ಕಾರು ಢಿಕ್ಕಿ: ಶಾಲಾ ಮಕ್ಕಳಿಗೆ ಗಾಯ

ಬಣಕಲ್, ನ.14: ಮಂಗಳೂರು ಕಡೆಯಿಂದ ಮೂಡಿಗೆರೆ ಕಡೆಗೆ ಸಾಗುತ್ತಿದ್ದ ಕಾರು ಬಣಕಲ್‍ನಲ್ಲಿ ರಸ್ತೆ ದಾಟುವ ಶಾಲಾ ಮಕ್ಕಳಿಗೆ ಢಿಕ್ಕಿ ಹೊಡೆದ ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಮಂಗಳೂರು ಮೂಲದ ಕಾರು ಮೂಡಿಗೆರೆ ಕಡೆಗೆ ಸಾಗುತ್ತಿದ್ದಾಗ ಬಣಕಲ್ ಪೆಟ್ರೋಲ್ ಬಂಕ್ ಸಮೀಪದ ತಿರುವಿನಲ್ಲಿ ಶಾಲಾ ವಿದ್ಯಾರ್ಥಿಗಳು ರಸ್ತೆ ದಾಟುವಾಗ ಢಿಕ್ಕಿ ಹೊಡೆದಿದ್ದು, ಪರಿಣಾಮ ವಿದ್ಯಾರ್ಥಿಗಳಾದ ಅನಿಲ್ ಮತ್ತು ಶಾಂಭವಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ತಕ್ಷಣ ಮಕ್ಕಳನ್ನು ಬಣಕಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅನಿಲ್ ಎಂಬ ಬಾಲಕನಿಗೆ ತಲೆ ಮತ್ತು ಕಾಲಿಗೆ ಗಂಭೀರ ಪೆಟ್ಟು ಬಿದ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಬಣಕಲ್ ಪೊಲೀಸರು ಕಾರನ್ನು ತಮ್ಮ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
Next Story





