ಪತಿಯಿಂದ ಎರಡನೆ ಮದುವೆ: ಪತ್ನಿ ದೂರು
ಕಾಪು, ನ.13: ಅಜಯ್ ಕುಮಾರ್ ಎಂಬವರು ಎರಡನೆ ವಿವಾಹವಾಗಿರುವುದಾಗಿ ಅವರ ಪತ್ನಿ ಉದ್ಯಾವರ ಗುಡ್ಡೆಅಂಗಡಿಯ ಶಾಂತಿ(24) ಎಂಬ ವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
ಇವರು 2013ರಲ್ಲಿ ವಿವಾಹವಾಗಿದ್ದು, ಪತಿಯ ಮಾನಸಿಕ ಹಿಂಸೆಯಿಂದ ಬೇಸರಗೊಂಡ ಶಾಂತಿ ತನ್ನ ತಾಯಿ ಮನೆಯಲ್ಲಿ ವಾಸವಾಗಿದ್ದರು. ಈ ಮಧ್ಯೆ ಆರು ತಿಂಗಳ ಹಿಂದೆ ಅಜಯ್, ಶಾಂತಿಯ ತಾಯಿ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆಯಲು ಬಂದಿದ್ದರು. ಇದೀಗ ನ.10ರಂದು ಅಜಯ್, ರಾಜೇಶ್ವರಿ ಎಂಬವರೊಂದಿಗೆ ರಿಜಿಸ್ಟರ್ ಮದುವೆಯಾಗಿರುವು ದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





