Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. 'ಪುರಸಭೆಯ ಆನ್ ಲೈನ್ ಕೊಠಡಿಯೊಳಗೆ...

'ಪುರಸಭೆಯ ಆನ್ ಲೈನ್ ಕೊಠಡಿಯೊಳಗೆ ಬ್ರೋಕರ್‌ಗಳು ನುಗ್ಗಿ ವ್ಯವಹಾರ ನಡೆಸುತ್ತಾರೆ'

ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ

ವಾರ್ತಾಭಾರತಿವಾರ್ತಾಭಾರತಿ13 Nov 2017 7:35 PM IST
share
ಪುರಸಭೆಯ ಆನ್ ಲೈನ್ ಕೊಠಡಿಯೊಳಗೆ ಬ್ರೋಕರ್‌ಗಳು ನುಗ್ಗಿ ವ್ಯವಹಾರ ನಡೆಸುತ್ತಾರೆ

ಬಂಟ್ವಾಳ, ನ.13: ಪುರಸಭೆಯ ಆನ್ ಲೈನ್ ಕೊಠಡಿಯೊಳಗೆ ಬ್ರೋಕರ್‌ಗಳು ಹಾಗೂ ಕೆಲ ತಾಪಂ ಸದಸ್ಯರು ರಾಜಾರೋಷವಾಗಿ ನುಗ್ಗಿ ತಮ್ಮ ವ್ಯವಹಾರ ನಡೆಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕಡಿವಾಣ ಹಾಕುವಂತೆ ಸೋಮವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.

ಅಧ್ಯಕ್ಷರ ಅನುಮತಿ ಮೇರಗಿನ ವಿಚಾರದಲ್ಲಿ ಪ್ರಸ್ತಾವಿಸಿದ ಸದಸ್ಯ ಗೋವಿಂದ ಪ್ರಭು, ಸದಸ್ಯರೇ ಆ ಕೊಠಡಿಗೆ ಹೋಗುತ್ತಿಲ್ಲ. ಅಂತದರಲ್ಲಿ ಬ್ರೋಕರುಗಳು, ಕೆಲ ತಾಪಂ ಸದಸ್ಯರು ನೇರವಾಗಿ ಕೊಠಡಿಗೆ ನುಗ್ಗುತ್ತಾರಂದರೆ ಕೇಳುವವರು ಇಲ್ಲವೆ? ಎಂದು ಪ್ರಶ್ನಿಸಿದರು.

ಅಲ್ಲಿ ಮಹಿಳಾ ಸಿಬ್ಬಂದಿಗಳೇ ಇರುತ್ತಾರೆ. ಬ್ರೋಕರುಗಳು ಅಲ್ಲಿ ಕುಳಿತು ಖಾತೆ ಬದಲಾಯಿಸುವ, ಅರ್ಜಿ ತುಂಬಿಸುವ ಕೆಲಸ ಮಾಡಿದರೆ ಯಾರ ಖಾತೆ, ಯಾರಿಗೋ ಆದರೆ ಯಾರು ಹೊಣೆ? ಈ ವಿಚಾರ ಈಗಾಗಲೇ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದ ಮುಖ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು.

ಅಧ್ಯಕ್ಷ ರಾಮಕೃಷ್ಣ ಆಳ್ವ ಪ್ರತಿಕ್ರಿಯಿಸಿ, ಈ ವಿಚಾರ ನನ್ನ ಗಮನಕ್ಕೂ ಬಂದಿದೆ. ಸದಸ್ಯರಾದ ಜಗದೀಶ ಕುಂದರ್, ಗಂಗಾಧರ, ಶರೀಫ್ ರವರು ಇದಕ್ಕೆ ಧ್ವನಿಗೂಡಿಸಿದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಆ ಕೊಠಡಿಗೆ ಯಾರಿಗೂ ಪ್ರವೇಶವಿಲ್ಲ ಎಂಬ ಫಲಕ ಹಾಕುವಂತೆ ಸೂಚಿಸಿದರು. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಾಧಿಕಾರಿ ರೇಖಾ ಶೆಟ್ಟಿ ತಿಳಿಸಿದರು.

