ಬಣಜಿಗ ಸಮುದಾಯ ಶಿಕ್ಷಣಕ್ಕೆ ಹೆಚ್ಚು ಒತ್ತು ನಿಡಬೇಕು: ಸೀತಾರಾಮ್

ಹನೂರು, ನ.9: ಬಣಜಿಗ ಸಮುದಾಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ವಿಜ್ಞಾನ ಮತ್ತು ತಂತ್ರ ಜ್ಞಾನ ಹಾಗೂ ಸಾಖ್ಯಿಕ ಮತ್ತು ಯೋಜನೆ ಸಚಿವ ಎಂ.ಆರ್.ಸೀತಾರಾಮ್ ಸಲಹೆ ನೀಡಿದ್ದಾರೆ.
ತಾಲೂಕಿನ ಕುರಟ್ಟಿಹೊಸರು ಗ್ರಾಮದಲ್ಲಿ ಬಣಜಿಗ ಸಮುದಾಯ ಭವನದ ಶಂಕು ಸ್ಥಾಪನೆ ಹಾಗೂ ಎಲ್ಲೆಮಾಳ ಗ್ರಾಮದಲ್ಲಿ ತಾಲೂಕು ಮಟ್ಟದ ಬಣಜಿಗ ಸಂಘವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಈ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಈಗಾಗಲೇ ಸರ್ಕಾರದ ಅನುದಾನದಲ್ಲಿ 60 ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು, ಬಳಿಕ ಶಾಸಕರ ಮತ್ತು ಸಂಸದರ ಅನುದಾನದಡಿಯಲ್ಲಿ 20 ಲಕ್ಷ ರೂ. ಬೇಡಿಕೆ ಇಡಲಾಗಿದೆ. ಉಳಿದ 20 ಲಕ್ಷ ರೂ.ಅನುದಾನ ಸರ್ಕಾರದಿಂದ ಬಿಡುಗಡೆಗೂಳಿಸುವ ಭರವಸೆ ನೀಡಿದರು.
ಬಣಜಿಗ ಸಮುದಾಯ ಶಿಕ್ಷಣಕ್ಕೆ ಇತ್ತು ನೀಡಿದರೆ, ಅಭಿವೃದ್ಧಿ ತಾನಾಗಿಯೇ ಆಗುತ್ತದೆ, ಆದ ಕಾರಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದರು.
ದ್ರುವನಾರಾಯಣ್ ಮಾತನಾಡಿ, ಈ ಭಾಗದ ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಆಗುವಂತಹ ಈ ಭಾಗದಲ್ಲಿ ಒಂದು ಪದವಿ ಪೂರ್ವ ಕಾಲೇಜನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ಗಮನಕ್ಕೆ ತಂದು ಮಂಜೂರು ಮಾಡಿಕೂಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ನರೇಂದ್ರ ರಾಜೂಗೌಡ ಮಾತನಾಡಿ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದಾಗ ನನ್ನ ಕ್ಷೇತ್ರದಲ್ಲಿ ಯಾವುದೇ ಸಮುದಾಯಭವನ ನಿರ್ಮಿಸಲು ಅನುಧಾನ ನೀಡಲಿಲ್ಲ. ಆದರೆ ನಂತರ ಈಗ ನಮ್ಮದೇ ಸರ್ಕಾರ ಆಡಳಿತಕ್ಕೆ ಬಂದ ನಂತರ ಸರಿ ಸುಮಾರು ಕ್ಷೇತ್ರ ವ್ಯಾಪ್ತಿಯಲ್ಲಿ ಸರಿ ಸುಮಾರು 142 ನೇ ಸಮುದಾಯಭವನಕ್ಕೆ ಶಂಕುಸ್ಥಾಪನೆ ಮಾಡುತ್ತಿದ್ದೇನೆ ಎಂದರು.
ಈ ವೇಳೆ ಸಮುದಾಯಭವನ ನಿರ್ಮಾಣ ಮಾಡಲು ಜಾಗ ನೀಡಿದ ದಾನಿಗಳಾದ ಕಾಳಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ, ಅರಗು ಮತ್ತು ಬಣ್ಣ ಕಾರ್ಖಾನೆಯ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜು, ಮಂಜುಳ, ತಾಲೂಕು ಪಂಚಾಯತ್ ಅಧ್ಯಕ್ಷ ರಾಜು, ರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಪಟ್ಟಣ ಪಂಚಾಯತ್ ಅಧ್ಯಕ್ಷೆ ಮಮತಮಹದೇವ, ಮಾಜಿ ಅಧ್ಯಕ್ಷ ರಾಜೂಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ದೊರೈರಾಜ್, ಯೋಗಿನಾರಾಣ ಬಣಜಿಗ ಸಂಘದ ಕಾರ್ಯದರ್ಶಿ ಗೋಪಾಲ ಕೃಷ್ಣ, ಮುಖ್ಯ ಶಿಕ್ಷ ವೆಂಕಟರಾಜು, ಡಾ.ಟಿ.ರಮೇಶ್, ಎಸ್. ಕೃಷ್ಣಪ್ಪ ಹಾಗು ಶೆಟ್ಟಳ್ಳಿ ಮತ್ತಿತರರಿದ್ದರು.







