ಮಂಗಳೂರು : ನಕಲಿ ಮದ್ಯ ತಯಾರಿಸುತ್ತಿದ್ದ ಮನೆಗೆ ದಾಳಿ

ಮಂಗಳೂರು, ನ.9: ನಕಲಿ ಮದ್ಯ ತಯಾರಿಸುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿ ಅಬಕಾರಿ ಅಧಿಕಾರಿಗಳು ಪರಿಕರಗಳನ್ನು ವಶಪಡಿಸಿದ್ದಾರೆ.
ನಗರದ ಮೇರಿಹಿಲ್ ಗುರುನಗರದ ಮನೆಯೊಂದರಲ್ಲಿ ಅಕ್ರಮವಾಗಿ ನಕಲಿ ಮದ್ಯ ತಯಾರಿಸುವ ಉದ್ದೇಶದಿಂದ 227 ಲೀ. ಮದ್ಯಸಾರ, ಮದ್ಯ ತಯಾರಿಸುವ ಪರಿಕರಗಳಾದ ಎಸೆನ್ಸ್, ಬಾಟಲಿ, ಮುಚ್ಚಳಗಳನ್ನು ದಾಸ್ತಾನು ಇಟ್ಟಿರುವುದನ್ನು ಅಬಕಾರಿ ಪೊಲೀಸರು ಪತ್ತೆಹಚ್ಚಿದ್ದು, ಆರೋಪಿ ಜಯಪ್ರಕಾಶ್ ಪಿ.ಎಸ್. ಯಾನೆ ಪ್ರಸನ್ನ ಎಂಬಾತನು ತಲೆಮರೆಸಿಕೊಂಡಿದ್ದಾನೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಆದೇಶದಂತೆ ಅಬಕಾರಿ ಆಯುಕ್ತರು, ಉಡುಪಿ ಜಿಲ್ಲೆ ನೇತೃತ್ವದಲ್ಲಿ ಮಂಗಳೂರು ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕ ವಿಜಯ್‌ಕುಮಾರ್, ಉಪ ನರೀಕ್ಷಕ ಜಗನ್ನಾಥ ನಾಯ್, ಸಿಬ್ಬಂದಿಗಳಾದ ಗಿರಿಧರ್, ಸುಪ್ರೀತ್, ವಾಹನ ಚಾಲಕ ಯೋಗೀಶ್ ಮತ್ತು ಉಡುಪಿ ಉಪ ನಿರೀಕ್ಷಕ ನಿತ್ಯಾನಂದ, ಸಿಬ್ಬಂದಿಗಳಾದ ಸಾಹೇಬ್, ಶಾಂತಪ್ಪ ಎಳಗಿ, ಗಣೇಶ್, ಹಿರಿಯ ವಾಹನ ಚಾಲಕ ವೆಂಕಟ್ರಮಣ ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದರು.
Next Story





