ಗ್ರಾಹಕ ಸೇವಾ ಸೂಚ್ಯಂಕ: ಮಂಗಳೂರಲ್ಲಿ ಟಾಟಾ ಮೋಟರ್ಸ್‌ಗೆ ಅಗ್ರಸ್ಥಾನ
ಮಂಗಳೂರು, ನ. 10: ವಾಹನ ಮಾರಾಟ ಮಾಡಿದ ನಂತರದ ಗ್ರಾಹಕ ಸೇವೆಯಲ್ಲಿ ಟಾಟಾ ಮೋಟರ್ಸ್ ಮಂಗಳೂರಿನಲ್ಲಿ ನಂಬರ್ ಒನ್ ಸ್ಥಾನ ಗಳಿಸಿದೆ. ಜೆ.ಡಿ. ಪವರ್ 2017ರ ಇಂಡಿಯಾ ಕಸ್ಟಮರ್ ಸರ್ವೀಸ್ ಇಂಡೆಕ್ಸ್ (ಮಾಸ್ ಮಾರ್ಕೆಟ್) ಅಧ್ಯಯನದಲ್ಲಿ ಟಾಟಾ ಮೋಟರ್ಸ್ ಮೊದಲ ಸ್ಥಾನ ಪಡೆದಿದೆ.
ಈ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಟಾಟಾ ಮೋಟರ್ಸ್‌ಗೆ 1000 ಅಂಕಗಳಲ್ಲಿ 958 ಪಾುಂಟ್ ಲಭಿಸಿದೆ. ಈ ಮೂಲಕ ಅತ್ಯುತ್ತಮ ಗ್ರಾಹಕ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂತೆಯೇ ರಾಷ್ಟ್ರಮಟ್ಟದಲ್ಲಿ ಟಾಟಾ ಮೋಟರ್ಸ್ 2ನೆ ಸ್ಥಾನ ಪಡೆದಿದೆ. ಇಲ್ಲಿ 1000 ಪಾಯಿಂಟ್‌ಗೆ 893 ಅಂಕಗಳನ್ನು ಪಡೆದಿದೆ. ಸೇವಾ ಗುಣಮಟ್ಟ, ಸೇವಾ ಉಪಕ್ರಮ, ಸೇವಾ ಸಲಹೆಗಾರ, ಸೇವಾ ಸೌಲಭ್ಯ ಮತ್ತು ನಗರದಲ್ಲಿ ವಾಹನ ಪಿಕ್-ಅಪ್ ಹೀಗೆ ಗ್ರಾಹಕರ ಸೇವೆಯ ಐದು ಅಂಶಗಳ ಮೇಲೆ ಟಾಟಾ ಮೋಟರ್ಸ್ ಹೆಚ್ಚು ಗಮನಹರಿಸುತ್ತಾ ಬಂದಿದೆ.
ಈ ಮೂಲಕ ಶೇ.100ರಷ್ಟು ಗ್ರಾಹಕ ಸಂತೃಪ್ತಿಯನ್ನು ನೀಡುತ್ತಿದೆ ಎಂದು ಟಾಟಾ ಮೋಟರ್ಸ್‌ನ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್ ಯೂನಿಟ್‌ನ ಗ್ರಾಹಕ ಸೇವೆಯ ಮುಖ್ಯಸ್ಥ ದಿನೇಶ್ ಭಾಸಿನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





