ಶಬರಿಮಲೆಯ ಪಂಪಾಗೆ ಹೊಸ ಬಸ್ ನಿಯೋಜನೆ
ಬೆಂಗಳೂರು, ನ.13: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ವಿಭಾಗವು ಪ್ರಯಾಣಿಕರ ಅನುಕೂಲಕ್ಕಾಗಿ ಡಿಸೆಂಬರ್ 1 ರಿಂದ ಬೆಂಗಳೂರಿನಿಂದ ಶಬರಿಮಲೆಯ ಪಂಪಾಗೆ ರಾಜಹಂಸ ಬಸ್ ನಿಯೋಜಿಸುತ್ತಿದೆ.
ಪ್ರತಿದಿನ ರಾತ್ರಿ 1.30ಕ್ಕೆ ಹೊರಡಲಿರುವ ಬಸ್ ಬೆಳಗ್ಗೆ 8.45ಕ್ಕೆ ಪಂಪಾ ತಲುಪಲಿದೆ. ಅದೇ ಬಸ್ ಪಂಪಾದಿಂದ ಸಂಜೆ 5ಕ್ಕೆ ಮರಳಿ ಬೆಂಗಳೂರಿನೆಡೆಗೆ ಹೊರಟು ರಾತ್ರಿ 12ಕ್ಕೆ ನಗರ ತಲುಪಲಿದೆ. 835 ರೂ.ಗಳನ್ನು ಪ್ರಯಾಣ ದರವಾಗಿ ನಿಗದಿ ಪಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.
Next Story