ಪುರಸಭಾ ನಿಧಿಯ ಖಾತೆಯಲ್ಲಿ ಹಣ ಖಾಲಿಯಾಗಿದೆಯೇ? ಎಂಬ ವಿಚಾರ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತು. ಪುರಸಭೆ ನಿಧಿಯಿಂದ ಪ್ರತಿ ಸದಸ್ಯರ ವಾರ್ಡ್‌ನ ಅಭಿವೃದ್ಧಿ ಕಾಮಗಾರಿಗಳಿಗೆ ತಲಾ 2 ಲಕ್ಷ ರೂ. ಕಾಮಗಾರಿಗೆ ಅನುದಾನ ಮೀಸಲಿಡಲಾಗಿತ್ತು. ಆದರೆ ಕೆಲವು ಸದಸ್ಯರು ಪೂರ್ಣಗೊಂಡಿದ್ದರೆ . ಇನ್ನೂ ಕೆಲವರ ಕಾಮಗಾರಿ ಬಾಕಿಯಿದೆ. ಪೂರ್ಣಗೊಂಡ ಕಾಮಗಾರಿ ಬಿಲ್ಲು ಪಾವತಿ ಬಾಕಿಯಿದ್ದು, ಅನುದಾನ ಇಲ್ಲ ಎಂದು ಸಬೂಬು ಹೇಳಲಾಗುತ್ತಿದೆ ಎಂದು ಸದಸ್ಯರು ಸಭೆಯ ಗಮನ ಸೆಳೆದರು.

ಈ ವೇಳೆ ಪುರಸಭೆಯ ನಿಧಿಯ ಖಾತೆಯನ್ನು ಪರಿಶೀಲಿಸಿದಾಗ 5,18,190 ರೂ. ಇರುವುದು ಕಂಡು ಬಂತು. ಇದರಲ್ಲಿ 4ಲಕ್ಷ ರೂ. ಅಧಿಕ ಮೊತ್ತವನ್ನು ಈಗಾಗಲೆ ಚೆಕ್‌ಅನ್ನು ನೀಡಲಾಗಿದೆ. ಅಲ್ಲದೆ ಇದರರಲ್ಲಿರುವ ಬಾಕಿ ಹಣಕ್ಕೂ ಚೆಕ್‌ವೊಂದನ್ನು ನೀಡಲಾಗಿದೆ ಎಂದು ಮುಖ್ಯಾಧಿಕಾರಿ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ದೇವದಾಸ್ ಶೆಟ್ಟಿ ಪುರಸಭೆ ಇನ್ನು ಸಾಲ ಮಾಡಬೇಕಾದಿತೇ? ಎಂದರು. ಪುರಸಭೆಯಲ್ಲಿ ಖರ್ಚು ಜಾಸ್ತಿ, ಆದಾಯ ಕಡಿಮೆಯಾಗುತ್ತಿದೆ ಎಂದು ಮುಖ್ಯಾಧಿಕಾರಿ ಅವರು ಹೇಳಿದರು.

ಬಹುತೇಕ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ಅನಧೀಕೃತ ನೀರಿನ ಸಂಪರ್ಕಗಳಿದ್ದು, ನೀರಿನ ಕರ ವಸೂಲಾತಿಯಲ್ಲೂ ಹಿನ್ನೆಡೆಯಾಗಿದೆ. ಅಲ್ಲದೆ ಆದಾಯ ಬರುವಂತಹ ಯಾವುದೇ ಕಾರ್ಯಕ್ರಮಗಳನ್ನು ಮಾಡಲಾಗುತ್ತಿಲ್ಲ ಎಂದು ಸದಸ್ಯ ಸದಾಶಿವ ಬಂಗೇರ ಆಕ್ರೋಶ ವ್ಯಕ್ತಪಡಿಸಿದರೆ, ಜಾಹೀರಾತು ಫಲಕಗಳಿಂದಲೂ ನಿರ್ಣಯದಂತೆ ದರ ವಸೂಲಿ ಮಾಡುತ್ತಿರುವ ಬಗ್ಗೆ ಸದಸ್ಯ ದೇವದಾಸ್ ಶೆಟ್ಟಿ ಗಮನಕ್ಕೆ ತಂದರು.

