ವೇಶ್ಯಾವಾಟಿಕೆ: 6 ಮಂದಿ ಬಂಧನ
ಮಂಗಳೂರು, ನ. 10: ನಗರದ ಪಿ.ಎಂ.ರಾವ್ ರಸ್ತೆಯಲ್ಲಿರುವ ವಸತಿಗೃಹವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಆರು ಮಂದಿಯನ್ನು ಪೊಲೀಸರು ಬಂಧಿಸಿ, ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಲಾಡ್ಜ್ ಮಾಲಕ ಆಕಾಶಭವನದ ಶಶಿಧರ (42), ಪುತ್ತೂರಿನ ಹರೀಶ್ (34), ಕೈಕಾರ್‌ನ ಸುದೇಶ್ (21), ಉಪ್ಪಿನಂಗಡಿಯ ನಜೀಬ್ (34), ಕಾರ್ಕಳದ ಸಂದೀಪ್ (29), ಹಾಸನದ ಕುಮಾರ್ (30) ಎಂದು ಗುರುತಿಸಲಾಗಿದೆ.
ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರರಣ ದಾಖಲಾಗಿದೆ. ಕೇಂದ್ರ ಉಪವಿಭಾಗದ ಎಸಿಪಿ ಉದಯ ನಾಯಕ್, ಬಂದರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಾಂತರಾಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
Next Story





