Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ನಕ್ಸಲ್ ಹೋರಾಟದಲ್ಲಿ ನಾನು ನೇರವಾಗಿ...

ನಕ್ಸಲ್ ಹೋರಾಟದಲ್ಲಿ ನಾನು ನೇರವಾಗಿ ಭಾಗವಹಿಸಿರಲೇ ಇಲ್ಲ: ನೀಲಗುಳಿ ಪದ್ಮನಾಭ

► ಪೊಲೀಸರೇ ನನ್ನನ್ನು ನಕ್ಸಲ್ ಎಂದು ಬಿಂಬಿಸಿದರು ►

ವಾರ್ತಾಭಾರತಿವಾರ್ತಾಭಾರತಿ15 Nov 2017 8:26 PM IST
share
ನಕ್ಸಲ್ ಹೋರಾಟದಲ್ಲಿ ನಾನು ನೇರವಾಗಿ ಭಾಗವಹಿಸಿರಲೇ ಇಲ್ಲ: ನೀಲಗುಳಿ ಪದ್ಮನಾಭ

► 14 ಪ್ರಕರಣಗಳಲ್ಲೂ ದೋಷಮುಕ್ತಗೊಳ್ಳುವ ವಿಶ್ವಾಸ ► ಆದಿವಾಸಿ, ಶೋಷಿತರ ಪರ ಹೋರಾಟದಲ್ಲಿ ಮುಂದೆಯೂ ಭಾಗಿ

 ಉಡುಪಿ, ನ.15: ಪೊಲೀಸರು ಆರೋಪಿಸಿರುವಂತೆ ನಾನು ನಕ್ಸಲರ ಹೋರಾಟದಲ್ಲಿ ನೇರವಾಗಿ ಎಲ್ಲೂ ಭಾಗವಹಿಸಿರಲೇ ಇಲ್ಲ. ಪೊಲೀಸರೇ ನನ್ನನ್ನು ನಕ್ಸಲ್ ಎಂದು ಬಿಂಬಿಸಿ ನಕ್ಸಲ್ ಪ್ರಕರಣಗಳಲ್ಲಿ ನನ್ನನ್ನು ಸಿಲುಕಿಸಿದ್ದಾರೆ ಎಂದು ನಕ್ಸಲರ ಒಂದು ಪ್ರಕರಣದಲ್ಲಿ ದೋಷಮುಕ್ತಗೊಂಡು, 14 ಪ್ರಕರಣ ಗಳಲ್ಲಿ ಜಾಮೀನು ಪಡೆದು ವಿಚಾರಣೆ ಎದುರಿಸುತ್ತಿರುವ ಕೊಪ್ಪದ ನೀಲಗುಳಿ ಪದ್ಮನಾಭ ಆರೋಪಿಸಿದ್ದಾರೆ.

ಹೆಬ್ರಿ ಭೋಜಶೆಟ್ಟಿ-ಸುರೇಶ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಆರೋಪಿ ಯಾಗಿರುವ ನೀಲಗುಳಿ, ಇಂದು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ನ್ಯಾಯಾಧೀಶರ ಮುಂದೆ ಹಾಜರಾದ ಬಳಿಕ ಕೋರ್ಟ್ ಆವರಣದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೊಪ್ಪ ಸಮೀಪದ ನೀಲಗುಳಿಯವರಾದ ನೀಲಗುಳಿ ಪದ್ಮನಾಭ ಅವರ ವಿರುದ್ಧ ಉಡುಪಿಯಲ್ಲಿ 5, ಚಿಕ್ಕಮಗಳೂರಿನಲ್ಲಿ 6, ಕೊಪ್ಪ, ಶೃಂಗೇರಿ ಹಾಗೂ ಶಿವಮೊಗ್ಗಗಳಲ್ಲಿ ತಲಾ ಒಂದೊಂದು ಪ್ರಕರಣಗಳಿವೆ. ಮತ್ತಾವು ಪೊಲೀಸ್ ಜೀಪ್ ಬಾಂಬಿಟ್ಟ ಪ್ರಕರಣದಲ್ಲಿ ಅವರು ಖುಲಾಸೆಗೊಂಡಿದ್ದಾರೆ.

