ಕೇರಳ: ಕಳಂಕಿತ ಸಚಿವ ಥೋಮಸ್ ಚಾಂಡಿ ರಾಜೀನಾಮೆ

ತಿರುವನಂತಪುರಂ, ನ. 15: ಭೂಹಗರಣದ ಕುರಿತು ಕೇರಳ ಸಾರಿಗೆ ಸಚಿವ ಥೋಮಸ್ ಚಾಂಡಿ ಬುಧವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎನ್‌ಸಿಪಿಯ ಹಿರಿಯ ನಾಯಕರಾಗಿರುವ ಚಾಂಡಿ ಪಿಣರಾಯಿ ವಿಜಯನ್ ನೇತೃತ್ವದ ಸಂಪುಟದಲ್ಲಿ ನಂ. 3 ಸಚಿವರೆನಿಸಿಕೊಂಡಿದ್ದಾರೆ.
ಎನ್‌ಸಿಪಿ ರಾಜ್ಯಾಧ್ಯಕ್ಷ ಟಿ.ಪಿ. ಪೀತಾಂಬರನ್ ಚಾಂಡಿಯ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಹಸ್ತಾಂತರಿಸಿದರು. ಚಾಂಡಿಯ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಪಿ. ಸದಾಶಿವಂ ಅವರಿಗೆ ಹಸ್ತಾಂತರಿಸುವುದಾಗಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಚಾಂಡಿಯ ಭೂ ಅತಿಕ್ರಮಣವನ್ನು ಜಿಲ್ಲಾಧಿಕಾರಿ ಟಿ.ವಿ. ಅನುಪಮ ಅವರು ದೃಢೀಕರಿಸಿರುವ ಬಗ್ಗೆ ವರದಿಯಾಗಿರುವ ಹೊರತಾಗಿಯೂ ಆಡಳಿತಾರೂಢ ಸಿಪಿಎಂ, ಮುಖ್ಯವಾಗಿ ಪಿಣರಾಯಿ ವಿಜಯನ್ ಅವರು ಚಾಂಡಿ ಬೆಂಬಲಕ್ಕೆ ನಿಂತಿರುವುದು ತೀವ್ರ ಟೀಕೆಗೆ ಗುರಿಯಾಗಿತ್ತು.
Next Story





