Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ದುಃಖದಲ್ಲಿ ಸುಖ

ದುಃಖದಲ್ಲಿ ಸುಖ

ಡಾ. ಬಿ.ಆರ್.ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು

ವಾರ್ತಾಭಾರತಿವಾರ್ತಾಭಾರತಿ9 Nov 2017 6:36 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ದುಃಖದಲ್ಲಿ ಸುಖ

ಜಗತ್ತಿನಲ್ಲಿ ಅನೇಕ ಧರ್ಮಗಳಿವೆ, ಪ್ರತಿಯೊಂದು ಧರ್ಮದ ಅನುಯಾಯಿಗಳಲ್ಲಿ ವಿವಿಧ ಪ್ರಕಾರದ ಭೇದಗಳು ಕಾಣುತ್ತವೆ. ಬಡವರು, ಶ್ರೀಮಂತರು, ಜ್ಞಾನಿಗಳು ಹಾಗೂ ಅಜ್ಞಾನಿಗಳು ಅನ್ನುವ ಸಾಮಾನ್ಯ ಭೇದಗಳು ಎಲ್ಲ ಧರ್ಮದಲ್ಲೂ ಇವೆ. ಅದರೊಂದಿಗೆ ವ್ಯವಸಾಯದಿಂದಾಗಿರುವ ಕೆಲವು ವಿಶಿಷ್ಟ ಭೇದಗಳು ಕೂಡ ಒಂದೇ ಧರ್ಮದ ಅನುಯಾಯಿಗಳಲ್ಲಿ ಕಾಣುತ್ತವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಅನ್ನುವ ಭೇದಗಳು ಕೇವಲ ಹಿಂದೂ ಧರ್ಮದಲ್ಲಷ್ಟೇಯಲ್ಲ ಎಲ್ಲ ಧರ್ಮಗಳಲ್ಲೂ ಇವೆ.

ಮೇಲಿನ ಸಾಮಾನ್ಯ ಹಾಗೂ ವಿಶಿಷ್ಟ ಭೇದಗಳು ಎಲ್ಲೆಡೆ ಸಮಾನವಾಗಿರುವುದರಿಂದ ಹಿಂದೂ ಸಮಾಜದಲ್ಲಿರುವ ವರ್ಗಗಳು ಕೂಡ ಇತರ ಸಮಾಜದಲ್ಲಿರುವ ವರ್ಗಗಳಂತೆಯೇ ಇರಬಹುದು ಎಂದೆನಿಸಬಹುದು. ಆದರೂ ಹಿಂದೂ ಸಮಾಜದಲ್ಲಿಂದು ಬ್ರಾಹ್ಮಣ ಬ್ರಾಹ್ಮಣೇತರರೆಂದು ಉಂಟಾಗಿರುವ ವರ್ಗ ಭೇದ ಸ್ವಲ್ಪ ಮಟ್ಟದಲ್ಲಿ ಅಪೂರ್ವದ್ದಾಗಿದೆ. ಎಷ್ಟು ಅಪೂರ್ವವೆಂದರೆ ಇದಕ್ಕೆ ಸಮಾನವಾದ ಭೇದ ಇನ್ನೆಲ್ಲೂ ಕಾಣುವುದಿಲ್ಲ. ಯುರೋಪಿನಲ್ಲಾದ ಅನೇಕ ಚಳವಳಿಗಳ ಹೆಸರಿನಲ್ಲಿ ರಾಜಾ-ರಾಜರೇತರರು. ಪೋಪ್-ಪೋಪೇತರರು, ಶೀಮಂತ- ಶ್ರೀಮಂತರೇತರರು ಅನ್ನುವ ವ್ಯತ್ಯಾಸವಿದ್ದರೂ ಇಂತಹ ವಿವಿಧ ಹೆಸರುಗಳಿಂದ ಬ್ರಾಹ್ಮಣೇತರ ಚಳವಳಿಯ ರಹಸ್ಯವನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ನನಗನಿಸುತ್ತಿಲ್ಲ. ಬ್ರಾಹ್ಮಣ ಬ್ರಾಹ್ಮಣೇತರ ವಾದವು ಅವಲಂಬಿಸಿರುವ ಭೇದ ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಇದೆ ಉಳಿದ ಧರ್ಮಗಳಲ್ಲಿಲ್ಲ. ಇತರ ಧರ್ಮದ ಅನುಯಾಯಿಗಳಲ್ಲಿ ಕಂಡುಬರುವ ಭೇದಗಳು ಗುಣಭೇದ ವಿಭಾಗಗಳ ತತ್ವದಿಂದ ಉತ್ಪನ್ನವಾಗಿವೆ. ಅದೇ ತತ್ವದಿಂದ ಕಣ್ಣಿಗೆ ಸಹಜವಾಗಿ ಕಾಣುವಂತಹ ಸ್ಪಷ್ಟ ಭೇದಗಳ ವರ್ಗಗಳು ಹಿಂದೂ ಸಮಾಜದಲ್ಲಿವೆ. (ಬಿಳಿ-ಕಪ್ಪು, ಇವು ಕಣ್ಣಿಗೆ ಕಾಣುವಂತಹ ಸ್ಪಷ್ಟ ಭೇದಗಳು) ಆದರೆ ಅದಷ್ಟೇ ಅಲ್ಲದೆ ಜನ್ಮ ಜಾತಿಯಿಂದ ವಿಭಾಗಿಸಲ್ಪಟ್ಟಂತಹ ತತ್ವಗಳನುಸಾರವಾಗಿ ಉತ್ಪನ್ನವಾಗಿರುವ, ಯಾರ ಕಣ್ಣಿಗೂ ಕಾಣದಂತಹ ಸೂಕ್ಷ್ಮ ವರ್ಗಗಳು (ಬ್ರಾಹ್ಮಣ, ಬ್ರಾಹ್ಮಣೇತರ, ವೈಶ್ಯ, ಶೂದ್ರ ಇತ್ಯಾದಿ) ಹಿಂದೂ ಸಮಾಜದಲ್ಲಿರುವಂತೆ ಉಳಿದ ಯಾವ ಸಮಾಜದಲ್ಲಿಲ್ಲ.

