ರಶ್ಯ: ಸಣ್ಣ ವಿಮಾನ ಪತನ; ಮಗು ಪವಾಡ ಸದೃಶ ಪಾರು
6 ಮಂದಿ ಸಾವು

ಮಾಸ್ಕೊ, ನ. 15: ರಶ್ಯದ ಉತ್ತರ ದಿಕ್ಕಿನ ಅಂಚಿನಲ್ಲಿ ಬುಧವಾರ ಸಣ್ಣ ವಿಮಾನವೊಂದು ಪತನಗೊಂಡಿದ್ದು ಆರು ಮಂದಿ ಮೃತಪಟ್ಟಿದ್ದಾರೆ. ಆದರೆ, ಪವಾಡವೆಂಬಂತೆ, ಮೂರು ವರ್ಷದ ಹೆಣ್ಣು ಮಗುವೊಂದು ಬದುಕುಳಿದಿದೆ.
ನೆಲ್ಕಾನ್ ಗ್ರಾಮದ ಸಮೀಪ ಸಣ್ಣ ವಿಮಾನ ನಿಲ್ದಾಣವೊಂದರಲ್ಲಿ ಭೂಸ್ಪರ್ಶ ನಡೆಸಲು ಯತ್ನಿಸುತ್ತಿದ್ದಾಗ ಎಲ್-410 ಅವಳಿ ಇಂಜಿನ್ ವಿಮಾನವೊಂದು ನೆಲಕ್ಕೆ ಅಪ್ಪಳಿಸಿದೆ.
ಪ್ರಾದೇಶಿಕ ವಿಮಾನಯಾನ ಸಂಸ್ಥೆಯೊಂದಕ್ಕೆ ಸೇರಿದ ವಿಮಾನವು ಎಂದಿನಂತೆ ಖಬರೊವಸ್ಕ್‌ನಿಂದ ನೆಲ್ಕಾನ್‌ಗೆ ಪ್ರಯಾಣಿಸುತ್ತಿತ್ತು.
ಮಗುವು ಗಂಭೀರ ಗಾಯವಿಲ್ಲದೆ ಜೀವಾಪಾಯದಿಂದ ಪಾರಾಗಿದೆ.
Next Story





