ಮೂಲರಪಟ್ಣ ಗ್ರಾಮಸ್ಥರಿಂದ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಸನ್ಮಾನ
.gif)
ಬಂಟ್ವಾಳ, ನ.14: ಇತ್ತೀಚೆಗೆ ಫಲ್ಗುಣಿ ನದಿಯಲ್ಲಿ ಮೃತಪಟ್ಟ ಐವರು ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರನ್ನು ಮೂಲರಪಟ್ಣದ ಜಿ.ಸಿ.ಸಿ. ಹೆಲ್ಪ್‌ಲೈನ್ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭ ಜಿ.ಸಿ.ಸಿ. ಹೆಲ್ಪ್‌ಲೈನ್ ಅಧ್ಯಕ್ಷ ಮುಹಮ್ಮದ್ ಸ್ವಾಲಿಹ್, ಹಣಕಾಸು ವಿಭಾಗದ ಮುಖ್ಯಸ್ಥ ಅಬ್ದುಲ್ ರಹಿಮಾನ್ ಆಚಾರಿಬೆಟ್ಟು, ಅರಳ ಗ್ರಾಪಂ ಸದಸ್ಯ ಎಂ.ಬಿ.ಅಶ್ರಫ್, ಜಿ.ಸಿ.ಸಿ. ಹೆಲ್ಪ್‌ಲೈನ್ ಪ್ರಧಾನ ಕಾರ್ಯದರ್ಶಿ ಸಜೀವುದ್ದೀನ್ ಎಂ.ಎಸ್., ಪಿ.ಡಬ್ಲು.ಡಿ. ಗುತ್ತಿಗೆದಾರ ಎಂ.ಬಿ.ಇಸ್ಮಾಯೀಲ್ ಶಾಫಿ, ಜಿ.ಸಿ.ಸಿ. ಸದಸ್ಯರಾದ ಆದಂ ಬಾಳಿಕೆ, ಶಾಹುಲ್, ನಿಝಾಂ, ಸ್ಥಳೀಯರಾದ ಮುಸ್ತಫ ಎಂ.ಡಿ., ಆಸಿಫ್, ನಾಸಿರ್ ಎಂ.ಪಿ. ಉಪಸ್ಥಿತರಿದ್ದರು.
Next Story