ಈ ಎರಡು ರೀತಿಯ ವರ್ಗಗಳನುಸಾರವಾಗಿ ಬಿಳಿ ಜನ ಹಾಗೂ ಕಪ್ಪು ಜನ - ಇವರೆಲ್ಲ ಒಂದೇ ಮನುಕುಲದವರಾಗಿದ್ದರೂ ಚಾತುರ್ವರ್ಣಗಳಿಂದಾಗಿ ಬೇರೆಬೇರೆಯಾಗಿದ್ದಾರೆ. ಉದಾಹರಣೆಯಾಗಿ ಹೇಳುವುದಾದರೆ ಹಣಕ್ಕೆ (ಧನಭೇದ) ಸಂಬಂಧಿಸಿದಂತಹ ವರ್ಗೀಕರಣವಾದರೆ ಈ ಮಿತಿ ಇಲ್ಲಿಯೇ ಮುಗಿಯುವಂತೆ ಹಿಂದೂ ಸಮಾಜದಲ್ಲಿ ಈ ಭೇದಕ್ಕೆ ಇನ್ನೊಂದು ಬಾಲ ಉಳಿದುಕೊಳ್ಳುತ್ತದೆ ಹಾಗೂ ಶ್ರೀಮಂತ ಬ್ರಾಹ್ಮಣ, ಬಡ ಬ್ರಾಹ್ಮಣ, ಬ್ರಾಹ್ಮಣ ಕೂಲಿ, ಹೊಲೆಯ ಕೂಲಿ ಅನ್ನುವಂತಹ ಭೇದಗಳನ್ನು ಮಾಡುವ ಅವಕಾಶ ಬೇರೆಲ್ಲೂ ಸಿಗುವುದಿಲ್ಲ. ಬೇರೆ ಸಮಾಜಗಳಲ್ಲಿ ಜಾತಿಯು ಒಂದೇ ಧರ್ಮದ ತತ್ವವನ್ನು ಅನುಸರಿಸುವುದರಿಂದ ಅಲ್ಲಿಯ ಸಾಮಾಜಿಕ ಚಳವಳಿಯ ಗುರಿ ಕಣ್ಣಿಗೆ ಕಾಣುವಂತಹ (ಸ್ಪಷ್ಟ ಭೇದಗಳು, ಕಪ್ಪು-ಬಿಳುಪು) ಭೇದಗಳನ್ನು ನಾಶ ಮಾಡುವುದಾಗಿರುತ್ತದೆ. ಆದರೆ ಬ್ರಾಹ್ಮಣ ಬ್ರಾಹ್ಮಣೇತರ ಚಳವಳಿ ಹಾಗಲ್ಲ ಅದರ ದೃಷ್ಟಿ ಹಿಂದೂ ಸಮಾಜದಲ್ಲಿರುವ ಸೂಕ್ಷ್ಮ ಭೇದಗಳ ಮೇಲಿದೆ.