ಈಗಾಗಲೇ ಪ್ರಕಟಿಸಿದಂತೆ ಪ್ರತೀ ಸದಸ್ಯರ ವಾರ್ಡ್‌ನ ಅಭಿವೃದ್ಧಿ ಕಾಮಗಾರಿಗೆ ತಲಾ 2 ಲಕ್ಷ ರೂ.ವನ್ನು ಹಂತಹಂತವಾಗಿ ನೀಡಲು ಕ್ರಮಕೈಗೊಳ್ಳವಂತೆ ಸ್ಥಾಯಿ ಸಮಿತಿಯ ಅಧ್ಯಕ್ಷ ವಾಸುಪೂಜಾರಿ ಸಲಹೆ ನೀಡಿದರು.

ಕೈಕುಂಜೆಯಲ್ಲಿ ನಿರ್ಮಾಣವಾಗುತ್ತಿರುವ ಕನ್ನಡಭವನಕ್ಕೆ ಕಾನೂನಿನಲ್ಲಿ ಅವಕಾಶವಿದ್ದರೆ ಅನುದಾನ ನೀಡುವುದಕ್ಕೆ ಅಭ್ಯಂತರವಿಲ್ಲ ಎಂದು ದೇವದಾಸ ಶೆಟ್ಟಿ ಹೇಳಿದರೆ, ಪುರಸಭೆಯಿಂದ ನಿರಾಪೇಕ್ಷಣಾ ಪತ್ರ ಪಡೆಯದೆ ಭವನ ನಿರ್ಮಿಸಲಾಗುತ್ತಿದೆ. ಆರು ತಿಂಗಳ ಹಿಂದೆಯಷ್ಠೆ ಅದಕ್ಕೆ ತರಾತುರಿಯಲ್ಲಿ ತಹಶೀಲ್ದಾರರು ದಾಖಲೆ ಪತ್ರ ತಯಾರಿಸಿ ಕೊಟ್ಟಿದ್ದಾರೆ. ಈ ಸಂಬಂಧ ನನ್ನಲ್ಲಿ ಪೂರ್ತಿ ಮಾಹಿತಿ ಇದೆ. ಪಾರ್ಕಿಂಗ್ ಮತ್ತಿತರ ಉದ್ದೇಶಕ್ಕೆ ಈ ಹಿಂದೆ ಸರಕಾರದಿಂದ 54 ಸೆಂಟ್ಸ್ ಸ್ಥಳವನ್ನು ಪುರಸಭೆ ಖರೀದಿಸಿತ್ತು. ಆ ಜಾಗ ಎಲ್ಲಿ ಹೋಗಿದೆ?. ಮಾರ್ಕೆಟ್‌ಗೆಂದು ಎಪಿಎಂಸಿಗೆ ನೀಡಿದ ಜಾಗವನ್ನು ಅತಿಕ್ರಮಿಸಲಾಗಿದೆ. ಪಾರ್ಕಿಂಗ್ ಮೀಸಲುಜಾಗವನ್ನು ಎಲೆಕ್ಟ್ರಾನಿಕ್ಸ್ ಮಳಿಗೆ ಸಹಿತ ಖಾಸಗಿಯವರು ಅತಿಕ್ರಮಣ ಮಾಡಿದ್ದಾರೆ. ಜಿಲ್ಲಾಧಿಕಾರಿಯವರು ಇಲ್ಲಿ ಪಾರ್ಕಿಂಗ್‌ಗೆ ಸೂಕ್ತ ಸ್ಥಳ ಎಂದು ತಿಳಿಸಿದ್ದರು.

ಆದರೆ ಅಲ್ಲಿ ರಾಜಕೀಯ ಒತ್ತಡ ತಂದು ರಸ್ತೆ ಬದಿಯಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗಿದೆ ಎಂದು ಗೋವಿಂದ ಪ್ರಭು ಆರೋಪಿಸಿದರಲ್ಲದೆ, ಕೈಕುಂಜ ರಸ್ತೆಯೇ ಮೂಲನಕ್ಷೆಯಂತಿಲ್ಲ ಎಂಬುದಕ್ಕಾಗಿಯೇ ಲೋಕಾಯಕ್ತಕ್ಕೆ ದೂರು ನೀಡಿದ್ದೇನೆ ಎಂದರು.

