ನ.10ರಂದು ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ
ಬೆಂಗಳೂರು, ನ.9: ಬಿಬಿಎಂಪಿಯ 12 ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ಚುನಾವಣೆ ನ.10ರಂದು ನಡೆಯಲಿದೆ.
ಶುಕ್ರವಾರ ಬೆಳಗ್ಗೆ 11:30ರಿಂದ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಜಯಂತಿ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಒಟ್ಟು 12 ಸ್ಥಾಯಿ ಸಮಿತಿಗಳಿಗೆ 137 ನಾಮಪತ್ರ ಸಲ್ಲಿಕೆಯಾಗಿವೆ. ಅದರಂತೆ ನಗರ ಯೋಜನೆ ಸ್ಥಾಯಿ ಸಮಿತಿ ಹಾಗೂ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿಗೆ ತಲಾ 13 ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿಗೆ 12 ನಾಮಪತ್ರ ಸಲ್ಲಿಕೆಯಾಗಿವೆ. ಉಳಿದ 9 ಸ್ಥಾಯಿ ಸಮಿತಿಗೆ ಸರಿಯಾಗಿ ತಲಾ 11 ನಾಮಪತ್ರ ಸಲ್ಲಿಕೆಯಾಗಿವೆ.
ಅಧ್ಯಕ್ಷರು ಯಾರ್ಯಾರು?
ಕಾಂಗ್ರೆಸ್:
* ಮಾರುಕಟ್ಟೆ ಸ್ಥಾಯಿ ಸಮಿತಿ: ಜಿ. ಮಂಜುನಾಥ್, ಸುದ್ದಗುಂಟೆಪಾಳ್ಯ ವಾರ್ಡ್
* ನಗರ ಯೋಜನೆ ಸ್ಥಾಯಿ ಸಮಿತಿ: ಶಕೀಲ್ ಅಹ್ಮದ್, ಭಾರತಿ ನಗರ ವಾರ್ಡ್
* ಅಪೀಲು ಸ್ಥಾಯಿ ಸಮಿತಿ: ಜಿ.ಕೃಷ್ಣಮೂರ್ತಿ, ರಾಜಾಜಿನಗರ ವಾರ್ಡ್
* ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ: ಗೋವಿಂದರಾಜು, ಸುಭಾಷನಗರ ವಾರ್ಡ್
* ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಅಬ್ದುಲ್ ರಕೀಬ್ ಝಾಕೀರ್, ಪುಲಕೇಶಿನಗರ ವಾರ್ಡ್ಜೆಡಿಎಸ್:
* ವಾರ್ಡ್‌ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ: ಇಮ್ರಾನ್ ಪಾಷಾ, ಪಾದರಾಯನಪುರ ವಾರ್ಡ್
* ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ: ಎಂ.ಮಹದೇವ, ಮಾರಪ್ಪನಪಾಳ್ಯ ವಾರ್ಡ್
* ತೋಟಗಾರಿಕೆ ಸ್ಥಾಯಿ ಸಮಿತಿ: ಉಮೇ ಸಲ್ಮಾ, ಕುಶಾಲನಗರ ವಾರ್ಡ್
* ಶಿಕ್ಷಣ ಸ್ಥಾಯಿ ಸಮಿತಿ: ಗಂಗಮ್ಮ, ಶಕ್ತಿಗಣಪತಿನಗರ ವಾರ್ಡ್
ಪಕ್ಷೇತರರು:
* ಆರೋಗ್ಯ ಸ್ಥಾಯಿ ಸಮಿತಿ: ಮುಜಾಹಿದ್ ಪಾಷಾ, ಸಿದ್ದಾಪುರ ವಾರ್ಡ್
* ಲೆಕ್ಕಪತ್ರ ಸ್ಥಾಯಿ ಸಮಿತಿ: ಎನ್.ರಮೇಶ್, ಮಾರತಹಳ್ಳಿ ವಾರ್ಡ್
* ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ: ಸಿ.ಆರ್. ಲಕ್ಷ್ಮೀನಾರಾಯಣ್, ದೊಮ್ಮಲೂರು ವಾರ್ಡ್







