ಕೊಡಗು ಬಂದ್‌ಗೆ ಪಿಎಫ್‌ಐ ವಿರೋಧ
ಮಡಿಕೇರಿ, ನ.9: ಟಿಪ್ಪುಜಯಂತಿಯನ್ನು ವಿರೋಧಿಸಿ ನ.10ರಂದು ಬಿಜೆಪಿ ಹಾಗೂ ಸಂಘ ಪರಿವಾರ ನೀಡಿರುವ ಕೊಡಗು ಬಂದ್ ಕರೆಯನ್ನು ಜಿಲ್ಲೆಯ ಪ್ರಜ್ಞಾವಂತ ಜನತೆ ವಿಫಲಗೊಳಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಎಫ್‌ಐನ ಮಾಜಿ ಜಿಲ್ಲಾಧ್ಯಕ್ಷ ಟಿ.ಎಚ್.ಅಬೂಬಕ್ಕರ್, ಬಂದ್‌ನಿಂದಾಗಿ ಕೊಡಗಿನ ಆರ್ಥಿಕ ಕ್ಷೇತ್ರ ಮತ್ತು ಪ್ರವಾಸೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿರುವುದರಿಂದ ಸಾರ್ವಜನಿಕರು, ರಾಜಕೀಯ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳು ಬಿಜೆಪಿಯ ರಾಜಕೀಯ ಪ್ರೇರಿತ ಬಂದ್‌ನ್ನು ವಿಫಲಗೊಳಿಸಬೇಕು.
ಬಂದ್‌ಗೆ ಕರೆ ನೀಡುವುದು ಕಾನೂನು ಬಾಹಿರವೆಂದು ಈಗಾಗಲೇ ಉಚ್ಚ ನ್ಯಾಯಾಲಯ ತೀರ್ಪು ನೀಡಿದ್ದು, ಬಂದ್‌ಗೆ ಕರೆ ನೀಡಿರುವ ಮುಖಂಡರನ್ನು ಕೊಡಗು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಬಂಧಿಸಬೇಕೆಂದು ಆಗ್ರಹಿಸಿದರು.
ಪಿಎಫ್‌ಐ ಜಿಲ್ಲಾಧ್ಯಕ್ಷ ಟಿ.ಎ.ಹ್ಯಾರೀಸ್ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಪಿಎಫ್‌ಐ ಸದಸ್ಯ ಮನ್ಸೂರ್ ಉಪಸ್ಥಿತರಿದ್ದರು.
Next Story