ಬೀದಿ ವ್ಯಾಪಾರಿಗಳಿಗೆ ವ್ಯಾಪಾರಿ ವಲಯ ನಿರ್ಮಿಸಲು ಬಡ್ಡಕಟ್ಟೆ,ಜಕ್ರಿಬೆಟ್ಟು,ಬಿ.ಸಿ.ರೋಡಿನಲ್ಲಿ ಜಾಗ ಗುರುತಿಸಲು ನಿರ್ಧರಿಸಲಾಯಿತು. ಮೊದಲಿಗೆ ಬಿ.ಸಿ.ರೋಡಿನ ಪಾರ್ಕಿಂಗ್ ವ್ಯವಸ್ಥೆಯನ್ನು ಸರಿ ಮಾಡಿ ಎಂದು ಸದಸ್ಯ ಲೋಕೇಶ್ ಸುವರ್ಣ ಕೋರಿದರು.

ಮೂರು ದಿನದೊಳಗೆ ಬಡ್ಡಕಟ್ಟೆ ಶೌಚಾಲಯವನ್ನು ಶುಚಿಗೊಳಿಸಲಾಗುವುದು ಎಂದು ಸದಸ್ಯ ಪ್ರವೀಣ್ ಅವರ ಪ್ರಶ್ನೆಗೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಭರವಸೆಯಿತ್ತರು. ಬಿ.ಮೂಡ ಗ್ರಾಮದ ಪಲ್ಲಮಜಲಿನ ಬದಲಾಗಿ ಪ್ರಸ್ತುತ ತ್ಯಾಜ್ಯ ಘಟಕ ನಿರ್ಮಾಣ ಹಂತದಲ್ಲಿರುವ ಕಂಚಿನಡ್ಕ ಪದವಿನಲ್ಲಿಯೇ ಪೈರೋಲಿಸಿಸ್ ಯಂತ್ರವನ್ನು ಅಳವಡಿಸಲು ನಿರ್ಧರಿಸಲಾಯಿತು.

ಬಾರದ ಅಧಿಕಾರಿಗಳು, ತೀವ್ರ ತರಾಟೆ: ಪುರಸಭೆ ಮೀಟಿಂಗ್‌ಗೆ ನಾನಾ ಇಲಾಖೆಗಳ ಅಧಿಕಾರಿಗಳು ಬಾರದೇ ಇರುವುದು ಹಾಗೂ ಪುರಸಭೆಗೆಂದು ನಿಯುಕ್ತಿಯಾದ ಅಧಿಕಾರಿಳು ಬೇರೆ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಬೇರೆಡೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ವೇತನ ಪಡೆದು ಉಳಿದೆಡೆ ಕೆಲಸ ಮಾಡುವವರು ನಮಗೆ ಬೇಡ ಎಂದು ಸದಾಶಿವ ಬಂಗೇರ ಆಕ್ಷೇಪ ವ್ಯಕ್ತಪಡಿಸಿದರು.

