ನ.12ಕ್ಕೆ ಮೇಕನಗದ್ದೆ ಲಕ್ಷ್ಮಣಗೌಡರ ಮೂರು ಕೃತಿಗಳ ಬಿಡುಗಡೆ
ಚಿಕ್ಕಮಗಳೂರು, ನ.9: ನಗರದ ಕುವೆಂಪು ಕಲಾ ಮಂದಿರದಲ್ಲಿ ನ. 12ರಂದು ಬೆಳಗ್ಗೆ 10:30ಕ್ಕೆ ಮೇಕನಗದ್ದೆ ಲಕ್ಷ್ಮಣಗೌಡರ ಮೂರು ಕೃತಿಗಳ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶತಾಯುಷಿ, ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಎಂ.ಆರ್. ಸಣ್ಣಸಿದ್ದೇಗೌಡ ರು ವಹಿಸಲಿದ್ದು ವಿಶೇಷ ಆಹ್ವಾನಿತರಾಗಿ ಅಕ್ಕ ಸಂಸ್ಥಾಪಕರು ಹಾಗೂ ಈ ಕವಿ ಸಂಚಾಲಕ ವಿ.ಎಂ.ಕುಮಾರಸ್ವಾಮಿ ಭಾಗವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಜಾನಪದ ತಜ್ಞ ಡಾ.ಶ್ರೀ ಕಂಠಕೂಡಿಗೆ ನಿರ್ವಹಿಸಲಿದ್ದು, ಡಾ.ಜೆ.ಪಿ.ಕೃಷ್ಣೇಗೌಡರು, ಡಾ.ಡಿ.ಎಲ್.ವಿಜಯಕುಮಾರ್ ಹಾಗೂ ಚಿಪ್ರಗುತ್ತಿ ಪ್ರಶಾಂತ್ ಆಗಮಿಸಲಿದ್ದಾರೆ.
ಕ್ರಮವಾಗಿ ಸೃಷ್ಠಿ ಚತುರನ ವಚನಗಳು ಮರೆತು ಹೋದ ಮಲೆನಾಡಿನ ಚಿತ್ರಗಳು ಹಾಗೂ ದೇವವೃಂದ ಕೃತಿಗಳನ್ನು ಬಿಡುಗಡೆಗೊಳಿಸುವರು. ‘ವಚನ ಸೃಷ್ಠಿಯ ಆಚೆ-ಈಚೆ’ ಎಂಬ ವಿಷಯದ ಕುರಿತು ಡಾ.ಬಸವರಾಜ ನೆಲ್ಲಿಸರ ಉಪನ್ಯಾಸ ನೀಡುವರು. ಕಾರ್ಯಕ್ರಮದಲ್ಲಿ ಓಣಿಮನೆ ಪ್ರಕಾಶನದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು. ಬಣಕಲ್ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಪರಮೇಶ್ವರ, ಬೆಂಗಳೂರು ನಗರದ ಕಸ ವಿಲೇವಾರಿ ಕುರಿತು ಪಿಎಚ್‌ಡಿ ಮಾಡಿರುವ ಡಾ. ಡಿ.ಸಿ.ರವಿಕುಮಾರ್ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿ ಅಮ್ರಿನ್‌ತಾಜ್, ತೋರಣಮಾವಿನ ಮೋಹನ್ ಅವರನ್ನು ಸನ್ಮಾನಿಸಲಾಗುವುದು ಎಂದು ಮೇಕನಗದ್ದೆ ಲಕ್ಷ್ಮಣ್‌ಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







