ಅಯ್ಯಪ್ಪ ಸ್ವಾಮಿ ಭಕ್ತ ಸೇವಾ ಸಮಿತಿ: ಅಧ್ಯಕ್ಷರಾಗಿ ಪ್ರೇಮನಾಥ ಆಯ್ಕೆ

ಮಂಗಳೂರು, ನ. 12: ಅಯ್ಯಪ್ಪ ಸ್ವಾಮಿ ಭಕ್ತ ಸೇವಾ ಸಮಿತಿಯ ವಾರ್ಷಿಕ ಮಹಾಸಭೆಯು ಬಳ್ಳಾಲ್‌ಬಾಗ್ ವಿವೇಕನಗರದ ಕಾನದ-ತಟದ ವೇದಿಕೆಯಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಮನಪಾ ಮಾಜಿ ಸದಸ್ಯ ಪ್ರೇಮ್‌ನಾಥ್ ಪಿ.ಬಿ.ಬಳ್ಳಾಲ್‌ಬಾಗ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಎನ್.ಕೆ.ಬಾಬು, ಉಪಾಧ್ಯಕ್ಷರಾಗಿ ರಾಧಾಕೃಷ್ಣ ಎಂ., ಕಾರ್ಯದರ್ಶಿಯಾಗಿ ಗೌತಮ್ ಎಂ.ಸಿ., ಜೊತೆ ಕಾರ್ಯದರ್ಶಿಯಾಗಿ ರತನ್ ವಿ.ಎಸ್.,ಕೋಶಾಧಿಕಾರಿಯಾಗಿ ನವೀನ್ ಡಿ.ವಿ. ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿಗೆ 20 ಮಂದಿಯನ್ನು ಆರಿಸಲಾಯಿತು.ನವೀನ್ ಡಿ.ವಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರೇಮ್‌ನಾಥ್ ಪಿ.ಬಿ. ವಂದಿಸಿದರು.
Next Story





