ಕೊಟ್ಟಾರ: ವ್ಯಕ್ತಿಯ ಕೊಲೆಯತ್ನ
ಮಂಗಳೂರು, ನ.15: ಉರ್ವ ಠಾಣಾ ವ್ಯಾಪ್ತಿಯ ಅಶೋಕನಗರದ ಅನಿಲ್ ರಾಯ್ ಎಂಬವರ ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ಸಂಜೆ 6:30ಕ್ಕೆ ನಡೆದಿದ್ದು, ಉರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅನಿಲ್ ರಾಯ್ ಕೊಟ್ಟಾರದಲ್ಲಿರುವ ತನ್ನ ರಿಯಲ್ ಎಸ್ಟೇಟ್ ಕಚೇರಿಯ ಬಳಿ ಇದ್ದಾಗ ಆರೋಪಿ ರೋಹಿತ್ ಎಂಬಾತ ಕತ್ತಿಯಿಂದ ಕಡಿಯಲು ಯತ್ನಿಸಿದ ಎನ್ನಲಾಗಿದೆ. ಅಪಾಯದ ಮುನ್ಸೂಚನೆ ಅರಿತ ಅನಿಲ್ ರಾಯ್ ತಕ್ಷಣ ಕತ್ತಿಯ ಏಟಿನಿಂದ ತಪ್ಪಿಸಿಕೊಂಡರೂ ಮೂಗು, ಎಡಕೈಯ ಕಿರುಬೆರಳಿಗೆ ಸಣ್ಣ ಗಾಯವಾಗಿದೆ. ಹಳೆ ದ್ವೇಷದಿಂದ ಆರೋಪಿಯು ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಉರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story





