ಬ್ರೈನೋಬ್ರೈನ್ ಸ್ಪರ್ಧೆ: ಮಡಿಕೇರಿ ಕೇಂದ್ರಕ್ಕೆ ಪ್ರಶಸ್ತಿ
.jpg)
ಮಡಿಕೇರಿ,ನ.12:ಇತ್ತೀಚೆಗೆ ಚೆನ್ನೈಯಲ್ಲಿ ಜರುಗಿದ 34ನೇ ರಾಷ್ಟಮಟ್ಟದ ಬ್ರೈನೋಬ್ರೈನ್ ಅಬಾಕಸ್ ಸ್ಪರ್ಧೆಯಲ್ಲಿ ಜಿಲ್ಲೆಯ ಮಡಿಕೇರಿ ಕೇಂದ್ರಕ್ಕೆ 2 ಚಾಂಪಿಯನ್ ಪ್ರಶಸ್ತಿ ಹಾಗೂ 1 ಬಂಗಾರದ ಪದಕ ಲಭಿಸಿದೆ.ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದಿಂದ ಒಟ್ಟು ಮೂರು ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಗೌತಮ್ ಕೆ.ಜಿ, ಸುಜಾನ್ ಎಂ.ಎ ಚಾಂಪಿಯನ್ ಪ್ರಶಸ್ತಿ ಹಾಗೂ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿಶಾಖ್ ಶ್ರೀನಿವಾಸ್ ಎನ್.ಎ ಬಂಗಾರದ ಪದಕ ಗಳಿಸಿದ್ದಾರೆ.
ಶಿಕ್ಷಕಿ ಮಾಪಂಗಡ ಕವಿತಾ ಕರುಂಬಯ್ಯ ಅವರ ಮಾರ್ಗದರ್ಶನದಲ್ಲಿ ಈ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ ಒಟ್ಟು 4500 ವಿದ್ಯಾರ್ಥಿಗಳು ಭಾಗವಹಿಸಿದ್ದರು.
Next Story





