ಹಿತಮಿತ ಆಹಾರದಿಂದ ಮಧುಮೇಹ ನಿಯಂತ್ರಣ: ಸಚಿವ ಪ್ರಮೋದ್

ಉಡುಪಿ, ನ.17: ಆಹಾರ ಪದ್ಧತಿ ಮತ್ತು ನೀರಿನಿಂದಾಗಿ ಶೇ.90ರಷ್ಟು ಖಾಯಿಲೆಗಳು ಬರುತ್ತಿದ್ದು, ಹಿತ ಮಿತ ಆಹಾರ ಬಳಕೆಯ ಜೊತೆಗೆ ಶಿಸ್ತು ಕಾಪಾಡಿದರೆ ಮಧುಮೇಹ ದಂತಹ ರೋಗದಿಂದ ದೂರ ಇರಬಹುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಆದರ್ಶ ಆಸ್ಪತ್ರೆಯ ವತಿಯಿಂದ ವಿಶ್ವ ಡಯಾಬಿಟೀಸ್ ದಿನದ ಅಂಗವಾಗಿ ಆಸ್ಪತ್ರೆಯಲ್ಲಿ ರವಿವಾರ ಆಯೋಜಿಸಲಾದ ಉಚಿತ ಡಯಾಬಿ ಟೀಸ್ ಮಾಹಿತಿ ಹಾಗೂ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತ ನಾಡುತ್ತಿದ್ದರು.
ನಾವು ಹಿತಮಿತವಿಲ್ಲದೇ ಆಹಾರ ಸೇವನೆ ಮಾಡುವುದರಿಂದ ಸಾಕಷ್ಟು ಕಾಯಿಲೆಗಳನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಹಾರದಲ್ಲಿ ಮಿತ ಬಳಕೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು. ಎಷ್ಟು ಆಹಾರ ಸೇವಿಸು ತ್ತೇವೆಯೋ ಅದಕ್ಕೆ ಹೊಂದಿಕೊಳ್ಳುವ ದೇಹರಚನೆ ನವ್ಮುದ್ದಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ.ಪಾಟೀಲ್ ಮಾತನಾ ಡಿದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್, ಹಿರಿಯ ತಜ್ಞರುಗಳಾದ ಪ್ರೊ.ಎ.ರಾಜಾ, ಡಾ.ಎನ್.ಆರ್.ರಾವ್, ಡಾ. ಶ್ರೀಕಾಂತ್ ಕೃಷ್ಣ, ಡಾ.ಶ್ರೀನಾಥ್ ಶೆಟ್ಟಿ, ಲ್ಯಾನ್ಸಿ ಕಾರ್ಡೇರಿಯೋ ಉಪಸ್ಥಿತರಿ ದ್ದರು. ಮಧುಮೇಹ ರೋಗದ ಪರಿಣಾಮ, ನಿಯಂತ್ರಣ, ಆಹಾರ ಪದ್ಧತಿ, ಪತ್ತೆ ಹಚ್ಚುವ ವಿಧಾನದ ಬಗ್ಗೆ ವಿವಿಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಾಹಿತಿ ನೀಡಿದರು.