ಹಿಂದೂ ಸಮಾಜದಲ್ಲಿ ಸೂಕ್ಷ್ಮ ಭೇದಗಳು ಹುಟ್ಟಿಕೊಂಡಿರುವುದಾದರೂ ಹೇಗೆ? ಅನ್ನುವುದರ ಬಗ್ಗೆ ನಾವು ಈಗ ಚರ್ಚಿಸುವುದಿಲ್ಲ. ಋಗ್ವೇದ ಕಾಲದ ನಂತರ 'ಬ್ರಹ್ಮ ದೇವನ ಹೆರಿಗೆಯಾದ ಮೇಲೆ' ಬ್ರಾಹ್ಮಣರು ಹುಟ್ಟಿದರು (ಅಂದರೆ ಬ್ರಾಹ್ಮಣರನ್ನು ಬ್ರಹ್ಮದೇವ ಹುಟ್ಟುಹಾಕಿದ ಎಂದರ್ಥ) ಹಾಗೂ ಈ ಬ್ರಾಹ್ಮಣರೇ ಮೊದಲಿಗೆ ತಮ್ಮ ಸುತ್ತ ಸುರಕ್ಷೆಯ ಕೋಟೆಯನ್ನು ಕಟ್ಟಿಕೊಂಡರು. ಈ ಕೋಟೆಯನ್ನು ಕಟ್ಟಿಕೊಂಡ ನಂತರವೇ ಬ್ರಾಹ್ಮಣ ಬ್ರಾಹ್ಮಣೇತರ ಅನ್ನುವ ಭೇದ ಹುಟ್ಟಿಕೊಂಡಿತು ಹಾಗೂ ಗುಣಭೇದ ವಿಭಾಗಗಳ ತತ್ವಗಳು ಮಾಯವಾಗಿ ಜಾತಿಭೇದ ವಿಭಾಗಗಳ ತತ್ವಗಳು ಪ್ರಸ್ತಾಪಿಸಲ್ಪಟ್ಟವು.