18ನೇ ವಯಸ್ಸಿನಿಂದ ವಿವಿಧ ರೀತಿಯ ಹೋರಾಟಗಳಲ್ಲಿ ಭಾಗಿಯಾಗಿರುವ ತನ್ನನ್ನು ಶೋಷಿತರ ಹಾಗೂ ಆದಿವಾಸಿಗಳ ಪರ ಹೋರಾಟದಲ್ಲಿ ತೊಡಗಿಸಿ ಕೊಂಡಿರುವು ದಕ್ಕಾಗಿ ನಕ್ಸಲ್‌ರಂತೆ ಬಿಂಬಿಸಿದ ಪೊಲೀಸರು ಸುಳ್ಳು ಆರೋಪದಡಿ ಪ್ರಕರಣಗಳಲ್ಲಿ ತಳಕು ಹಾಕಿದ್ದಾರೆ. ಈ ಎಲ್ಲಾ ಆರೋಪಗಳಲ್ಲೂ ದೋಷಮುಕ್ತ ನಾಗಿ ಹೊರಬರುವ ಸಂಪೂರ್ಣ ವಿಶ್ವಾಸ ತನಗಿದೆ. ದೋಷಮುಕ್ತನಾದ ಮೇಲೂ ನಾನು ಆದಿವಾಸಿಗಳ, ರೈತರ, ಶೋಷಿತರ ಹಾಗೂ ಪರಿಸರ ಸಂರಕ್ಷಣೆ ಪರ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ನೀಲಗುಳಿ ಪದ್ಮನಾಭ ತಿಳಿಸಿದರು.

ನಾನು ಕಳೆದ ಎರಡು ದಶಕಗಳಲ್ಲಿ ಮಲೆನಾಡು, ಪಶ್ಚಿಮ ಘಟ್ಟ ಪರಿಸರದಲ್ಲಿ ನಡೆದ ಎಲ್ಲಾ ಹೋರಾಟಗಳಲ್ಲಿ ಸಕ್ರೀಯನಾಗಿ ಭಾಗವಹಿಸಿದ್ದೇನೆ. ನಾನು ಹೈಸ್ಕೂಲ್ ಓದುವ ದಿನಗಳಲ್ಲೇ ಶೃಂಗೇರಿಯಲ್ಲಿ ಸಹಕಾರಿ ಸಾರಿಗೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ನನ್ನ ಸಂಬಂಧಿಗಳೊಂದಿಗೆ ಭಾಗವಹಿಸಿದ್ದೆ. ಅದೇ ಹೋರಾಟ ನನ್ನ ಜೀವನಸಂಗಾತಿ ಯಾಯಿತು ಎಂದರು.

ಮುಂದೆ ಮಲೆನಾಡಿನಲ್ಲಿ ನಡೆದ ತುಂಗಾನದಿ ಉಳಿಸಿ, ಕುದುರೆಮುಖ ಯೋಜನೆ, ರಾಷ್ಟ್ರೀಯ ಉದ್ಯಾನವನ ವಿರೋಧಿಸಿ ನಡೆದ ಹೋರಾಟ, ಆದಿವಾಸಿಗಳ ಹೋರಾಟಗಳಲ್ಲಿ ಭಾಗವಹಿಸಿದ್ದೆ. ಇದಕ್ಕೆ ಕಾರಣವಾಗಿಟ್ಟು ಕೊಂಡು ಪೊಲೀಸರು, ಆಗ ಮಲೆನಾಡಿನಲ್ಲಿ ಕ್ರಿಯಾಶೀಲವಾಗಿದ್ದ ನಕ್ಸಲ್ ಹೋರಾಟದೊಂದಿಗೆ ನನ್ನ ಹೆಸರನ್ನು ತಳಕುಹಾಕಿದ್ದರು. ಇವೆಲ್ಲವೂ ಪೊಲೀಸರೇ ಸೃಷ್ಟಿಸಿರುವ ಸುಳ್ಳು ಆರೋಪ. ಇವುಗಳಿಂದ ದೋಪಮುಕ್ತನಾಗುವ ವಿಶ್ವಾಸ ನನಗಿದೆ ಎಂದರು.