ಆಶ್ರಯ ಯೋಜನೆ ಗೊತ್ತೇ ಇಲ್ಲ: ಆಶ್ರಯ ಯೋಜನೆಯಡಿ ಸರ್ವೇ ಕಾರ್ಯ ಹಾಗೂ ಹಕ್ಕುಪತ್ರ ವಿತರಿಸುವ ಸಂದರ್ಭ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ಇಲ್ಲ ಎಂದು ಆಡಳಿತ ಪಕ್ಷದ ಸದಸ್ಯರೇ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಈ ಸಂದರ್ಭ ಮಹಮ್ಮದ್ ಶರೀಫ್, ಚಂಚಲಾಕ್ಷಿ, ಪ್ರವೀಣ್, ಮುನೀಶ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಸಹಿತ ಬಹುತೇಕ ಸದಸ್ಯರು ಮಾತನಾಡಿ, ಈ ಸಂಬಂಧ ಯಾವ ವಿಚಾರವೂ ನಮ್ಮ ಗಮನಕ್ಕೆ ಬರುವುದಿಲ್ಲ ಎಂದು ದೂರಿದರು. ಆರು ವರ್ಷದ ಹಿಂದೆ ಅರ್ಜಿ ಕೊಟ್ಟವರಿಗೆ ಈವರೆಗೂ ಹಕ್ಕು ಪತ್ರ ನೀಡಿಲ್ಲ, ಒಂದು ವರ್ಷ, ಆರು ತಿಂಗಳ ಹಿಂದೆ ಅರ್ಜಿ ಕೊಟ್ಟು ರಾಜಕೀಯ ಒತ್ತಡ ತಂದವರಿಗೆ ಹಕ್ಕು ಪತ್ರ ನೀಡಲಾಗುತ್ತಿದೆ ಎಂದು ಆಡಳಿತ ಪಕ್ಷದ ಸದಸ್ಯರೇ ಅಧಿಕಾರಿ ಮತ್ತಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಮೊನೀಶ್ ಅಲಿ ಮಧ್ಯ ಪ್ರವೇಶಿಸಿ ಮಾತನಾಡಿ, ತನ್ನ ವಾರ್ಡ್‌ನಲ್ಲಿ ಸರ್ವೇ ನಡೆಸಿ ನಾಲ್ವರು ಫಲಾನುಭವಿಗಳ ಫೋಟೊವನ್ನು ತೆಗೆದು ವರ್ಷ ಕಳೆದರೂ ಈವರೆಗೂ ಹಕ್ಕುಪತ್ರ ನೀಡಿಲ್ಲ. ಹಾಗೆಯೇ ಬಂಟ್ವಾಳ ಪೇಟೆಯಿಂದ 6 ಇಂಚು ಪೈಪ್ ಲೈನ್ ಕೆಳಗಿನಪೇಟೆಗೆ ಬರುವ ಸಂದರ್ಭ 3 ಇಂಚು ಮತ್ತು 4 ಇಂಚಿನ ಪೈಪಿಗೆ ಸೇರುವ ಕಾರಣ ಸರಿಯಾದ ನೀರು ಪೂರೈಕೆ ಆಗುತ್ತಿಲ್ಲ ಎಂದು ಆಪಾದಿಸಿದರು.

ಪೈಪ್ ಲೈನ್ ಬದಲಾಯಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ. ಈ ವಿಚಾರವಾಗಿ ನಾಲ್ಕೈದು ಬಾರಿ ಮುಖ್ಯಾಧಿಕಾರಿ ಬಳಿ ಚರ್ಚಿಸಿದ್ದೇನೆ. ಆದರೆ ಇಷ್ಟರವರೆಗೆ ಸಮಸ್ಯೆ ಬಗೆಹರಿಯದ ಕಾರಣ ವಾರ್ಡಿನ ಸಮಸ್ತ ನಾಗರಿಕರ ಮೂಲಕ ನ.17ರಂದು ಪ್ರತಿಭಟನೆ ನಡೆಸುತ್ತೇನೆ ಎಂದು ಆಲಿ ಎಚ್ಚರಿಸಿ, ಮತ್ತೆ ಮನವಿಯನ್ನು ನೀಡಿದರು.

ರಾಜೀವ ಗಾಂಧಿ ವಸತಿ ಯೋಜನೆ ನಿವೇಶನ ಅಭಿವೃದ್ಧಿ ವಿಚಾರದಲ್ಲಿ ಬುಡಾ ಅಧ್ಯಕ್ಷ ಸದಾಶಿವ ಬಂಗೇರ ಗರಂ ಆದರು. ಇದಕ್ಕೆ ಎಷ್ಟು ಹಣ ಖರ್ಚು ಮಾಡಲಾಗುತ್ತಿದೆ, ಇದು ಸರಿಯಾದ ಕ್ರಮದಲ್ಲಿ ಆಗುತ್ತಿದೆಯೇ ಎಂದು ಪ್ರಶ್ನಿಸಿದರು.

