ಚೀನಾ: ದಟ್ಟ ಹೊಗೆಯಲ್ಲಿ 30 ಕಾರುಗಳು ಢಿಕ್ಕಿ
18 ಸಾವು; 21 ಮಂದಿಗೆ ಗಾಯ

ಶಾಂೈ (ಚೀನಾ), ನ. 15: ಚೀನಾದ ಅನ್‌ಹುಯಿ ಪ್ರಾಂತದ ಫುಯಂಗ್ ನಗರದಲ್ಲಿ ಬುಧವಾರ ಸರಣಿ ಅಪಘಾತವೊಂದರಲ್ಲಿ ಕನಿಷ್ಠ 30 ಕಾರುಗಳು ಢಿಕ್ಕಿಯಾಗಿ 18 ಮಂದಿ ಮೃತಪಟ್ಟಿದ್ದಾರೆ.
ಈ ಅಪಘಾತದಲ್ಲಿ 21 ಮಂದಿ ಗಾಯಗೊಂಡಿದ್ದಾರೆ ಹಾಗೂ ಆ ಪೈಕಿ 11 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟ ಮಂಜು ಆವರಿಸಿದ್ದು ಗೋಚರತೆ ತೀರಾ ಕಡಿಮೆಯಿದ್ದುದರಿಂದ ಭೀಕರ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಅಪಘಾತದಲ್ಲಿ ವಾಯುಮಾಲಿನ್ಯ ಪ್ರಧಾನ ಪಾತ್ರ ವಹಿಸಿದೆ ಎನ್ನಲಾಗಿದೆ.
ಫುಯಂಗ್ ಸರಕಾರವು ಈ ಪ್ರದೇಶಕ್ಕಾಗಿ ಭಾರೀ ವಾಯುಮಾಲಿನ್ಯ ಎಚ್ಚರಿಕೆಯನ್ನು ಹೊರಡಿಸಿತ್ತು ಹಾಗೂ ಹೊರಗಿನ ಚಟುವಟಿಕೆಗಳನ್ನು ಕಡಿಮೆಗೊಳಿಸುವಂತೆ ನಿವಾಸಿಗಳಿಗೆ ಕರೆ ನೀಡಿತ್ತು.
ಅಪಘಾತದ ತೀವ್ರತೆಯಿಂದಾಗಿ ಹಲವು ವಾಹನಗಳಲ್ಲಿ ಬೆಂಕಿ ಹೊತ್ತಿಕೊಂಡಿತು. ಎರಡು ಗಂಟೆಗಳ ಕಾಲ ದಾಂಧಲೆಗೈದ ಬೆಂಕಿ ಹಲವು ಕಾರುಗಳನ್ನು ಸಂಪೂರ್ಣವಾಗಿ ಸುಟ್ಟು ಹಾಕಿತು.
Next Story