15 ನಕ್ಸಲ್ ಪ್ರಕರಣ: ನಾನು ಮಾಡದ ಅಪರಾಧಗಳಿಗೆಲ್ಲಾ ನನ್ನ ಹೆಸರನ್ನು ಸಹ ಪೊಲೀಸರು ಸೇರಿದ್ದಾರೆ. ಒಟ್ಟು 15 ಪ್ರಕರಣಗಳಲ್ಲಿ ನನ್ನ ಹೆಸರಿದೆ. ಇವುಗಳ ಯಾವುದು ಎಂಬುದು ಸಹ ನನಗೆ ತಿಳಿಸಿಲ್ಲ. ಮುತ್ತಾವು ಬಾಂಬ್ ಸ್ಪೋಟ ಸಂದರ್ಭ ನಾನು ಊರಿನಲ್ಲೇ ಇರಲಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ನಾನು ದೋಷಮುಕ್ತಗೊಂಡಿದ್ದೇನೆ.

ಉಡುಪಿ ಜಿಲ್ಲೆಯಲ್ಲಿ ಸದ್ಯ ಭೋಜ ಶೆಟ್ಟಿ ಹತ್ಯೆ, ಮುಟ್ಲಪಾಡಿ ಪ್ರಕರಣ, ಕಾರ್ಕಳ ಗ್ರಾಮೀಣ ಪ್ರಕರಣಗಳಿದ್ದು, ಇನ್ನೆರಡು ಯಾವುದೆಂದು ನನಗೂ ಗೊತ್ತಿಲ್ಲ. ಇವು ಸೇರಿ ಒಟ್ಟು 5 ಕೇಸುಗಳಿವೆ. ಇವುಗಳಲ್ಲಿ ನಾನು ಖುಲಾಸೆಯಾಗುತ್ತೇನೆಂಬ ವಿಶ್ವಾಸವಿದೆ ಎಂದರು.

ನನ್ನದು ಶರಣಾಗತಿಯಲ್ಲ: ಪೊಲೀಸರು ನನ್ನ ಮೇಲೆ ಸುಳ್ಳು ಕೇಸು ದಾಖಲಿಸಿದ್ದರಿಂದ ನಾನು 17 ವರ್ಷಗಳ ಕಾಲ ಭೂಗತನಾಗಿ ಇರಬೇಕಾ ಯಿತು. ಇದೇ ವೇಳೆ ಸರಕಾರ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿ ರುವವರನ್ನು ಮುಖ್ಯವಾಹಿನಿಗೆ ತರಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು. ಭೂಗತನಾಗಿ ಬದುಕುವ ಸ್ಥಿತಿಯಿಂದ ಹೊರಬರಲು ನಾನು, ಹಿರಿಯರಾದ ಎಚ್.ಎಸ್.ದೊರೆಸ್ವಾಮಿ, ಎ.ಕೆ.ಸುಬ್ಬಯ್ಯ, ಗೌರಿ ಲಂಕೇಶ್ ಮುಂತಾದವರ ನೆರವಿನಿಂದ ಸರಕಾರದೊಂದಿಗೆ ಬಹಿರಂಗವಾಗಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬದುಕಲು ಮುಂದೆ ಬಂದೆ. ನಾನು ಸರಕಾರ ನೀಡುವ ಯಾವುದೇ ಪ್ಯಾಕೇಜ್ ಆಶೆಗಾಗಿ ಬಂದಿರಲಿಲ್ಲ. ಅದು ನಮ್ಮ ಬದ್ಧತೆಗೂ ಒಪ್ಪಲ್ಲ ಎಂದವರು ನುಡಿದರು.

