು ಭಾವ ಎರಡೂ ಹಿತವಾಗಿ ಬೆರೆತಾಗ ಅತ್ಯುತ್ತಮ ಕಾವ್ಯ ಮೈದೋರುತ್ತದೆ ಎಂಬುದು ಗೆಳೆಯ ಗೋಪಾಲರಿಗೆ ಗೊತ್ತಿದೆ’’. ಈ ಮಾತು ಅಕ್ಷರಶಃ ನಿಜ. ಭಾವದೊಳಗೆ ಮುಳುಗದಂತೆ ಅವರ ಕವಿತೆಗಳನ್ನು ತೇಲಿಸುವುದು ಬುದ್ಧಿ. ಅತೀ ಭಾವುಕತೆಯಿಂದ ಅವರ ಕವಿತೆಗು ಪಾರಾಗುವುದು ಇದೇ ಕಾರಣಕ್ಕೆ.

88 ಪುಟಗಳ ಈ ಕೃತಿಯ ಮುಖಬೆಲೆ 100 ರೂಪಾಯಿ. ಆಸಕ್ತರು 99302 62088 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯ
-ಕಾರುಣ್ಯ
Next Story
X