ಕೋಬೆ ಸಿಝ್ಲರ್ಸ್ ಚಿತ್ರಕಲಾ ಸ್ಪರ್ಧೆ: ನೂರಕ್ಕೂ ಅಧಿಕ ಮಕ್ಕಳು ಭಾಗಿ

ಮಂಗಳೂರು, ನ. 15: ಕೋಬೆ ಸಿಝ್ಲರ್ಸ್ ಮಂಗಳೂರು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆ 'ಡ್ರಾಯಿಂಗ್ ಕಾರ್ನಿವಲ್'ಅನ್ನು ಬಲ್ಮಠದ ಕಲೆಕ್ಟರ್ಸ್ ಗೇಟ್ ಬಳಿಯಿರುವ ಪರ್ನಿ ಟವರ್ಸ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಿತು.
ಈ ಸ್ಪರ್ಧೆಯಲ್ಲಿ ನಗರದ ವಿವಿಧ ಶಾಲೆಗಳಿಂದ ಐದರಿಂದ ಹದಿನಾರರ ವಯೋಮಿತಿಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಫೇಸ್ ಪೈಂಟಿಂಗ್, ಸ್ಪಾಟ್ ಗೇಮ್ಸ್ ಮತ್ತು ಲೈವ್ ಇಂಟರ್ಯಾಕ್ಷನ್‌ಗಳನ್ನು ನಡೆಸಲಾಯಿತು. ಇವುಗಳಲ್ಲಿ ಮಕ್ಕಳು ಸೇರಿದಂತೆ ಹೆತ್ತವರು ಕೂಡಾ ಉತ್ಸಾಹದಿಂದ ಭಾಗವಹಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ರೂ 3000 ಮೌಲ್ಯದ ಕೋಬೆ ಸಿಝ್ಲರ್ ಡೈನಿಂಗ್ ವೋಚರ್ ಜೊತೆಗೆ ಹಲವು ಬಹುಮಾನಗಳನ್ನು ಮತ್ತು ಟ್ರೋಫಿಯನ್ನು ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ನೀಡಲಾಯಿತು.
ಶ್ರೀಚಕ್ರಪಾಣಿ ಕಲಾಶಾಲೆಯ ನಿರ್ದೇಶಕರಾದ ಸುರೇಶ್ ಕೆ ಪಾಂಡವರಕಲ್ಲು ವಿಜೇತರ ಆಯ್ಕೆಯನ್ನು ಮಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕದ್ರಿ ಪೊಲೀಸ್ ಠಾಣೆಯ ವೃತ್ತನಿರೀಕ್ಷಕರಾದ ಮಾರುತಿ ನಾಯಕ್, ಕೋಬೆ ಸಿಝ್ಲರ್ಸ್ ಇಂಥಾ ಒಂದು ಸ್ಪರ್ಧೆಯನ್ನು ಆಯೋಜಿಸಿರುವುದನ್ನು ಕಂಡು ಸಂತೋಷವಾಗುತ್ತಿದೆ. ಈ ರೀತಿಯ ಕಾರ್ಯಕ್ರಮಗಳು ಮಕ್ಕಳಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಮತ್ತು ಕ್ರಿಯಾಶೀಲತೆಯನ್ನು ಪ್ರದರ್ಶಿಸಲು ಅವಕಾಶ ನೀಡುತ್ತದೆ ಎಂದು ಹೇಳಿದರು.
ಡೈನರ್ಸ್ ಫ್ಯಾಕ್ಟರಿಯ ವ್ಯವಸ್ಥಾಪಕ ಜೊತೆಗಾರರಾದ ಹಾರಿಸ್ ಇಬ್ರಾಹಿಂ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನಸಮೂಹವನ್ನು ಕಂಡು ಬಹಳ ಸಂತೋಷವಾಯಿತು. ಕಾರ್ಯಕ್ರಮವನ್ನು ಆಯೋಜಿಸಿರುವ ರೀತಿ ನಮಗೆ ಬಹಳ ಖುಷಿ ನೀಡಿದೆ. ಮಕ್ಕಳು ಬಿಡಿಸಿದ ಚಿತ್ರಗಳು ಮತ್ತು ಹೆತ್ತವರು ನೀಡಿದ ಬೆಂಬಲವನ್ನು ಕಂಡು ವೈಯಕ್ತಿಕವಾಗಿ ನಾನು ಬಳ ಭಾವುಕನಾದೆ ಎಂದು ತಿಳಿಸಿದರು.
