ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಎಂ.ರಶೀದ್ ಹಾಜಿ ಅವರಿಗೆ ಸನ್ಮಾನ

ಮಂಗಳೂರು,ನ.9:ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಎಂ.ರಶೀದ್ ಹಾಜಿ ಅವರಿಗೆ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ವತಿಯಿಂದ ನಗರದ ತಖ್ವಾ ಮಸೀದಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಅಧ್ಯಕ್ಷ ವೈ. ಅಬ್ದುಲ್ಲಾ ಕುಂಞಿ ಸನ್ಮಾನಿಸಿದರು. ಉಪಾಧ್ಯಕ್ಷರಾದ ಯು.ಕೆ.ಮೋನು, ಅಬ್ದುಲ್‌ಅಝೀಝ್, ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ, ಅಬ್ದುಲ್ ರಶೀದ್ ಝೈನಿ, ಹಮೀದ್ ಕಂದಕ್, ಪಿ.ಸಿ.ಹಾಶಿರ್, ಬಿ.ಎಂ.ಬಶೀರ್, ಮಹ್ಮೂದ್ ಕುದ್ರೋಳಿ, ತಖ್ವಾ ಮಸೀದಿಯ ಖತೀಬ್ ಅಬ್ದುಲ್ ರಹ್ಮಾನ್ ಸಖಾಫಿ ಉಪಸ್ಥಿತರಿದ್ದರು.
Next Story





