ಗಿನ್ನೆಸ್ ದಾಖಲೆಗೆ ಬೋಟ್ ಆಕಾರದ ಮಾನವ ಸರಪಳಿ !
ಮಂಗಳೂರು, ನ.15: ಪೇಸ್ ಶಿಕ್ಷಣ ಸಮೂಹ ಸಂಸ್ಥೆಯ ಮಂಗಳೂರಿನ ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್ ಹಾಗೂ ವಿಶ್ವದಾದ್ಯಂತವಿರುವ 13 ಶೈಕ್ಷಣಿಕ ಸಂಸ್ಥೆಗಳಿಂದ ರಚಿಸಿದ ಬೃಹತ್ ಬೋಟ್ ಆಕಾರದ ಮಾನವ ಸರಪಳಿ(ದ ಲಾರ್ಜೆಸ್ಟ್ ಇಮೇಜ್ ಆಫ್ ಎ ಬೋಟ್) ಗಿನ್ನೆಸ್ ದಾಖಲೆಗೆ ಸೇರಿದೆ. ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ಹುಟ್ಟುಹಬ್ಬವಾದ ನ.14ರಂದು ಗಿನ್ನೆಸ್ ದಾಖಲೆ ಬರೆಯಲಾಯಿತು ಎಂದು ಪೇಸ್ ಗ್ರೂಪ್‌ನ ಸಿಇಒ ಹಾಗೂ ಕಲ್ಲಿಕೋಟೆ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ. ಎಂ. ಅಬ್ದುಲ್ ಸಲಾಮ್ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನತೀರ್ಪುಗಾರ ಅಹ್ಮದ್ ಗಾಬ್ರ್ ಅವರು ವಿದ್ಯಾರ್ಥಿಗಳಿಂದ ರಚಿತವಾದ ಬೃಹತ್ ಬೋಟಿನ ಆಕಾರದ ಮಾನವ ಸರಪಳಿಯನ್ನು ಅದ್ಬುತವೆಂದು ಅಧಿಕೃತವಾಗಿ ಘೋಷಿಸಿದರು. ಈ ಹಿಂದೆ ಹಾಕಾಂಗ್ ವಿಶ್ವವಿದ್ಯಾಲಯದ 1325 ವಿದ್ಯಾರ್ಥಿಗಳು ಮಾನವ ಸರಪಳಿಯ ಬೋಟ್ ನಿರ್ಮಿಸಿ ಗಿನ್ನೆಸ್ ದಾಖಲೆ ಬರೆದಿದ್ದರು. ಇದೀಗ ಪೇಸ್ ಶಿಕ್ಷಣ ಸಂಸ್ಥೆಗಳ 4882 ವಿದ್ಯಾರ್ಥಿಗಳು ಬೃಹತ್ ಬೋಟ್ ನಿರ್ಮಿಸಿ ಹೊಸ ಗಿನ್ನೆಸ್ ದಾಖಲೆ ಸೃಷ್ಟಿಸಿದ್ದಾರೆ ಎಂದರು.
ಪೇಸ್ ಸಂಸ್ಥೆಯು ಭಾರತ, ಯುಎಇ ಹಾಗು ಕುವೈತ್ ರಾಷ್ಟ್ರಗಳಲ್ಲಿ ಸುಮಾರು 20 ಸಾವಿರ ವಿದ್ಯಾರ್ಥಿಗಳನ್ನು ಹೊಂದಿದೆ. ಒಟ್ಟು 14 ಸಂಸ್ಥೆಗಳನ್ನು ನಡೆಸುತ್ತಿದೆ. ಸಂಸ್ಥೆಯು ಫಿಟ್‌ನೆಸ್ ಬೈಟ್ ಎಂಬ ಹೊಸತನದ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮದಲ್ಲಿ ಕೆಜಿ ತರಗತಿಯಿಂದ 12ನೇ ತರಗತಿಗಳವರೆಗಿನ 4ರಿಂದ 19 ವರ್ಷಗಳ ಯುವ ವಿದ್ಯಾರ್ಥಿಗಳಲ್ಲಿ ಫಿಟ್‌ನೆಸ್ ಜಾಗೃತಿ ಮೂಡಿಸಲಾಗುವುದು ಎಂದು ಅವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ಇಬ್ರಾಹಿಂ, ಪೇಸ್ ಪ್ರಿನ್ಸಿಪಾಲ್ ಡಾ. ಅಬ್ದುಲ್ ಶರ್ೀ ಉಪಸ್ಥಿತರಿದ್ದರು.







