ನ.10ರಿಂದ ರಾಷ್ಟ್ರಮಟ್ಟದ ಆಯುರ್ವೇದ ಸಮ್ಮೇಳನ
ಬೆಂಗಳೂರು, ನ.9: ಸರಕಾರಿ ಆಯುರ್ವೇದ ಮಹಾ ವಿದ್ಯಾಲಯದ ಸುವರ್ಣ ಮಹೋತ್ಸವ ಅಂಗವಾಗಿ ನ.10 ಮತ್ತು 11 ರಂದು ಶಾಲಾಕ್ಯ ತಂತ್ರ ಸ್ನಾತಕೋತ್ತರ ವಿಭಾಗದಿಂದ ‘ಶಾಲಾಕ್ಯ ಪ್ರಬೋಧಿನಿ-2017’ ಎಂಬ ರಾಷ್ಟ್ರ ಮಟ್ಟದ ಆಯುರ್ವೇದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನವು ನಗರದ ಕೆ.ಜೆ. ರಸ್ತೆಯಲ್ಲಿರುವ ಶಿಕ್ಷಕರ ಸದನದಲ್ಲಿ ನಡೆಯಲಿದ್ದು, ಕಣ್ಣು, ಕಿವಿ, ಗಂಟಲು, ಮೂಗು ಮತ್ತು ಹಲ್ಲುಗಳಿಗೆ ಸಂಬಂಧಿಸಿದ ಖಾಯಿಲೆಗಳಿಗೆ ಆಯುರ್ವೇದ ವೈದ್ಯ ಪದ್ಧತಿಯ ಚಿಕಿತ್ಸೆ ಬಗ್ಗೆ ಚರ್ಚೆ ಹಾಗೂ ಸುಲಭವಾಗಿ ಅಳವಡಿಸಿ ಕೊಳ್ಳಬಹುದಾದ ಚಿಕಿತ್ಸಾ ವಿಧಾನಗಳ ವಿಶ್ಲೇಷಣೆ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಸುಮಾರು ಒಂದು ಸಾವಿರ ವೈದ್ಯರುಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಲಿದ್ದು,ಈ ಕುರಿತು ಸ್ಮರಣ ಸಂಚಿಕೆ ಸಹ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story





