ಭಕ್ತಿ ಪರಂಪರೆ ಚಲನ ಶೀಲತೆಯೊಂದಿಗೆ ವಿಸ್ತರಿಸಿದೆ: ಪ್ರೊ.ಟಿ.ಎಸ್.ಸತ್ಯನಾಥ್

ಮಂಗಳೂರು, ನ.10: ಚಲನ ಶೀಲ ಗುಣವನ್ನು ಹೊಂದಿರುವ ಭಕ್ತಿ ಪರಂಪರೆ ಕಾಲಾಂತರದಲ್ಲಿ ವಿವಿಧ ಮಾರ್ಪಾಡುಗಳೊಂದಿಗೆ ದೇಶಾದ್ಯಂತ ವಿಸ್ತರಿಸುತ್ತಾ ಸಾಗಿದೆ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ ಎಂದು ದೆಹಲಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಟಿ.ಎಸ್.ಸತ್ಯನಾಥ್ ತಿಳಿಸಿದ್ದಾರೆ.
ಮಂಗಳೂರು ವಿಶ್ವ ವಿದ್ಯಾನಿಲಯದ ಕನಕ ಸಂಶೋಧನಾ ಕೇಂದ್ರ ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ ಮಾಲಿಕೆ ಯ ಕನಕನ ಲೋಕಯಾನ ಕನಕ ಚಿಂತನೆ 2017-18ನೆ ಅಂಗವಾಗಿ ಕರ್ನಾಟಕ ಥಿಯೋಲಾಜಿಕಲ್ ಕಾಲೇಜು ಬಲ್ಮಠ ಇದರ ಸಹಯೋಗದೊಂದಿಗೆ ಸಹೋದಯ ಸಭಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ ಕನಕ ದಾಸರಿಗೆ ಸಂಬಂಧಿಸಿದಂತೆ ಭಕ್ತಿ ಒಂದು ಪರ್ಯಾಯ ನೋಟ ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಆಧುನಿಕ ಭಾರತೀಯ ಭಾಷೆಗಳ ಸಾಹಿತ್ಯ ಅಧ್ಯಯನ ಕೇಂದ್ರ ದಕ್ಷಿಣ ಭಾರತದಲ್ಲಿ ದ್ರಾವಿಡ ರ ಮೂಲಕ 6ನೆ ಶತಮಾನದಲ್ಲಿ ಬೆಳಕಿಗೆ ಬಂದ ಭಕ್ತಿ ಚಳವಳಿ ಆಧುನಿಕ ಶಿಕ್ಷಣ ಪದ್ಧತಿಯ ಬಳಿಕ ಕೀರ್ತನೆಗಳೊಂದಿಗೆ ಲಪಿಬದ್ಧ ಸಂಸ್ಕೃತಿಗಳೊಂದಿಗೆ ವಸಾಹತು ಶಾಹಿ ಚರಿತ್ರೆಯ ನಿರ್ಮಿತಿಗಿಂತ ಭಿನ್ನವಾಗಿ ಭಾರತೀಯ ಚರಿತ್ರೆ ಅನಾವರಣಗೊಳ್ಳುತ್ತದೆ. ವಸಾಹತು ಶಾಹಿ ಕಾಲದ ಅಧ್ಯಯನದ ಪ್ರಕಾರ ಭಕ್ತಿ ಪಂಥ ಕ್ರೈಸ್ತ ಭಕ್ತಿ ಪರಂಪರೆಯ ಮಾದರಿಯಲ್ಲಿ ಬೆಳೆದು ಬಂದಿದೆ ಎಂದು ಅಭಿಪ್ರಾಯ ಪಟ್ಟರೂ ಇದಕ್ಕಿಂತ ಭಿನ್ನವಾದ ರೀತಿಯ ಅಧ್ಯಯನ ಭಾರತೀಯ ಚರಿತ್ರಕಾರರು ಮಾಡುತ್ತಾ ಕ್ರಿಸ್ತ ಪೂರ್ವದಲ್ಲಿಯೇ ಭಾರತದಲ್ಲಿ ಈ ಚಳವಳಿ ಆರಂಭಗೊಂಡಿದೆ. ಅದು ದಕ್ಷಿಣ ಭಾರತದ ತಮಿಳುನಾಡಿನಿಂದ ಒಳಗೊಂಡು ಕರ್ನಾಟಕ, ಆಂಧ್ರ, ಗುಜರಾತಿನ ಮೂಲಕ ವಿಸ್ತರಿಸಿದೆ. ತಮಿಳುನಾಡಿನಲ್ಲಿ ಆರಂಭಗೊಂಡ ಈ ಭಕ್ತಿ ಪರಂಪರೆ ಕರ್ನಾಟಕದ ವಚನ ಚಳವಳಿಯಲ್ಲಿ ಮುಂದುವರಿಯುತ್ತದೆ.16ನೆ ಶತಮಾನದ ಹೊತ್ತಿಗೆ ಹಲವು ರುಪಾಂತರ ಗಳೊಂದಿಗೆ ಈ ಚಳವಳಿ ಶೈವ ಪಂಥದಿಂದ ಶೈವ ಪಂಥಕ್ಕೆ ಸಾಗುತ್ತದೆ ಎಂದು ಸತ್ಯನಾಥ್ ತಿಳಿಸಿದ್ದಾರೆ.
