ಬೆಂಕಿ ಅನಾಹುತ: ಕಾಶ್ಮೀರದ ಪ್ರಸಿದ್ಧ ದರ್ಗಾಕ್ಕೆ ಹಾನಿ

ಶ್ರೀನಗರ, ನ.15: ಶ್ರೀನಗರದಲ್ಲಿ ರಾತ್ರಿ ಸಮಯದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಕಾಶ್ಮೀರದಲ್ಲಿ ಮುಸ್ಲಿಮರ ಪವಿತ್ರ ಸ್ಥಳಗಳಲ್ಲಿ ಒಂದಾದ ಕಾನ್ಖಾ-ಎ-ಮೌಲಾ ದರ್ಗಾವು ಹಾನಿಗೀಡಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಸಫಲವಾಗಿದ್ದು ಹೆಚ್ಚಿನ ಹಾನಿ ಸಂಭವಿಸಿದಂತೆ ನೋಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದರ್ಗಾವನ್ನು ಮುಸ್ಲಿಂ ಸಂತ ಮತ್ತು ಪಂಡಿತ ಮಿರ್ ಸೈದ್ ಅಲಿ ಹಮದಾನಿಯ ನೆನಪಿಗಾಗಿ ಕಟ್ಟಲಾಗಿದೆ. ಹಮದಾನಿ ಕಣಿವೆ ರಾಜ್ಯದಲ್ಲಿ ಇಸ್ಲಾಂ ಪ್ರಸಾರದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಕಾರಣಕ್ಕಾಗಿ ಈ ದರ್ಗಾವು ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರವಾಗಿದೆ. ಪರ್ಶಿಯಾದ ಹಮದಾನ್‌ನಲ್ಲಿ 1314ರಲ್ಲಿ ಜನಿಸಿ 1384ರಲ್ಲಿ ಮೃತಪಟ್ಟ ಹಮದಾನಿಯನ್ನು ಕಾಶ್ಮೀರಿಗಳು ಗೌರವದಿಂದ ಅಮಿರ್-ಎ-ಕಬೀರ್ ಮತ್ತು ಶಾ-ಎ-ಹಮದಾನ್ ಎಂದು ಕರೆಯುತ್ತಾರೆ.
Next Story





