ತಾಂತ್ರಿಕ ಮಾದರಿಗಳ ಪ್ರದರ್ಶನ -ಸ್ಪರ್ಧೆ ಉದ್ಘಾಟನೆ

ಶಿರ್ವ, ನ.13: ಐಇಇಇ ಮಂಗಳೂರು ಘಟಕ, ಬಂಟಕಲ್ಲು ಶ್ರೀಮಧ್ವವಾದಿ ರಾಜ ತಾಂತ್ರಿಕ ಮಹಾವಿದ್ಯಾಲಯದ ಐಎಸ್‌ಟಿಇ ವಿದ್ಯಾರ್ಥಿ ಘಟಕ, ಐಓಟಿ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಐಒಟಿ ವಿಚಾರ ಸಂಕಿರಣ ಮತ್ತು ಐಒಟಿ ಮಾದರಿ ವಸ್ತು ಪ್ರದರ್ಶನವು ಇತ್ತೀೆಗೆ ಮಹಾವಿದ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರು ಫಿಲಿಪ್ಸ್ ಸಂಸ್ಥೆಯ ಲೈಟಿಂಗ್ಸ್ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ನರೇಂದ್ರನಾಥ್ ಉಡುಪ ಮಾತ ನಾಡಿ, ಹೊಸಹೊಸ ತಂತ್ರಜ್ಞಾನಗಳು ಬಹಳ ಭರವಸೆ ಮತ್ತು ಉತ್ಸಾಹ ದೊಂದಿಗೆ ಆರಂಭವಾದರೂ ಕ್ರಮೇಣ ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ. ಸುದೀರ್ಘ ಕಾಲ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ತಂತ್ರಜ್ಞಾನದ ಬೆಳವಣಿಗೆ ಇಂದಿನ ಅಗತ್ಯ. ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗಳು ಸಾಮಾನ್ಯ ಜರವರೆಗೆ ತಲುಪಬೇಕು ಎಂದರು.
ಬೆಂಗಳೂರಿನ ಬಾಷ್ ಸಂಸ್ಥೆಯ ಹಿರಿಯ ಪ್ರಬಂಧಕ ಭುವನ್ ಕೆ.ಶೆಟ್ಟಿ ಮಾತನಾಡಿ, ತಂತ್ರಜ್ಞಾನವು ಜಗತ್ತಿನಲ್ಲಿ ಲಭ್ಯವಿರುವ ಸವಲತ್ತುಗಳು ಮತ್ತು ಸೌಲಭ್ಯಗಳು ಎಲ್ಲರಿಗೂ ತಲುಪುವುದಕ್ಕೆ ಬೇಕಾದ ಸೂಕ್ತ ವಾತಾವರಣವನ್ನು ನಿರ್ಮಿಸಿಕೊಡುತ್ತದೆ. ಐಒಟಿ ತಂತ್ರಜ್ಞಾನದ ಬಳಕೆಗೆ ಇರುವ ವಿವಿಧ ಸಾಧ್ಯತೆ ಗಳತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ವಹಿಸಿದ್ದರು. ಪ್ರಾಂಶುಪಾಲ ಪ್ರೊ.ಡಾ.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಸಚಿನ್ ಭಟ್ ವಂದಿಸಿದರು. ಯಶಸ್ವಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.







