ನಾನು ಮೌನವಾಗಿರಲಿಲ್ಲ: ಸೂ ಕಿ
ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಸೇನಾ ದೌರ್ಜನ್ಯ

ನೇಪಿಟಾವ್ (ಮ್ಯಾನ್ಮಾರ್), ನ. 15: ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯ ವಿಷಯದಲ್ಲಿ ತಾನು ಮೌನವಾಗಿದ್ದೇನೆ ಎಂಬ ಆರೋಪಗಳನ್ನು ಬುಧವಾರ ನಿರಾಕರಿಸಿರುವ ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ, ಉದ್ವಿಗ್ನತೆಯನ್ನು ಹೆಚ್ಚಿಸದ ರೀತಿಯಲ್ಲಿ ಮಾತನಾಡುವ ಬಗ್ಗೆ ತಾನು ಗಮನ ಹರಿಸುತ್ತಿದ್ದೆ ಎಂದು ಹೇಳಿದ್ದಾರೆ.
‘‘ನಾನು ಮೌನವಾಗಿಲ್ಲ. ನಾನು ಹೇಳುತ್ತಿರುವ ಮಾತುಗಳು ಆಸಕ್ತಿದಾಯಕವಾಗಿಲ್ಲ ಎನ್ನುವುದು ತನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಜನರ ಮಾತಿನ ಅರ್ಥ ಎಂದು ಅವರು ಹೇಳಿದರು.
ರಾಜಧಾನಿ ನೇಪಿಟಾವ್‌ನಲ್ಲಿ ಅಮೆರಿಕದ ವಿದೇಶ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
‘‘ನಾನು ಹೇಳುವ ಮಾತುಗಳು ನಾಟಕೀಯತೆಗಾಗಿ ಅಲ್ಲ, ಅದು ನಿಖರವಾಗಿರಬೇಕು. ಅದು ಜನರನ್ನು ಪರಸ್ಪರ ಎತ್ತಿಕಟ್ಟುವಂಥದ್ದಾಗಿರಬಾರದು’’ ಎಂದರು.
Next Story





