ಮುರಳಿ ವಿಜಯ್ ಆಕರ್ಷಕ ಶತಕ: ತಮಿಳುನಾಡು 292/3
ರಣಜಿ ಟ್ರೋಫಿ
ಚೆನ್ನೈ, ನ.9: ಒಡಿಶಾ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಆರಂಭಿಕ ಆಟಗಾರ ಮುರಳಿ ವಿಜಯ್ ಶತಕದ (140)ನೆರವಿನಿಂದ ತಮಿಳುನಾಡು 3 ವಿಕೆಟ್ಗೆ 292 ರನ್ ಗಳಿಸಿದೆ. ಸ್ವದೇಶದಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ವೇಳೆ ಗಾಯಗೊಂಡಿದ್ದ ವಿಜಯ್ ಇದೀಗ ದೀರ್ಘಸಮಯದ ಬಳಿಕ ಕ್ರಿಕೆಟ್ಗೆ ವಾಪಸಾಗಿದ್ದಾರೆ.
ಭಾರತ ತಂಡ ನ್ಯೂಝಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯ ವಿರುದ್ಧ ಆಡಿರುವ ಎಲ್ಲ 13 ಪಂದ್ಯಗಳಲ್ಲಿ ವಿಜಯ್ ತಂಡದ ಖಾಯಂ ಆರಂಭಿಕ ಆಟಗಾರನಾಗಿದ್ದರು.
ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದ ವಿಜಯ್ ಶ್ರೀಲಂಕಾದಲ್ಲಿ ನಡೆದಿದ್ದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಆಡಿರಲಿಲ್ಲ. ನ.16 ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲು ವಿಜಯ್ ಸಜ್ಜಾಗಿದ್ದಾರೆ. ವಿಜಯ್ ನಾಯಕ ಅಭಿನವ್ ಮುಕುಂದ್(12)ಅವರೊಂದಿಗೆ ತಮಿಳುನಾಡಿನ ಇನಿಂಗ್ಸ್ ಆರಂಭಿಸಿದರು. ಯುವ ಆಟಗಾರ ನಾರಾಯಣ್ ಜಗದೀಶನ್(88) ಅವರೊಂದಿಗೆ 2ನೆ ವಿಕೆಟ್ಗೆ 144 ರನ್ ಜೊತೆಯಾಟ ನಡೆಸಿದ್ದಾರೆ.
Next Story