ಸುಮಾರು 150 ವರ್ಷಗಳ ಭಕ್ತಿ ಪರಂಪರೆಯ ಅಧ್ಯಯನ ಮಾಡಿದಾಗ ಭಕ್ತಿ ಪರಂಪರೆ ಸಾಮಾಜಿಕ ಕಲಾ ಮಾಧ್ಯಮವಾಗಿ ಲಿಪಿ ಸಹಿತ ಸಾಹಿತ್ಯ ಪರಂಪರೆಗೆ ಪರ್ಯಾಯವಾಗಿ ಬೆಳೆದು ಬಂದಿದೆ. ದಕ್ಷಿಣ ಭಾರತದ ದ್ರಾವಿಡ ಪರಂಪರೆಯಲ್ಲಿ ಭಕ್ತಿ ಪಂಥ ಆರಂಭವಾಗಿದೆ.ಹರಿವಂಶ ಪುರಾಣ ಇದಕ್ಕೊಂದು ಉದಾಹರಣೆಯಾಗಿದೆ ಎಂದು ಇತಿಹಾಸಕಾರ ಆರ್.ವಿ.ಭಂಡಾರ್‌ಕರ್ ತಿಳಿಸಿದ್ದಾರೆ.
ಪುರಾಣಗಳು ಚಲನಶೀಲವಾಗಿ ನಿರಂತರವಾಗಿ ಬೆಳೆಯುತ್ತಿರುತ್ತದೆ. ಕಣ್ಣಪ್ಪ -ಕನಕದಾಸರ ಭಕ್ತಿ ಪ್ರತಿಲೋಮವಾಗಿ ಬೆಳೆದ ಪರಂಪರೆಯಾಗಿದೆ. ಉಡುಪಿಯ ಕೃಷ್ಣ ಮಠದಲ್ಲಿ ಪೂರ್ವದಲ್ಲಿದ್ದ ದೇವರ ವಿಗ್ರಹ ಪಶ್ಚಿಮಕ್ಕೆ ಮುಖ ಮಾಡಿದೆ ಎನ್ನುವ ಪುರಾಣ ಸಮಾಜದ ಕೆಳ ಸ್ತರದ ಜನರು ಕಂಡು ಕೊಂಡ ಭಕ್ತಿ ಮಾರ್ಗದ ಪ್ರತೀಕವಾಗಿದೆ ಎಂದು ಸತ್ಯನಾಥ್ ತಿಳಿಸಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಕ್ರೈಸ್ತ ವಿದ್ಯಾಸಂಸ್ಥೆಗಳ ಪ್ರಾಂಶುಪಾಲ ರೆ.ಡಾ.ಹನಿಬಾಲ್ ಕಬ್ರಾಲ್ ವಹಿಸಿದ್ದರು. ಮಂಗಳೂರು ವಿಶ್ವ ವಿದ್ಯಾನಿಲಯದ ಕನಕದಾಸ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ.ಬಿ.ಶಿವರಾಮ ಶೆಟ್ಟಿ ಸ್ವಾಗತಿಸಿದರು. ರೂಪಶ್ರೀ ನಾಗರಾಜ್ ಕನಕನ ಹಾಡು ಹಾಡಿದರು. ಮಧುಕಿರಣ್ ವಂದಿಸಿದರು.







