ಬಾಳೇ ಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ, ಅದು ಈ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ
ಬಾಳೇಹಣ್ಣಿನ ಆರೋಗ್ಯಕರ ಗುಣಗಳು ಎಲ್ಲರಿಗೂ ಗೊತ್ತು. ಆದರೆ ನಾವು ಹಣ್ಣನ್ನು ತಿಂದೆಸೆಯುವ ಸಿಪ್ಪೆಯೂ ಆರೋಗ್ಯಕರ ಗುಣಗಳನ್ನು ಹೊಂದಿದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.
ಬಾಳೇಹಣ್ಣಿನಲ್ಲಿ ಹಲವಾರು ಪೌಷ್ಟಿಕಾಂಶಗಳು ಮತ್ತು ಕಾರ್ಬೋಹೈಡ್ರೇಟ್ಗಳು ಸಮೃದ್ಧವಾಗಿವೆ. ಬಿ6 ಮತ್ತು ಬಿ12 ವಿಟಾಮಿನ್ಗಳು, ಪೊಟ್ಯಾಷಿಯಂ ಮತ್ತು ಮ್ಯಾಗ್ನೇಷಿಯಂ ಕೂಡ ಹೇರಳವಾಗಿವೆ. ಬಾಳೆಹಣ್ಣಿನ ಸಿಪ್ಪೆ ಕಪ್ಪಾದಾಗ ತಿರುಳಿನಲ್ಲಿ ಸಕ್ಕರೆಯ ಅಂಶವು ಅತ್ಯಧಿಕವಾಗಿರುತ್ತದೆ.
ಬಾಳೇಹಣ್ಣಿನ ಸಿಪ್ಪೆಯು ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಹೇಗೆ ಸಹಕಾರಿಯಾಗಿದೆ ಎಂಬ ಬಗ್ಗೆ ಮಾಹಿತಿಗಳು ಇಲ್ಲಿವೆ.
ಬಾಳೇಹಣ್ಣಿನ ಸಿಪ್ಪೆಯ ಒಳಭಾಗದಲ್ಲಿರುವ ಬಿಳಿಯ ನಾರಿನಂತಹ ವಸ್ತುವನ್ನು ಹಲವಾರು ವಿಧಗಳಲ್ಲಿ ಬಳಸಬಹುದು. ಹಲ್ಲುಗಳನ್ನು ಬಿಳಿಯಾಗಿಸಲು ಅದನ್ನು ಬಳಸಬಹುದು ಎನ್ನುವುದು ಅದರ ಅಚ್ಚರಿದಾಯಕ ಲಾಭಗಳಲ್ಲೊಂದಾಗಿದೆ. ಎರಡು ವಾರಗಳವರೆಗೆ ಸಿಪ್ಪೆಯ ಒಳಭಾಗದಿಂದ ಹಲ್ಲುಗಳನ್ನು ನಿಯಮಿತವಾಗಿ ಉಜ್ಜಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದು.
ಚರ್ಮದ ಮೇಲೆ ನರೂಲಿಗಳಿದ್ದರೆ ಅದನ್ನು ಬಾಳೇಹಣ್ಣಿನ ಸಿಪ್ಪೆಯಿಂದ ತೊಲಗಿಸ ಬಹುದಾಗಿದೆ. ಅದು ನರೂಲಿಗಳನ್ನು ತೆಗೆಯುವ ಜೊತೆಗೆ ಭವಿಷ್ಯದಲ್ಲಿ ಅವು ಮರುಕಳಿಸುವುದನ್ನು ತಡೆಯುತ್ತದೆ. ತನ್ನ ಉತ್ಕರ್ಷಣ ನಿರೋಧಕ ಮತ್ತು ವಯಸ್ಸಾಗು ವುದನ್ನು ತಡೆಯುವ ಗುಣಗಳಿಂದಾಗಿ ಬಾಳೇಹಣ್ಣಿನ ಸಿಪ್ಪೆ ಚರ್ಮದ ಒಟ್ಟಾರೆ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಬಾಳೇಹಣ್ಣಿನ ಸಿಪ್ಪೆಯು ನೋವು ನಿವಾರಕ ಗುಣವನ್ನು ಹೊಂದಿದ್ದು ಸೋರಿಯಾಸಿಸ್ನ ಚಿಕಿತ್ಸೆಗೆ ಬಳಸಹುದಾಗಿದೆ. ಶರೀರದಲ್ಲಿ ವೃಣಗಳಾಗಿರುವ ಜಾಗದಲ್ಲಿ ಸಿಪ್ಪೆಯನ್ನು ಉಜ್ಜುವುದು ನೋವಿನಿಂದ ಪಾರಾಗಲು ಅತ್ಯುತ್ತಮ ವಿಧಾನವಾಗಿದೆ.
ಸಿಪ್ಪೆಯ ಒಳಭಾಗವನ್ನು ಬೇರ್ಪಡಿಸಿ ಅದನ್ನು ತಿನ್ನುವುದರಿಂದ ಶರೀರದ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ.
ಬಾಳೇಹಣ್ಣಿನ ಸಿಪ್ಪೆಯನ್ನು ಬಳಸುವ ಮುನ್ನ ಗಮನಿಸಬೇಕಾದ ಕೆಲವು ವಿಷಯ ಗಳಿವೆ.ಅತ್ಯುತ್ತಮ ಫಲಿತಾಂಶಗಳಿಗಾಗಿ ತಾಜಾ ಬಾಳೇಹಣ್ಣಿನ ಸಿಪ್ಪೆಯನ್ನೇ ಬಳಸಬೇಕು. ಸಿಪ್ಪೆ ಸುಲಿದ ಬಾಳೆಹಣ್ಣನ್ನು ಹೆಚ್ಚು ಸಮಯ ಇಡಬಾರದು. ಸಿಪ್ಪೆಯನ್ನು ತೆಗೆದ ತಕ್ಷಣ ಅದನ್ನು ಬಳಸಬೇಕು. ಬಾಳೇಹಣ್ಣನ್ನು ತಂಪಾದ ಮತ್ತು ಒಣಜಾಗದಲ್ಲಿ ಉಷ್ಣತೆ ಮತ್ತು ಬಿಸಿಲು ತಾಗದಂತೆ ಇರಿಸಿ. ಬಾಳೇಹಣ್ಣಿನ ಸಿಪ್ಪೆಗಳನ್ನೆಂದೂ ಫ್ರಿಝ್ನಲ್ಲಿಡಬೇಡಿ.