ಟೆಂಪೊ ಢಿಕ್ಕಿ: ಮಹಿಳೆ ಮೃತ್ಯು
ಕಾರ್ಕಳ, ನ.12: ಕಾರ್ಕಳ ಮೂರು ಮಾರ್ಗ ಜಂಕ್ಷನ್‌ನಲ್ಲಿ ನ.11ರಂದು ಬೆಳಗ್ಗೆ ಟೆಂಪೊವೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ತೆಳ್ಳಾರು ನಿವಾಸಿ ಲಿಂಗೇಗೌಡ ಎಂಬವರ ಪತ್ನಿ ಕಮಲ ಗೌಡ ಎಂದು ಗುರುತಿಸಲಾಗಿದೆ.
ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇವರಿಗೆ ಕಾರ್ಕಳ ಬಸ್ ನಿಲ್ದಾಣದ ಕಡೆಯಿಂದ ಆನೆಕೆರೆ ಕಡೆಗೆ ಬರುತ್ತಿದ್ದ ಟೆಂಪೋ ಢಿಕ್ಕಿ ಹೊಡೆಯಿತು. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯ ಗೊಂಡ ಅವರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