ಮುಂದೆ ಸಮಯಾನುಸಾರ ಬ್ರಾಹ್ಮಣರಿಗಾಗಿ ಬ್ರಹ್ಮದೇವನ ಹೆರಿಗೆಯಾದಂತೆ ಬ್ರಾಹ್ಮಣೇತರರಲ್ಲೂ ಇದ್ದ ಜಾತಿಗಳು ತಮ್ಮ ಜಾತಿಯಲ್ಲಿದ್ದ ಅಲ್ಲೊಬ್ಬ ಇಲ್ಲೊಬ್ಬರಿಗೆ ಪ್ರಸವ ವೇದನೆಯನ್ನು ಅನುಭವಿಸುವಂತೆ ಮಾಡಿ ತಾವು ಇಂತಿಂತಹ ಋಷಿಗಳಿಂದ ಹುಟ್ಟಿ ಬಂದೆವು, ಇದು ನಮ್ಮ ಕುಲ, ಅದು ನಿಮ್ಮ ಕುಲ, ನಮ್ಮದು ಬೇರೆ ಗೋತ್ರ, ಬೇರೆ ಗಣ ಎಂದು ಹೇಳುತ್ತ ನಾವು ಉಳಿದವರಿಗಿಂತ ಬೇರೆ ಅನ್ನುವ ಭಾವನೆಯನ್ನು ದೃಢೀಕರಿಸಿಕೊಂಡರು ಹಾಗೂ ಬ್ರಾಹ್ಮಣರಂತೆ ಪ್ರತಿಯೊಂದು ಜಾತಿಯವರು ತಮ್ಮ ಸುತ್ತ ಕೋಟೆಗಳನ್ನು ಕಟ್ಟಲು ಆರಂಭಿಸಿದರು. ಈ ಕೋಟೆಗಳನ್ನು ಕಟ್ಟುವ ಉದ್ದೇಶ ಉಳಿದವರಿಗಿಂತ ನಾವು ಬೇರೆ ಎಂದು ತೋರಿಸುವ ಉದ್ದೇಶ ಮಾತ್ರವಾಗಿದ್ದಿದ್ದರೆ ಒಳ್ಳೆಯದಿತ್ತು. ಆದರೆ ಮೊದಲು ಕೋಟೆಗಳನ್ನು ಕಟ್ಟಿಕೊಳ್ಳಲು ಆರಂಭಿಸಿದ ಬ್ರಾಹ್ಮಣರ ಉದ್ದೇಶ ತಾವು ಬೇರೆ ಎಂದು ತೋರಿಸಿಕೊಳ್ಳುವುದಲ್ಲದೆ ತಾವೇ ಎಲ್ಲರಿಗಿಂತ ಶ್ರೇಷ್ಠರು ಎಂದು ತೋರಿಸಿಕೊಳ್ಳುವುದಿತ್ತು ಅನ್ನುವುದು ನಿರ್ವಿವಾದ.

ಬ್ರಾಹ್ಮಣೇತರ ಜಾತಿಗಳಲ್ಲಿ ಸೇರುವ ಜಾತಿಗಳು ಈ ಕೋಟೆ ಕಟ್ಟಿಕೊಳ್ಳುವ ಪದ್ಧತಿಯನ್ನು ಅನುಸರಿಸಿದಾಗ ಅದರಲ್ಲಿ ಸೇರಿಕೊಂಡಿದ್ದ ಶ್ರೇಷ್ಠ ಕನಿಷ್ಠವೆಂಬ ಭಾವನೆಗಳು ಅವರಿಂದ ತಾವಾಗಿಯೇ ಅನುಸರಿಸಲ್ಪಟ್ಟವು. ಈ ಭೇದಭಾವದ ಗೋಡೆಗಳಿಂದಾಗಿ ಪ್ರತಿಯೊಂದು ಜಾತಿಗೂ ತಾವು ಇತರ ಜಾತಿಗಳಿಗಿಂತ ಬೇರೆ, ಅಷ್ಟೇ ಅಲ್ಲ ಉಳಿದ ಜಾತಿಗಳಿಗಿಂತ ತಮ್ಮ ಜಾತಿ ಶ್ರೇಷ್ಠ ಅನ್ನುವ ಭಾವನೆ ಬೆಳೆಯಿತು. ಎಲ್ಲ ಜಾತಿಗಳೂ ಈ ಭಾವನೆಯಿಂದ ಪೀಡಿತರಾಗಿರುವುದು ಕಾಣುತ್ತದೆ. ಬ್ರಾಹ್ಮಣ ನಿಲುವಿನ ವ್ಯಾಖ್ಯೆಯನ್ನು ಯಾರೂ ಹೇಗೇ ಮಾಡಿರಲಿ ಹುಟ್ಟಾ ಉಚ್ಚ ನೀಚ ಭಾವನೆ ಅನ್ನುವುದೇ ಬ್ರಾಹ್ಮಣ ನಿಲುವಿನ ನಿಜವಾದ ವ್ಯಾಖ್ಯೆ ಎಂದು ನನಗೆ ಹೇಳಬೇಕೆನಿಸುತ್ತದೆ ಹಾಗೂ ಅದೇ ಅರ್ಥದಲ್ಲಿ ನಾವು ಈ ಶಬ್ದವನ್ನು ಉಪಯೋಗಿಸಲಿದ್ದೇವೆ.