ಎಲ್ಲರಿಂದ ಪಡೆದ ಪ್ರೀತಿ ಮತ್ತು ಬೆಂಬಲಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆ. ಭವಿಷ್ಯದಲ್ಲಿ ಇನ್ನೂ ಹಲವು ಈ ರೀತಿಯ ನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ ಎಂದು ಡೈನರ್ಸ್ ಫ್ಯಾಕ್ಟರಿಯ ಜೊತೆಗಾರ ಮತ್ತು ಫಾರ್ಮ್‌ಬ್ಯಾಗ್‌ನ ನಿರ್ದೇಶಕ ರನೀಶ್ ಜೋಸೆಫ್ ತಿಳಿಸಿದರು.
ಡೈನರ್ಸ್ ಫ್ಯಾಕ್ಟರಿಯ ಮತ್ತೊರ್ವ ಜೊತೆಗಾರ ಕಿರಣ್ ಕುಮಾರ ಸ್ವಾಮಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಪ್ರಾಯೋಜಕರಾದ ಟ್ರೈಕಲರ್ ವೆಂಚರ್ಸ್, ಫುಡ್ ಪಾರ್ಟ್‌ನರ್ ಮ್ಯಾಕೇನ್ಸ್, ಹ್ಯಾಂಗ್ಯೋ, ಡಾಬರ್, ಫಾರ್ಮ್‌ಬ್ಯಾಗ್, ಎವ್ರಿಡೇ ಸೂಪರ್ ಮಾರ್ಕೆಟ್ ಮತ್ತು ರೇಡಿಯೊ ಪಾರ್ಟ್‌ನರ್ ರೇಡಿಯೊ ಮಿರ್ಚಿ, ಆನ್‌ಲೈನ್ ಪಾರ್ಟ್‌ನರ್ ದೈಜಿವರ್ಲ್ಡ್, ನ್ಯೂಸ್ ಪಾರ್ಟ್‌ನರ್ ವಾರ್ತಾಭಾರತಿ ಮತ್ತು ಆ್ಯಪ್ ಪಾರ್ಟ್‌ನರ್ ಒಲ್ಪ ಆ್ಯಪ್‌ಗೂ ಧನ್ಯವಾದ ಸಲ್ಲಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ: ಗ್ರೂಪ್ ಎ
ಪ್ರಥಮ ಸಿಂಚನ 3ನೆ ತರಗತಿ ಸಂತ ಅಲೋಶಿಯಸ್ ಶಾಲೆ
ದ್ವಿತೀಯ ಅಕ್ಷಜ್ 3ನೆ ತರಗತಿ ಎನ್‌ಐಟಿಕೆ ಶಾಲೆ
ತೃತೀಯ ಅನ್ವಿತ್ ಎಚ್ 3ನೆ ತರಗತಿ ಕೆನರಾ ಶಾಲೆ
ಗ್ರೂಪ್ ಬಿ
ಪ್ರಥಮ ಓಜಸ್ವಿ 5ನೆ ತರಗತಿ ಸಂತ ಅಲೋಶಿಯಸ್ ಶಾಲೆ
ದ್ವಿತೀಯ ಆಯುಷ್ ವೈ 6ನೆ ತರಗತಿ ಕೆನರಾ ಶಾಲೆ
ತೃತೀಯ ಆಕಾಶ್ 6ನೆ ತರಗತಿ ಚಿನ್ಮಯ ಪ್ರೌಢ ಶಾಲೆ
ಗ್ರೂಪ್ ಸಿ
ಪ್ರಥಮ ದೀರ್ಘ ಎಂ 10ನೇ ತರಗತಿ ಕೆನರಾ ಪ್ರೌಢ ಶಾಲೆ
ದ್ವಿತೀಯ ಅತುಲ್ ಶೇಟ್ 10ನೇ ತರಗತಿ ಕೆನರಾ ಪ್ರೌಢ ಶಾಲೆ
ತೃತೀಯ ಅನನ್ಯ ಎಚ್ 8ನೇ ತರಗತಿ ಕೆನರಾ ಉರ್ವಾ







