ನ. 12ರಂದು ‘ಅಜ್‌ವಾ’ ಡ್ರೈ ಫ್ರೂಟ್ ಮಳಿಗೆ ಉದ್ಘಾಟನೆ
ಮಂಗಳೂರು, ನ. 10: ಬಿಕರ್ನಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ಕಟ್ಟಡದಲ್ಲಿ ನೂತನ ‘ಅಜ್‌ವಾ’ ಡ್ರೈ ಫ್ರೂಟ್ ಮಳಿಗೆ ನ. 12ರಂದು ಉದ್ಘಾಟನೆಗೊಳ್ಳಲಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎ.ಮೊಯ್ದಿನ್ ಬಾವ ಅವರು ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.
ಮಿತ್ತಬೈಲ್ ಉಸ್ತಾದ್ ಅಲ್‌ಹಾಜ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ದುವಾ ನೆರವೇರಿಸಲಿದ್ದಾರೆ. ಮನಪಾ ಆಯುಕ್ತ ಮುಹಮ್ಮದ್ ನಝೀರ್, ಕಾರ್ಪೊರೇಟರ್‌ಗಳಾದ ಸಬಿತಾ ಮಿಸ್ಕಿತ್, ರೂಪಾ ಡಿ.ಬಂಗೇರ, ಜಿ.ಎ.ಬಾವ, ಪಿ.ಬಿ.ಅಬ್ದುಲ್ ಹಮೀದ್, ಡಾ.ಬಿ.ಅಬ್ದುರ್ರಹ್ಮಾನ್, ಅಬ್ದುಲ್ ಅಝೀಝ್ ಭಾಗವಹಿಸಲಿದ್ದಾರೆ ಎಂದು ಮಾಲಕ ಪಿ.ಎಸ್.ಹುಸೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