ಪ್ರಾಚೀನ ಇತಿಹಾಸವನ್ನು ಓದಿದವರಿಗೆ ಬ್ರಾಹ್ಮಣ ನಿಲುವಿನ ಉಗಮವಾದಂದಿನಿಂದ ಬ್ರಾಹ್ಮಣೇತರರು ಅದನ್ನು ವಿರೋಧಿಸುತ್ತಿದ್ದಾರೆ ಅನ್ನುವುದು ತಿಳಿಯುತ್ತದೆ. ಆದರೆ ಇತ್ತೀಚಿನ ಕಾಲದಲ್ಲಿ ಈ ವಾದಕ್ಕೆ ಎಂತಹ ತೀವ್ರ ಸ್ವರೂಪ ಬಂದಿದೆಯೆಂದರೆ ಹೀಗೆ ಹಿಂದೆಂದೂ ಇರಲಿಲ್ಲ. ಹಿಂದಿನ ಕಾಲದಲ್ಲಿ ಹಿಂದೂ ಸಮಾಜದ ಚೌಕಟ್ಟನ್ನು ಗುಣ ವಿಭಾಗ ಇಲ್ಲವೆ ಜಾತಿವಿಭಾಗ ಅನ್ನುವ ಯಾವುದೇ ಜಾಗದಲ್ಲಿಟ್ಟರೂ ಒಂದೇಯಾಗಿರುತ್ತಿತ್ತು. ಎರಡೂ ಚೌಕಟ್ಟುಗಳಲ್ಲಿ ಎಲ್ಲೂ ಹೆಚ್ಚಿನ ಅಂಕುಡೊಂಕುಗಳಿರುತ್ತಿರಲಿಲ್ಲ. ಇದಕ್ಕೆ ಕಾರಣ ಒಬ್ಬ ಮನುಷ್ಯ ಶ್ರೇಷ್ಠ ಜಾತಿಯಲ್ಲಿ ಹುಟ್ಟಿದರೆ ಗುಣದಲ್ಲೂ ಶ್ರೇಷ್ಠನಾಗಿರುತ್ತಿದ್ದನು ಹಾಗೂ ಕನಿಷ್ಠ ಜಾತಿಯಲ್ಲಿ ಹುಟ್ಟಿದರೆ ಗುಣದಲ್ಲೂ ಕನಿಷ್ಠನಾಗಿರುತ್ತಿದ್ದನು. ಹಾಗಾಗಿ ಶ್ರೇಷ್ಠ ಜಾತಿಯಲ್ಲಿ ಹುಟ್ಟಿದವನು ಒಳ್ಳೆಯ ಗುಣದವನು ಹಾಗೂ ಕೀಳು ಜಾತಿಯಲ್ಲಿ ಹುಟ್ಟಿದವನು ಕೀಳು ಗುಣದವನು ಅನ್ನುವ ಈ ಸಂಬಂಧ ಯಾವುದೇ ದೈವಿ ಪ್ರಕಾರ ಎಂದು ಯಾರೂ ತಿಳಿದುಕೊಳ್ಳಬಾರದು.