ಪ್ಯಾಕೇಜ್‌ಗೆ ತಿರಸ್ಕಾರ:  17 ವರ್ಷ ಭೂಗತನಾಗಿದ್ದ ನಾನು ಮಾತುಕತೆ ನಡೆಸಿ ಮುಖ್ಯವಾಹಿನಿಗೆ ಬಂದಿದ್ದೆ. ನಮ್ಮದು ಶರಣಾಗತಿಯಲ್ಲ. ಯಾರಿಗೂ ಹೆದರಿ ನಾನು ಶರಣಾಗತ ನಾಗಿಲ್ಲ. ನಾವು ಬಹಿರಂಗ ಪ್ರಜಾ ತಾಂತ್ರಿಕ ವ್ಯವಸ್ಥೆಗೆ ಬಂದಿದ್ದೇವೆ. ಸರಕಾರದ ಪ್ಯಾಕೇಜ್ ತಿರಸ್ಕರಿಸಿದ್ದೇವೆ ಎಂದರು. ಆದರೆ ನಂತರ 10 ತಿಂಗಳು ನಮ್ಮನ್ನು ಬಂಧಿಸಿ ಜೈಲಿಗೆ ತಳ್ಳಿರುವುದು ನನಗೆ ಅತೀವ ನೋವು ತಂದಿದೆ ಎಂದರು.

ದಿಕ್ಕು ತಪ್ಪಿಸುವ ಹುನ್ನಾರ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ವಿಚಾರಣೆಯ ಹಾದಿ ತಪ್ಪಿಸುವ ಕುತಂತ್ರ ನಡೆಯುತ್ತಿದೆ ಎಂದು ಆರೋಪಿಸಿದ ನೀಲಗುಳಿ, ಹತ್ಯೆಗೆ ನಕ್ಸಲರು ಕಾರಣ ಎಂಬುದು ಶುದ್ಧ ಸುಳ್ಳು. ಸರಕಾರಕ್ಕೆ ಕೂಡಾ ಹಂತಕರು ಯಾರೆಂದು ತಿಳಿದಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ ಎಂದು ಕಿಡಿಕಾರಿದರು.

ಆರೋಪಿಗಳನ್ನು ಬಂಧಿಸಿ: ಎಂ.ಎಂ.ಕಲಬುರ್ಗಿ, ಗೌರಿ ಸಹಿತ ನಾಲ್ವರು ವಿಚಾರವಾದಿಗಳ ಹತ್ಯೆ ನಡೆದು ವರ್ಷಗಳೇ ಕಳೆದರೂ, ಸರಕಾರ ಯಾವುದೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹತ್ಯೆಗೆ ಬೇರೆ ಬೇರೆ ಬಣ್ಣಗಳನ್ನು ನೀಡಲಾಗುತಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ. ಸರಕಾರ ಪ್ರಾಮಾಣಿಕ ವಾಗಿ ತನಿಖೆ ನಡೆಸಿ ಗೌರಿ ಹಂತಕರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗೌರಿ ಕೊಲೆ ಉದ್ದೇಶಪೂರ್ವಕ. ಹಿಂದೂ ಕೋಮುವಾದದ ಸಂಚಿಗೆ ಗೌರಿ ಬಲಿಯಾಗಿದ್ದಾರೆ. ಗೌರಿಯನ್ನು ಕೊಲ್ಲಲು ನಕ್ಸಲರಿಗೆ ಯಾವುದೇ ಕಾರಣಗಳಿಲ್ಲ ಎಂದರು. ಗೌರಿಯನ್ನು ನಕ್ಸಲ್ ವಿಕ್ರಮ ಗೌಡ ಹತ್ಯೆ ಗೈದಿದ್ದಾರೆ ಎಂಬಂತೆ ಬಿಂಬಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಕ್ರಮಗೌಡ ಆದಿವಾಸಿ ಪರ ಹೋರಾಟದ ವೇಳೆ ನಾನವರನ್ನು ಭೇಟಿಯಾಗಿದ್ದೇನೆ. ಅವರು ಗೌರಿಯನ್ನು ಕೊಲೆ ಮಾಡಲು ಸಾಧ್ಯವಿಲ್ಲ ಎಂದರು.

