ಉದ್ಯೋಗ ಕೊಡಿಸುವುದಾಗಿ ವಂಚನೆ
ಮಂಗಳೂರು, ನ.15: ವಿದೇಶದಲ್ಲಿರುವ ಕಂಪೆನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಸುಶಾಂತ ಜಿ. ಕರ್ಕೇರಾ ಎಂಬಾತ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚಿಸಿದ ಬಗ್ಗೆ ಉರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಜ್ಪೆ ಸಮೀಪದ ಆದ್ಯಪಾಡಿ ನಿವಾಸಿ ನಿಶಾಂತ್ ಪೂಜಾರಿಯನ್ನು ಆರೋಪಿ ಸುಶಾಂತನು ಸೆಪ್ಟಂಬರ್ 6ರಂದು 1 ಲಕ್ಷ ರೂ. ಮತ್ತು ಸೆಪ್ಟಂಬರ್ 20ರಂದು 45 ಸಾವಿರ ರೂ. ಪಡೆದು ಬಳಿಕ ಉದ್ಯೋಗ ದೊರಕಿಸಿಕೊಡದೆ ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





