ನಗದು ರಹಿತ ಪಾವತಿ ಕುರಿತು ಮಾಹಿತಿ ಕಾರ್ಯಾಗಾರ

ಉಡುಪಿ, ನ.13: ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಇವುಗಳ ಜಂಟಿ ಆಶ್ರಯದಲ್ಲಿ ವಿಷಕ್ಷಣ ಅರಿವಿನ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ನಗದು ರಹಿತ ಪಾವತಿ ಮತ್ತು ಇ-ಪಾವತಿಗಳಲ್ಲಿ ಸಂಭವಿಸಬಹುದಾದ ಭ್ರಷ್ಟಾಚಾರ ಮತ್ತು ಮುಂಜಾಗ್ರತೆ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಕಾಲೆೀಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳಾದ ಪಿ.ಆರ್.ಕುಡ್ವ ಮತ್ತು ವಿಪಿನ್ ದಾಸ್, ಬ್ಯಾಂಕಿನ ಎಟಿಎಂ ಬಳಸುವಾಗ ಮತ್ತು ಇತ್ತೀಚಿನ ದಿನಗಳಲ್ಲಿ ಹ್ಯಾಕರ್‌ಗಳು ನಡೆಸುವ ಮೋಸದ ಜಾಲದ ಬಗ್ಗೆ ಅತ್ಯಂತ ಎಚ್ಚರಿಕೆ ಯಿಂದಿರ ಇರಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಜಗದೀಶ್ ರಾವ್, ವಾಣಿಜ್ಯಶಾಸ್ತ್ರ ವಿಭಾಗದ ಸಂಚಾಲಕ ಡಾ. ಉಮೇಶ್ ಮಯ್ಯ, ಪ್ರೊ.ಸಿ.ಎ.ಪಾಟೀಲ್, ಪ್ರೊ. ಗಣೇಶಪ್ಪಕೆ. ಉಪಸ್ಥಿತರಿದ್ದರು. ಉಪನ್ಯಾಸಕಿ ಸೋನಿಯಾ ವಂದಿಸಿದರು.
Next Story