 ಶೋಷಣೆ ತೊಲಗಿಲ್ಲ: ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾದರೂ ದುಡಿಯುವ ಸಮುದಾಯ, ರೈತರು, ಕಾರ್ಮಿಕರು, ದಲಿತರು, ಮಹಿಳೆಯರು ಮತ್ತು ಆದಿವಾಸಿಗಳ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಅವರ ಕಷ್ಟಗಳು ದಿನಕ್ಕೊಂದು ಹೊಸ ರೂಪ ಪಡೆಯುತ್ತಿದೆ. ದೇಶವನ್ನಾಳಿದ ಪ್ರತಿ ಸರಕಾರವೂ ಮೂಲಭೂತ ಸವಲತ್ತು ಬಿಡಿ, ನಾಗರಿಕ ಸವಲತ್ತು ನೀಡುವಲ್ಲಿ ವಿಲವಾಗಿದೆ. ಸಣ್ಣ ಸುಧಾರಣೆಯನ್ನೇ ದೊಡ್ಡ ಸಾಧನೆ ಎಂಬಂತೆ ಸರಕಾರಗಳು ಬಿಂಬಿಸಿ ಅವುಗಳನ್ನು ಚುನಾವಣಾ ಗಿಮಿಕ್ ಮಾಡಿಕೊಂಡಿವೆ ಎಂದು ಆರೋಪಿಸಿದರು.

ಸ್ವಚ್ಛ ಭಾರತ ಯೋಜನೆಯನ್ನು ಕಟುವಾಗಿ ಟೀಕಿಸಿದ ನೀಲಗುಳಿ, ಜಾತಿ, ಅಸ್ಪೃಶ್ಯತೆ, ಮಹಿಳಾ ಅಸಮಾನತೆ, ಜೀತ, ವರದಕ್ಷಿಣೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಮಲ ಹೊರುವ ಪದ್ಧತಿ, ಮಡೆ ಸ್ನಾನದಂತಹ ಸಾಮಾಜಿಕ ಅನಿಷ್ಟಗಳು ಸಮಾಜದಲ್ಲಿ ಅಸ್ತಿತ್ವದಲ್ಲಿರುವಾಗ ಗಾಂಧಿ ಜಯಂತಿಯಂದು ಪೊರಕೆ ಹಿಡಿದು ಮಾಧ್ಯಮಕ್ಕೆ ಪೋಸ್ ಕೊಟ್ಟರೆ ಸ್ವಚ್ಛ ಭಾರತ ನಿರ್ಮಾಣ ಗೊಳ್ಳಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.

ಮಲೆನಾಡಿನಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಬದುಕನ್ನು ಅತಂತ್ರ ಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿವೆ. ಅಕ್ರಮ, ಸಕ್ರಮದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ರಾಜ್ಯದಲ್ಲಿ ದಲಿತರ ದೌರ್ಜನ್ಯ, ಹಲ್ಲೆಘಿ, ಬಹಿಷ್ಕಾರ ನಿರಂತರವಾಗಿ ಮುಂದುವರಿದಿದೆ. ಆದಿವಾಸಿಗಳನ್ನು ಕಾಡುಕಳ್ಳರ ಕೂಟದಂತೆ ಬಿಂಬಿಸಿ ಕಾಡಿನಿಂದ ಹೊರ ದಬ್ಬಲಾಗುತ್ತಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಮದ್ಯವರ್ತಿಗಳ, ದಲ್ಲಾಳಿಗಳ ಪಾಲಾಗುತ್ತಿದೆ. ಕೃಷಿ ಬೀಜ, ಗೊಬ್ಬರ, ಸಲಕರಣೆಗಳಿಗೆ ಸಾಲ ಮಾಡಿದ ರೈತರು ದಿವಾಳಿ ಎದ್ದು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಈ ಆತ್ಮಹತ್ಯೆಗಳು ಸರಕಾರ ಪರೋಕ್ಷವಾಗಿ ಮಾಡಿದ ಕೊಲೆಯಾಗಿದೆ ಎಂದು ಅವರು ರಕಾರಗಳ ವಿರುದ್ಧ ಕಿಡಿಕಾರಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X