ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾಟ

ಮಂಗಳೂರು, ನ.9: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ನಗರದ ವಿಕಾಸ್ ಕಾಲೇಜು ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾಟವು ವಿಕಾಸ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಕೃಷ್ಣ ಪಾಲೆಮಾರ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಎನ್ ಐ ಎಸ್ ಕೋಚ್ ಮತ್ತು ಬೆಂಗಾಲ್ ವಾರಿಯರ್ ಕೋಚ್ ಜಗದೀಶ್ ಕುಂಬ್ಳೆ ಆಗಮಿಸಿದ್ದರು.
ಪದಪೂರ್ವ ಶಿಕ್ಷಣ ಇಲಾಖೆಯ ಸಹನಿರ್ದೇಶಕ ಕೆ. ಆರ್. ತಿಮ್ಮಯ್ಯ , ಸಂಘಟಕ ಪ್ರೇಮನಾಥ್ ಶೆಟ್ಟಿ, ವಿಕಾಸ್ ಕಾಲೇಜಿನ ಸಂಚಾಲಕ ಡಾ.ಡಿ ಶ್ರೀಪತಿ ಪ್ರಾಂಶುಪಾಲ ಪ್ರೊಫೆಸರ್ ಟಿ.ರಾಜಾರಾಮ್ ರಾವ್, ವಿಕಾಸ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳಾದ ಜೆ ಕೊರಗಪ್ಪ, ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥಸಾರಥಿ ಪಾಲೆಮಾರ್, ದಕ್ಷಿಣ ಕನ್ನಡ ಅಮೆಚುರ್ ಅಸೋಸಿಯೇಶನ್‌ನ ಕಾರ್ಯದರ್ಶಿ ಪುರುಷೋತ್ತಮ್ ಪೂಜಾರಿ, ವಿಕಾಸ್ ಕಾಲೇಜಿನ ದೈಹಿಕ ನಿರ್ದೇಶಕ ರಮೇಶ್ ಪೂಜಾರಿ, ವಿಕಾಸ್ ಕಾಲೇಜಿನ ಕೋಚ್‌ಗಳಾದ ಆಕಾಶ್ ಶೆಟ್ಟಿ ಮತ್ತು ಸುಮಿತಾ ಮೆನನ್ ಉಪಸ್ಥಿತರಿದ್ದರು.
ಪ್ರತೀ ವಿಭಾಗದಿಂದ 6 ತಂಡಗಳು ಭಾಗವಹಿಸಿದ್ದವು. ಬಾಲಕಿಯರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರ ಪ್ರಥಮ, ಬೆಳ್ತಂಗಡಿ ದ್ವಿತೀಯ ಮತ್ತು ಬಾಲಕರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರ (ಆಳ್ವಾಸ್ ಪ್ರಥಮ) ಹಾಗೂ ಮಂಗಳೂರು ನಗರ (ವಿಕಾಸ್ ಕಾಲೇಜು) ದ್ವಿತೀಯ ಸ್ಥಾನವನ್ನು ಪಡೆದಿವೆ.
ವಿಕಾಸ್ ಕಾಲೇಜಿನ ಉಪನ್ಯಾಸಕಿ ಶ್ರುತಿ ಎಸ್. ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.