ಮನೆ, ಮನೆಯಿಂದ ಕಸ ವಿಲೇವಾರಿಗೆ ಸಂಬಂಧಿಸಿ ಪುರಸಭೆಯ ಹೆಸರಿನಲ್ಲಿ 30 ರೂ.ಗೆ ಬದಲು ಹೆಚ್ಚುವಾರಿಯಾಗಿ 50 ರೂ. ಸಂಗ್ರಹಿಸುತ್ತಿರುವ ಹಿನ್ನಲೆಯಲ್ಲಿ ಗುತ್ತಿಗೆದಾರನಿಗೆ ಪುರಸಭೆಯಿಂದ ಶೋಕಾಸ್ ನೊಟೀಸ್ ಜಾರಿ ಮಾಡುವ ನಿರ್ಣಯ ಕೈಗೊಳ್ಳಲಾಗಿತ್ತಾದರೂ, ಪುರಸಭೆ ಈವರಾಗೂ ಗುತ್ತಿಗೆದಾರನಿಗೆ ನೊಟೀಸ್ ಜಾರಿಗೊಳಿಸದಿರುವುದು ಬೆಳಕಿಗೆ ಬಂತು. ಈ ಬಗ್ಗೆ ಸದಸ್ಯ ದೇವದಾಸ ಶೆಟ್ಟಿಯವರ ಪ್ರಶ್ನೆಗೆ ಅಧ್ಯಕ್ಷರು, ಮುಖ್ಯಾಧಿಕಾರಿಯವರು ಮುಖಮುಖ ನೋಡಿ ಗೊಣಗಿಕೊಂಡರು ಕಿರುನಗೆ ಬೀರಿ, ವಿಷಯಾಂತರಿಸಿದರು.

ಇತ್ತೀಚೆಗೆ ನೇತ್ರಾವತಿ ನದಿಯಲ್ಲಿ ಕೋಳಿ ತ್ಯಾಜ್ಯ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ಸದಸ್ಯರಿಂದ ಮಾಹಿತಿ ಬಂದಾಕ್ಷಣ ಸ್ಥಳಕ್ಕೆ ತೆರಳಿ ಅದನ್ನು ತೆರವುಗೊಳಿಸಲಾಗಿದೆ. ಕೋಳಿ ತ್ಯಾಜ್ಯ ಎಸೆಯುವವರ ಬಗ್ಗೆ ನಾವೇ ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರಗಿಸುವುದಾಗಿ ಪೊಲೀಸರು ಹೇಳಿದ್ದಾರೆ ಎಂದು ಮುಖ್ಯಾದಿಕಾರಿಯವರು ಸಭೆಗೆ ತಿಳಿಸಿದರು.

ಅಧ್ಯಕ್ಷ ರಾಮಕೃಷ್ಣ ಆಳ್ವ ಸಭಾಧ್ಯಕ್ಷತೆ ವಹಿಸಿದ್ದರು. ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ ವೇದಿಕೆ ಯಲ್ಲಿದ್ದರು. ಸದಸ್ಯರಾದ ಮಹಮ್ಮದ್ ಇಕ್ಬಾಲ್, ಬಿ.ಮೋಹನ್, ಪ್ರವೀಣ್, ಗಂಗಾಧರ್, ರಾಜೀವಿ, ಚಂಚಲಾಕ್ಷಿ, ಜಗದೀಶ ಕುಂದರ್, ಜೆಸಿಂತ, ಪ್ರಭಾ ಸಾಲ್ಯಾನ್, ಮಹಮ್ಮದ್ ಶರೀಫ್, ಜಗದೀಶ ಕುಂದರ್, ವಸಂತಿ ಚಂದಪ್ಪ, ಸುಗುಣ ಕಿಣಿ, ಭಾಸ್ಕರ ಟೈಲರ್ ಚರ್ಚೆಯಲ್ಲಿ ಪಾಲ್ಗೊಂಡರು.

ಅಂತಿಮವಾಗಿ ಪುರಸಭೆಯ ನಿರ್ಣಯವನ್ನು ಈಗಲೇ ದಾಖಲಿಸುವಂತೆ ಸದಸ್ಯರಾದ ಗೋವಿಂದ ಪ್ರಭು ಮತ್ತು ದೇವದಾಸ ಶೆಟ್ಟಿ ಅವರು ಪಟ್ಟುಹಿಡಿದರು. ಮಧ್ಯಾಹ್ನದ ಬಳಿಕ ದಾಖಲಿಸಿ, ಮೂರು ದಿನಗಳ ಒಳಗೆ ಪ್ರತಿ ನೀಡುವುದಾಗಿ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರು ಉತ್ತರಿಸಿದರು. ಇದನ್ನು ಸದಸ್ಯ ದೇವದಾಸ್ ಶೆಟ್ಟಿ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X