ಕೀಳು ಜಾತಿಯವರು ಗುಣವಂತರಾಗದಂತೆ ಕಾನೂನು ತಡೆಯೊಡ್ಡಿತ್ತು. ಆದ್ದರಿಂದ ಕನಿಷ್ಠ ಜಾತಿಯವರು ಗುಣದಿಂದಲೂ ಕನಿಷ್ಠರಾಗೇ ಉಳಿದವರು ಅನ್ನುವುದು ಮನುಸ್ಮತಿಯಂತಹ ಸ್ಮತಿಗ್ರಂಥದಿಂದ ಎಲ್ಲರೂ ತಿಳಿದುಕೊಳ್ಳಬಹುದು. ಆದರೆ ಬ್ರಿಟಿಷ್ ರಾಜ್ಯದಲ್ಲಿ ಈ ಕಟ್ಟುಪಾಡುಗಳನ್ನು ತೆಗೆದುಹಾಕಿದ್ದರಿಂದ ಸಮಾಜದ ಮೊದಲಿನ ಚೌಕಟ್ಟು ಹಾಳಾಗಿ ಬ್ರಾಹ್ಮಣರ ಮನೆಯಲ್ಲಿ ಗುಣಹೀನ ಶೂದ್ರ ವೃತ್ತಿಯ ಸಂತತಿ ಹುಟ್ಟುತ್ತಿದೆ. ಹೀಗೆ ಗುಣಗಳ ಹಾಗೂ ಜಾತಿಯ ಪ್ರತ್ಯಕ್ಷವಾದ ವಿರೋಧ ಹುಟ್ಟಿಕೊಂಡಿರುವುದರಿಂದ ಇಂದು ಬ್ರಾಹ್ಮಣೇತರ ಚಳವಳಿ ಜೋರು ಹಿಡಿದಿದೆ. ಈ ವಿರೋಧವನ್ನು ಹೋಗಲಾಡಿಸಲು ಬ್ರಾಹ್ಮಣ ನಿಲುವನ್ನು ನಷ್ಟ ಮಾಡುವುದು ಆವಶ್ಯಕವಾಗಿದೆ. ಬ್ರಾಹ್ಮಣ ನಿಲುವಿನಿಂದಾಗಿ ಹಿಂದೂ ಸಮಾಜಕ್ಕೆ ಎಷ್ಟು ನಷ್ಟವಾಗಿದೆ ಅನ್ನುವುದು ಈಗ ಎಲ್ಲರಿಗೂ ಅರ್ಥವಾಗಿದೆ. ಈ ಬ್ರಾಹ್ಮಣ ನಿಲುವಿನಿಂದಾಗಿ ಬ್ರಾಹ್ಮಣೇತರರ ಶಿಕ್ಷಣದ ಬಾಗಿಲು ಮುಚ್ಚಲ್ಪಟ್ಟು ಅವರನ್ನು ಅಜ್ಞಾನದಲ್ಲಿಡಲಾಯಿತು.

ವೇದಗಳಂತಹ ಧಾರ್ಮಿಕ ಗ್ರಂಥಗಳನ್ನೂ ಓದದಂತಹ ಕಟ್ಟುಪಾಡುಗಳನ್ನು ಹೇರಲಾಯಿತು. ಜಾತಿಯಿಲ್ಲದೆ ಗತಿಯಿಲ್ಲ ಅನ್ನುವಂತಹ ಸಂಕುಚಿತ ತತ್ವಜ್ಞಾನದ ಅಮಂಗಲ ಜೀವನವನ್ನು ಜನತೆಯ ಸೆರಗಿಗೆ ಹಾಕಿ ಅಖಿಲ ಜನತೆಯ ಮನೋಭಾವನೆಗಳನ್ನು ವೈಯಕ್ತಿಕ ಉನ್ನತಿಗಾಗಿ ಹಾಗೂ ಸುಧಾರಣೆಗಾಗಿ ಅಗತ್ಯವಿರುವ ಅವಕಾಶಗಳನ್ನು ಇವರಿಂದ ದೂರವಿಡಲಾಯಿತು. ವಿಧಿಯೆದುರು ಎಲ್ಲ ಪ್ರಯತ್ನಗಳೂ ವ್ಯರ್ಥ ಅನ್ನುವಂತಹ ಪಾಠಗಳನ್ನು ಹೇಳಿಕೊಟ್ಟು ಎಲ್ಲರ ಏಳಿಗೆಯನ್ನು ಕುಂಠಿತಗೊಳಿಸಲಾಯಿತು. ಮಡಿಮೈಲಿಗೆಯ ಹಾಗೂ ಸ್ಪರ್ಶಗಳ ಕಲ್ಪನೆಗಳನ್ನು ಹರಡಿ ಜನರಿಗೆ ಮನುಷ್ಯತ್ವದಂತಹ ಬೆಲೆಬಾಳುವ ವಸ್ತುವನ್ನು ಧಿಕ್ಕರಿಸಲು ಕಲಿಸಲಾಯಿತು. ಧರ್ಮದ ತಪ್ಪು ನಂಬಿಕೆಗಳನ್ನು ಹೆಚ್ಚಿಸಿ ನಿಜವಾದ ಧರ್ಮದ ಜ್ಞಾನ ಸಿಗದಂತೆ ಎಚ್ಚರಿಕೆ ವಹಿಸಲಾಯಿತು.

