ಬುಶ್‌ರಿಂದ ಅಸಭ್ಯ ವರ್ತನೆ: ಇನ್ನೋರ್ವ ಮಹಿಳೆ ಆರೋಪ

ಹ್ಯೂಸ್ಟನ್ (ಅಮೆರಿಕ), ನ. 14: ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಎಚ್. ಡಬ್ಲು. ಬುಶ್ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂಬುದಾಗಿ ಇನ್ನೋರ್ವ ಮಹಿಳೆ ಆರೋಪಿಸಿದ್ದಾರೆ.
‘‘ಹ್ಯೂಸ್ಟನ್‌ನಲ್ಲಿ 2003ರಲ್ಲಿ ನಡೆದ ಸಿಐಎ ಅಧಿಕಾರಿಗಳ ಸಭೆಯಲ್ಲಿ ನಾನು ಬುಶ್ ಜೊತೆಗೆ ಪೋಸ್ ನೀಡಿದ್ದೆ. ಫೋಟೊ ತೆಗೆಯುವ ಕಾರ್ಯಕ್ರಮ ನಡೆಯುತ್ತಿದ್ದಾಗ ಬುಶ್ ನನ್ನ ಹಿಂಬದಿಯ ಮೇಲೆ ಕೈಯಿಟ್ಟರು ಮತ್ತು ಒತ್ತಿದರು’’ ಎಂದು ರೋಸ್ಲಿನ್ ಕಾರಿಗನ್ ‘ಟೈಮ್’ ಮ್ಯಾಗಝಿನ್‌ಗೆ ಹೇಳಿದ್ದಾರೆ.
ಆಗ 16 ವರ್ಷದವರಾಗಿದ್ದ ಅವರು ಹೆತ್ತವರ ಜೊತೆಗೆ ಕಾರ್ಯಕ್ರಮಕ್ಕೆ ಹೋಗಿದ್ದರು.
94 ವರ್ಷದ ಬುಶ್ ವಿರುದ್ಧ ಆರೋಪ ಮಾಡಿದ 5ನೆ ಮಹಿಳೆ ಅವರಾಗಿದ್ದಾರೆ.
Next Story





