ಹನೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿಂದ ಧರಣಿ

ಹನೂರು, ನ.13: ಕಾವೇರಿ ಮತ್ತು ಕಬಿನಿ ನದಿಗಳಿಂದ ಹನೂರು ಭಾಗದ ಎಲ್ಲಾ ಕೆರೆ,ಕಟ್ಟೆಗಳಿಗೆ ನೀರು ತುಂಬಿಸಬೇಕು, ಮಧುವನಹಳ್ಳಿಯಿಂದ ಮಲೆ ಮಹದೇಶ್ವರ ಬೆಟ್ಟದರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಆಗ್ರಹಿಸಿದ್ದಾರೆ.
ಹನೂರು ಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣದಿಂದ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗ್ಗುತ್ತ ಮೆರವಣಿಗೆಯಲ್ಲಿ ಸಾಗಿ ಧರಣಿಯಲ್ಲಿ ಮಾತನಾಡಿದ ಅವರು,
ಕ್ಷೇತ್ರ ವ್ಯಾಪ್ತಿಯ ಕಾಡಾಂಚಿನ ಗ್ರಾಮಗಳ ರಸ್ತೆಗಳನ್ನು ಸರಿಪಡಿಸಿ ಆ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು, ಈ ಬಾಗದ ಕೆರೆಕಟ್ಟೆಗಳಿಗೆ ಕಾವೇರಿ ಹಾಗೂ ಕಬಿನಿ ನದಿ ಮೂಲಗಳಿಂದ ನೀರು ತುಂಬಿಸಬೇಕು, ಮಧುವನಹಳ್ಳಿಯಿಂದ ಮಲೈಮಹದೇಶ್ವರ ಬೆಟ್ಟದ ವರೆಗೆ ರಸ್ತೆ ತೀರಾ ಹಾಳಾಗಿದ್ದು ಹದಗೆಟ್ಟಿದ್ದು ಕೂಡಲೇ ದುರಸ್ಥಿ ಪಡಿಸಬೇಕು, ಮತ್ತು ಜಿಲ್ಲಾ ಉದ್ತುವಾರಿ ಸಚಿವರು ಹಾಗೂ ಶಾಸಕರು ಪ್ರತಿಭಟನೆ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.
ಜಮೀನು ಪೌತಿ ಮತ್ತು ಹಕ್ಕು ಬದಲಾವಣೆ ಮಾಡಿಕೊಡಲುರೈತರಿಂದ ಅಧಿಕಾರಿಗಳು 25 ಸಾವಿರ ರೂ.ಗಳನ್ನು ತೆಗೆದುಕೊಳ್ಳುತ್ತಾರೆ. ಚಂಗಡಿಗ್ರಾಮದಲ್ಲಿ ವಾಸವಾಗಿರುವ ಕುಟುಂಬಗಳು ಅರಣ್ಯವನ್ನು ಬಿಟ್ಟು ಹೊರಗಡೆ ಬರಲುತಯಾರಿದ್ದು, ಅಧಿಕಾರಿಗಳು ಜನಪ್ರತಿನಿಧಿಗಳು ಅವರಿಗೆ ಪರ್ಯಾಯ ವ್ಯವಸ್ಥೆಕಲ್ಪಿಸಲು ವಿಫಲರಾಗಿದ್ದಾರೆ. ಭದ್ರಯ್ಯನಹಳ್ಳಿ ಜನರು ಇಂದಿಗೂ ಕೊಳಚೆ ನೀರನ್ನು ಕುಡಿಯುತ್ತಿದ್ದಾರೆ. ಯರಂಬಾಡಿ ಶಾಲೆ ಮುಚ್ಚುವ ಪರಿಸ್ಥಿತಿ ಬಂದೋದಗಿದೆ. ಕಾಡಂಚಿನ ಗ್ರಾಮಗಳಲ್ಲಿ ಬಸ್ ವ್ಯವಸ್ಥೆ ಇಲ್ಲದೆ ಇಂದಿಗೂ ಪರದಾಡುತ್ತಿದ್ದಾರೆ. ಆಸ್ಪತ್ರೆಯ ಸೌಲಭ್ಯವಿಲ್ಲದೇ ಇಂದಿಗೂ ಅಡ್ಡದಲ್ಲಿ ಜನರನ್ನು ಹೊತ್ತುಕೊಂಡು ಹೋಗಬೇಕಾದ ದುಸ್ಥಿತಿ ಇದೆ. ವಿದ್ಯುತ್ ಸಮರ್ಪಕವಾದ ಸೌಕರ್ಯ ಸೇರಿದಂತೆ ಅರಣ್ಯಇಲಾಖೆಯವರ ಕಿರುಕುಳ ಬಗ್ಗೆ ದೂರಿದರು.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ವಿನೋದ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನಾ ಹನೂರು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ, ಪ್ರದಾನ ಕಾರ್ಯದರ್ಶಿ ಶಾಂತಕುಮಾರ್, ಕರವೇ ಸ್ವಾಭಿಮಾನಿ ಬಣದ ಸದಸ್ಯ ಮೂರ್ತಿ, ರೈತರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಹಾಜರಿದ್ದರು.