ಬ್ರಿಟಿಷ್ ಸಾಮ್ರಾಜ್ಯದ ಇಂಗ್ಲಿಷ್ ನಿಲುವಿನಿಂದ ಈ ದೇಶಕ್ಕೆ ತುಂಬ ನಷ್ಟವಾಗಿದೆ ಎಂದು ಯಾವಾಗಲೂ ದೊಡ್ಡದಾಗಿ ಬಾಯಿ ಮಾಡುವವರಿಗೆ ಬ್ರಾಹ್ಮಣ ನಿಲುವಿನಿಂದ ಹಿಂದೂ ಸಮಾಜಕ್ಕೆ ಎಷ್ಟು ನಷ್ಟವಾಗಿದೆ ಅನ್ನುವುದರ ಬಗ್ಗೆ ಸ್ವಲ್ಪವೂ ಗೊತ್ತಿರುವಂತೆ ಕಾಣುತ್ತಿಲ್ಲ. ನನಗನಿಸಿದ ಮಟ್ಟಿಗೆ ಇಂಗ್ಲಿಷ್ ನಿಲುವು ಹಾಗೂ ಬ್ರಾಹ್ಮಣ ನಿಲುವು ಇವೆರಡು ಹಿಂದೂಗಳ ಮೈಗಂಟಿಕೊಂಡಿರುವ ಜಿಗಣೆಗಳು. ಅವು ಸತತವಾಗಿ ಹಿಂದೂಗಳ ನೆತ್ತರು ಹೀರುತ್ತಿವೆ.

ಇಂಗ್ಲಿಷ್ ನಿಲುವಿನ ರಾಜ್ಯವು ಜನರನ್ನು ದೈಹಿಕವಾಗಿ ಗುಲಾಮರನ್ನಾಗಿ ಮಾಡಿಕೊಂಡಿದ್ದರೆ ಬ್ರಾಹ್ಮಣ ನಿಲುವು ಜನರ ಆತ್ಮವನ್ನೇ ಗುಲಾಮರನ್ನಾಗಿ ಮಾಡಿಕೊಂಡಿತು. ಆಂಗ್ಲ ನಿಲುವು ಭಾರತದ ಸಂಪತ್ತನ್ನು ಕೊಳ್ಳೆಹೊಡೆದರೆ ಬ್ರಾಹ್ಮಣ ನಿಲುವು ಸ್ವಾಭಿಮಾನದಂತಹ ಆತ್ಮದ ಸಂಪತ್ತನ್ನೇ ಕಸಿದುಕೊಂಡಿತು. ಹೀಗಿರುವಾಗ ಎಲ್ಲ ರೀತಿಯ ಉನ್ನತಿಕಾರಕ ಚಳವಳಿಗಳನ್ನು ತಮ್ಮದಾಗಿಸಿಕೊಂಡ ಬ್ರಾಹ್ಮಣರು ಬ್ರಾಹ್ಮಣೇತರ ಚಳವಳಿಯಲ್ಲಿ ಭಾಗವಹಿಸುತ್ತಿಲ್ಲ ಅನ್ನುವುದು ಸೋಜಿಗದ ವಿಷಯವಲ್ಲವೇ? ಬ್ರಾಹ್ಮಣರು ಎಲ್ಲ ರೀತಿಯ ಚಳವಳಿಗಳಲ್ಲಿ ಮುಂದಾಳತ್ವ ವಹಿಸುತ್ತಾರೆ. ರಾಜಕೀಯ ಚಳವಳಿಗಳಂತೂ ಅವರ ಜೀವಾಳ, ಒಂದು ಪಕ್ಷ ಅವರಿಗೆ ಊಟ ಸಿಗದಿದ್ದರೂ ನಡೆದೀತು ಆದರೆ ದಿನದ ಇಪತ್ನಾಲ್ಕು ಗಂಟೆಗಳಲ್ಲಿ ರಾಜಕಾರಣದ ಒಂದು ತುತ್ತು ಮೊಸರನ್ನ ಬಾಯಿಗೆ ಹೋಗದಿದ್ದರೆ ಅವರಿಗೆ ಆಮಾಂಶದ ತೊಂದರೆಯಾದೀತು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X