ಬೈಕಿಗೆ ಕಾರು ಢಿಕ್ಕಿ: 4 ವರ್ಷದ ಬಾಲಕ ಸೇರಿ ಮೂವರಿಗೆ ಗಾಯ
ದಾವಣಗೆರೆ, ನ.14: ಮದ್ಯ ಸೇವಿಸಿ ಕಾರು ಚಾಲನೆ ಮಾಡುತ್ತಿದ್ದ ಚಾಲಕನ ಅಜಾಗರೂಕತೆಯಿಂದ ಬೈಕ್‍ಗೆ ಢಿಕ್ಕಿ ಹೊಡೆದ ಪರಿಣಾಮ 4 ವರ್ಷದ ಬಾಲಕ, ಮಹಿಳೆ ಸೇರಿದಂತೆ ಮೂವರು ಸವಾರರು ತೀವ್ರ ಗಾಯಗೊಂಡ ಘಟನೆ ನಗರದ ಹೊರ ವಲಯದ ಶಾಮನೂರು ಬಳಿ ನಡೆದಿದೆ.
ನಗರದ ನವೀನ್ (35 ವರ್ಷ), ಇಂದಿರಮ್ಮ (50 ವರ್ಷ) ಹಾಗೂ ಗೋಕುಲ್ (4 ವರ್ಷ) ಗಾಯಾಳು ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಕಾರು ಚಾಲಕ ಗಣೇಶನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದಿಂದ ಶಾಬನೂರು ಹೋಗುತ್ತಿದ್ದ ಕಾರು ಚಾಲಕ ಮತ್ತಿನಲ್ಲಿ ಬೈಕ್‍ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಈ ಕುರಿತು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





